ಯುದ್ಧದ ವೇಳೆ ಗಡಿಯಲ್ಲಿ ಭಾರತದ ಸೈನಿಕರಿಗೆ ಚಹಾ, ಹಾಲು ಕೊಡುತ್ತಿದ್ದ 10 ವರ್ಷದ ಬಾಲಕನಿಗೆ ‘ರಾಷ್ಟ್ರೀಯ ಬಾಲ ಪುರಸ್ಕಾರ’ದ ಗೌರವ

ನವದೆಹಲಿ: ಭಾರತೀಯ ಸೇನಾಪಡೆಗೆ ನೆರವು ನೀಡುವ ಮೂಲಕ ಅದ್ಭುತ ಧೈರ್ಯ ಮತ್ತು ದೇಶಪ್ರೇಮ ಮೆರೆದ ಪಂಜಾಬಿನ ಫಿರೋಜ್‌ಪುರದ 10 ವರ್ಷದ ಬಾಲಕ ಶ್ರವಣ ಸಿಂಗ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ನೀಡಿ ಗೌರವಿಸಿದರು.
‘ಆಪರೇಷನ್ ಸಿಂಧೂರ’ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಅಪಾಯಗಳ ನಡುವೆಯೂ ನಿಯೋಜನೆಗೊಂಡಿದ್ದ ಭಾರತೀಯ ಯೋಧರಿಗೆ 5ನೇ ತರಗತಿ ವಿದ್ಯಾರ್ಥಿಯಾದ ಶ್ರವಣ ನಿರಂತರವಾಗಿ ಹಾಲು, ಚಹಾ, ಮಜ್ಜಿಗೆ ಮತ್ತು ಐಸ್ ಅನ್ನು ಪೂರೈಸುತ್ತಿದ್ದ. ಯುದ್ಧದಂತಹ ಅಪಾಯಕಾರಿ ಸನ್ನಿವೇಶವಿದ್ದರೂ ಎದೆಗುಂದದೆ, ಯೋಧರ ವಾಸ್ತವ್ಯಕ್ಕಾಗಿ ತನ್ನ ಮನೆಯನ್ನೇ ಬಿಟ್ಟುಕೊಡುವ ಇಚ್ಛೆಯನ್ನೂ ಈ ಬಾಲಕ ವ್ಯಕ್ತಪಡಿಸಿದ್ದ.

ತನ್ನ ಅನುಭವ ಹಂಚಿಕೊಂಡ ಶ್ರವಣ, “ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರʼ ಆರಂಭವಾದಾಗ ನಮ್ಮ ಗ್ರಾಮಕ್ಕೆ ಯೋಧರು ಬಂದರು. ಅವರಿಗೆ ಸೇವೆ ಮಾಡಬೇಕು ಎಂದು ನನಗೆ ಅನಿಸಿತು. ಈ ಗೌರವ ಸಿಗುತ್ತದೆ ಎಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ” ಎಂದು ಹರ್ಷ ವ್ಯಕ್ತಪಡಿಸಿದ್ದಾನೆ.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ, ಭಾರತವು ಪಾಕಿಸ್ತಾನ ಮತ್ತು ಪಿಒಕೆ (PoK) ನಲ್ಲಿನ 9 ಭಯೋತ್ಪಾದಕ ತಾಣಗಳ ಮೇಲೆ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ದಾಳಿ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಕುಟುಂಬದವರು ಸೇರಿದಂತೆ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು.

ಪ್ರಮುಖ ಸುದ್ದಿ :-   ಬಿಜೆಪಿ ಯುವ ಮೋರ್ಚಾಕ್ಕೆ ನೂತನ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ

ಈ ವರ್ಷ ಒಟ್ಟು 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 20 ಮಕ್ಕಳಿಗೆ ಅವರ ಅಸಾಧಾರಣ ಸಾಧನೆಗಾಗಿ (ಧೈರ್ಯ, ಸಮಾಜ ಸೇವೆ, ಕಲೆ, ವಿಜ್ಞಾನ ಮತ್ತು ಕ್ರೀಡೆ) ಈ ರಾಷ್ಟ್ರೀಯ ಗೌರವವನ್ನು ನೀಡಲಾಗಿದೆ.
2025 ರಲ್ಲಿ, ಭಾರತ ಸರ್ಕಾರವು ವಾರ್ಷಿಕವಾಗಿ ನೀಡುವ ಈ ಪ್ರತಿಷ್ಠಿತ ರಾಷ್ಟ್ರೀಯ ಗೌರವಕ್ಕೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 20 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಬಾಲ ಪುರಸ್ಕಾರವು ಭಾರತ ಸರ್ಕಾರವು ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ಸಾಮಾಜಿಕ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕ್ರೀಡೆಗಳಲ್ಲಿ ಅಸಾಧಾರಣ ಶ್ರೇಷ್ಠತೆಗಾಗಿ ಮಕ್ಕಳಿಗೆ ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಗೌರವವಾಗಿದೆ.

ಪ್ರಮುಖ ಸುದ್ದಿ :-   ಸದ್ಯಕ್ಕೆ ವಿರಾಮ : ಪ್ರತಿಭಟನೆಗೆ ಬ್ರೇಕ್ ನೀಡುವಂತೆ ಸಿಜೆಪಿ ಬೆಂಬಲಿಗರಿಗೆ ದೀಪ್ಕೆ ಸಂದೇಶ ನೀಡಲು ಕಾರಣವೇನು ?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement