ಉಡುಪಿ : ರಸ್ತೆಯಲ್ಲೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಉಡುಪಿ : ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯ ಜನನಿಬಿಡ ಕಲ್ಸಂಕ ವೃತ್ತದ ಬಳಿ ಭಾನುವಾರ ಸಂಜೆ ಸಂಭವಿಸಿದೆ ಎಂದು ವರದಿಯಾಗಿದೆ. ಯುವಕನನ್ನು ತಕ್ಷಣವೇ ರಕ್ಷಿಸಲಾಗಿದೆ.
ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಬಂದಿದ್ದ ವ್ಯಕ್ತಿ, ಕಲ್ಸಂಕ ವೃತ್ತದ ಬಳಿ ಕಿರುಚಾಡುತ್ತ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಯೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಆತನ ಕೈಯಲ್ಲಿದ್ದ  ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡಿದ್ದರು.

ಆದರೆ, ಆತ ಮತ್ತೆ ಪೆಟ್ರೋಲ್ ತುಂಬಿದ ಮತ್ತೊಂದು ಬಾಟಲಿಯೊಂದಿಗೆ ಹಿಂತಿರುಗಿ ಬಂದು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಕೂಗಾಡಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ. ಆತ ಪಾನಮತ್ತನಾಗಿದ್ದನೋ ಅಥವಾ ಮಾನಸಿಕ ಅಸ್ವಸ್ಥನೋ ಎಂಬುದು ತಿಳಿದುಬಂದಿಲ್ಲ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಗದಗ ಮೂಲದವನೆಂದು ಹೇಳಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement