ಭಾರತದಲ್ಲಿ ಕೆಲಕಾಲ ಸ್ಥಗಿತಗೊಂಡ X (ಟ್ವಿಟರ್) ಸೇವೆ: ಪರದಾಡಿದ ಬಳಕೆದಾರರು

ನವದೆಹಲಿ: ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಮೈಕ್ರೋಬ್ಲಾಗಿಂಗ್ ತಾಣ X.com, ಸೋಮವಾರ ಸಂಜೆ ಭಾರತದಾದ್ಯಂತ ಕೆಲಕಾಲ ಸ್ಥಗಿತಗೊಂಡಿತ್ತು. ಭಾರತೀಯ ಕಾಲಮಾನ ಸಂಜೆ 7:00 ಗಂಟೆಯಿಂದ 7:30ರವರೆಗೆ ಸುಮಾರು ಅರ್ಧಗಂಟೆಗಳ ಕಾಲ ಬಳಕೆದಾರರು ತಾಂತ್ರಿಕ ವ್ಯತ್ಯಯ ಎದುರಿಸಿದರು.
‘ಡೌನ್‌ ಡಿಟೆಕ್ಟರ್’ (DownDetector) ವರದಿಯ ಪ್ರಕಾರ, ಸಂಜೆ ಏಳು ಗಂಟೆಯ ಸುಮಾರಿಗೆ ಸಾವಿರಾರು ಬಳಕೆದಾರರು ಏಕಾಏಕಿ ದೂರುಗಳನ್ನು ದಾಖಲಿಸಿದ್ದಾರೆ. ಬಳಕೆದಾರರಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹೋಮ್‌ಪೇಜ್ ಲೋಡ್ ಆಗುತ್ತಿರಲಿಲ್ಲ ಮತ್ತು ಫೀಡ್‌ಗಳು ರಿಫ್ರೆಶ್ ಆಗುತ್ತಿರಲಿಲ್ಲ ಎಂದು ವರದಿ ಮಾಡಿದ್ದಾರೆ.
ಮೊಬೈಲ್ ಆಪ್ ಮತ್ತು ವೆಬ್‌ಸೈಟ್ ಎರಡರಲ್ಲೂ ಕೇವಲ ಬಿಳಿ ಪರದೆ (Blank Screen) ಕಾಣಿಸಿಕೊಳ್ಳುತ್ತಿತ್ತು. ಸಂಜೆ 7:30ರ ನಂತರ ಸೇವೆಗಳು ಪುನಃ ಆರಂಭವಾಗಿದ್ದು, ಸದ್ಯ ಸೈಟ್ ಸುಸ್ಥಿತಿಯಲ್ಲಿದೆ. ಆದರೆ ಈ ವ್ಯತ್ಯಯಕ್ಕೆ ನಿಖರ ಕಾರಣವೇನು ಎಂಬುದನ್ನು ಸಂಸ್ಥೆಯು ಅಧಿಕೃತವಾಗಿ ಇನ್ನು ಬಹಿರಂಗಪಡಿಸಿಲ್ಲ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement