ನವದೆಹಲಿ: ಅಂತರಾಷ್ಟ್ರೀಯ ಹಣಕಾಸು ನಿಧಿ (IMF) 2026ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 7.3ಕ್ಕೆ ಏರಿಸಿದೆ. ಭಾರತದ ಬಲಿಷ್ಠ ಆರ್ಥಿಕ ವೇಗವನ್ನು ಗಮನದಲ್ಲಿಟ್ಟುಕೊಂಡು ಈ ಹಿಂದಿನ ಅಂದಾಜಿಗಿಂತ ಶೇ. 0.7 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಐಎಂಎಫ್ ತಿಳಿಸಿದೆ.
2026ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (GDP) ಶೇ. 7.3 ರಷ್ಟು ಬೆಳವಣಿಗೆ ಕಾಣಲಿದೆ. ಆದರೆ, ನಂತರದ ಎರಡು ವರ್ಷಗಳಲ್ಲಿ ಇದು ಶೇ. 6.4 ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. “ಭಾರತವು ವಿಶ್ವದ ಪ್ರಮುಖ ಬೆಳವಣಿಗೆಯ ಎಂಜಿನ್ ಆಗಿದೆ” ಎಂದು ಐಎಂಎಫ್ ಸಂವಹನ ವಿಭಾಗದ ನಿರ್ದೇಶಕಿ ಜೂಲಿ ಕೋಜಾಕ್ ಬಣ್ಣಿಸಿದ್ದಾರೆ.
ಮೂರನೇ ತ್ರೈಮಾಸಿಕದಲ್ಲಿ ಕಂಡುಬಂದ ನಿರೀಕ್ಷೆಗಿಂತ ಹೆಚ್ಚಿನ ಸುಧಾರಣೆ ಮತ್ತು ನಾಲ್ಕನೇ ತ್ರೈಮಾಸಿಕದ ಜಿಡಿಪಿಯ ಬಲಿಷ್ಠ ವೇಗವು ಈ ಏರಿಕೆಗೆ ಕಾರಣವಾಗಿದೆ.
ಜಾಗತಿಕ ಆರ್ಥಿಕತೆಯು 2026 ರಲ್ಲಿ ಶೇ. 3.3 ಮತ್ತು 2027 ರಲ್ಲಿ ಶೇ. 3.2 ರಷ್ಟು ಸ್ಥಿರವಾಗಿರಲಿದೆ ಎಂದು ಅಂದಾಜಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ