ದಾವಣಗೆರೆ: ಮದುವೆಯಾಗಿ ಕೇವಲ 45 ದಿನಕ್ಕೆ ಪ್ರಿಯಕರನೊಂದಿಗೆ ಪತ್ನಿ ಓಡಿ ಹೋಗಿದ್ದರಿಂದ ಮನನೊಂದು ಆಕೆಯ ಪತಿ ಹಾಗೂ ಮದುವೆ ಮಾಡಿಸಿದ್ದ ಯುವತಿಯ ಸೋದರಮಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಗುಮ್ಮನೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಹರೀಶ (30) ಮತ್ತು ಯುವತಿಯ ಸೋದರ ಮಾವ ರುದ್ರೇಶ ಎಂದು ಗುರುತಿಸಲಾಗಿದೆ. 45 ದಿನಗಳ ಹಿಂದೆ ಹರೀಶ ಅವರ ಮದುವೆ ಹುಲಿಕಟ್ಟಿ ಗ್ರಾಮದ ಸರಸ್ವತಿ ಎಂಬ ಯುವತಿ ಜೊತೆ ನಡೆದಿತ್ತು ಎಂದು ಹೇಳಲಾಗಿದೆ. ಆದರೆ, ಯುವತಿ ಆಕೆಯ ಪ್ರೇಮಿ ಜೊತೆ ಓಡಿ ಹೋದ ಕಾರಣ ಹರೀಶ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳದಲ್ಲಿ ಎರಡು ಪುಟಗಳ ಡೆತ್ನೋಟ್ ಸಿಕ್ಕಿದೆ. ಡೆತ್ನೋಟ್ನಲ್ಲಿ ತನ್ನ ಹೆಂಡತಿ ಬೇರೊಬ್ಬನ ಜೊತೆ ಪರಾರಿಯಾಗಿರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ಸಾವಿಗೆ ಹೆಂಡತಿ, ಅತ್ತೆ, ಮಾವ ಕಾರಣ ಎಂದು ಆರೋಪಿಸಿದ್ದಾರೆ.
ಹರೀಶ ಸಾವಿನ ಸುದ್ದಿ ಕೇಳಿದ ಯುವತಿ ಸೋದರ ಮಾವ ರುದ್ರೇಶ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾನು ಮಾಡಿದ ತಪ್ಪಿಗೆ ಹರೀಶ ಮೃತಪಟ್ಟ ಎಂದು ತೀವ್ರವಾಗಿ ನೊಂದ ಅವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರೇಶ ಅವರೇ ಮುಂದಾಗಿ ಮದುವೆ ಮಾಡಿಸಿದ್ದರು ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ