ಟಿ20 ವಿಶ್ವಕಪ್ ; ಜಿಂಬಾಬ್ವೆ ವಿರುದ್ಧ ಭರ್ಜರಿಯಾಗಿ ಗೆದ್ದ ನಂತರ ಈಗ ಭಾರತದ ಸೆಮಿಫೈನಲ್ ಪ್ರವೇಶದ ಲೆಕ್ಕಾಚಾರ ಏನು..?

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯಕುಮಾರ ಯಾದವ್ ನಾಯಕತ್ವದ ಭಾರತ ತಂಡವು ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಫಾರ್ಮ್‌ಗೆ ಮರಳಿದೆ. ಈ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಪ್ರವೇಶಿಸುವ ಆಸೆ ಮತ್ತೆ ಚಿಗುರಿದೆ.
ಜಿಂಬಾವ್ವೆ ವಿರುದ್ಧ ಮೊದಲು ಬ್ಯಾಟ್ ಮಾಡಿದ ಭಾರತದ ತಂಡವು ಅಭಿಷೇಕ ಶರ್ಮಾ (55) ಮತ್ತು ಹಾರ್ದಿಕ್ ಪಾಂಡ್ಯ (50*) ಅವರ ಸ್ಫೋಟಕ ಆಟದಿಂದ 20 ಓವರ್‌ಗಳಲ್ಲಿ 256/4 ರನ್ ಗಳ ಭರ್ಜರಿ ಮೊತ್ತ ಗಳಿಸಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಭಾರತದ ಗರಿಷ್ಠ ಮೊತ್ತವಾಗಿದೆ. ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ದಿಟ್ಟ ಹೋರಾಟ ನೀಡಿದರೂ, ನಿಗದಿತ ಓವರ್‌ಗಳಲ್ಲಿ ಗುರಿ ತಲುಪಲಾಗದೆ 72 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಸೂಪರ್‌  8ರ ಹಂತದ ಗ್ರೂಪ್ 1 ರಲ್ಲಿ ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ. ಈ ಗುಂಪನಿಂದ ಸೆಮಿ ಫೈನಲ್‌ ಪ್ರವೇಶಿಸುವ ಎರಡನೇ ತಂಡಕ್ಕಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.
ಪ್ರಸ್ತುತ ಅಂಕ ಪಟ್ಟಿ (ಸೂಪರ್ 8 – ಗ್ರೂಪ್ 1)
ಸ್ಥಾನ ತಂಡ           ಪಂದ್ಯ       ಅಂಕ       ನೆಟ್ ರನ್ ರೇಟ್ (NRR)
1 ದಕ್ಷಿಣ ಆಫ್ರಿಕಾ     2                  4         +2.890
2 ವೆಸ್ಟ್ ಇಂಡೀಸ್     2                  2         +1.791
3 ಭಾರತ                 2                  2         -0.100
4 ಜಿಂಬಾಬ್ವೆ            2                  0         -4.475
ಸೆಮಿಫೈನಲ್ ಹಾದಿ ಹೇಗೆ?
ಮಾರ್ಚ್ 1 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ನಿರ್ಣಾಯಕವಾಗಿದೆ:
ಸನ್ನಿವೇಶ 1: ಭಾರತವು ವೆಸ್ಟ್ ಇಂಡೀಸ್ ತಂಡವನ್ನು ಯಾವುದೇ ಅಂತರದಿಂದ ಸೋಲಿಸಿದರೂ ಭಾರತವು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸುತ್ತದೆ. ಯಾಕೆಂದರೆ ಗೆದ್ದರೆ ಭಾರತವು 4 ಅಂಕಗಳನ್ನು ಪಡೆಯಲಿದೆ. ವೆಸ್ಟ್‌ ಇಂಡೀಸ್‌ 2 ಅಂಕಕ್ಕೆ ಸೀಮಿತವಾಗುತ್ತದೆ.
ಸನ್ನಿವೇಶ 2: ಒಂದು ವೇಳೆ ವೆಸ್ಟ್ ಇಂಡೀಸ್ ಗೆದ್ದರೆ ಅಥವಾ ಪಂದ್ಯವು ಮಳೆಯಿಂದಾಗಿ ರದ್ದಾದರೆ (No-Result), ಉತ್ತಮ ರನ್ ರೇಟ್ ಹೊಂದಿರುವ ವೆಸ್ಟ್ ಇಂಡೀಸ್ ಮುಂದಿನ ಹಂತಕ್ಕೆ ಹೋಗಲಿದೆ. ಯಾಕೆಂದರೆ ವೆಸ್ಟ್‌ ಇಂಡೀಸ್‌ ತಂಡದ ರನ್‌ ರೇಟ್‌ ಭಾರತಕ್ಕಿಂತ ಉತ್ತಮವಾಗಿದೆ. ಹೀಗಾಗಿ ಭಾರತವು ಸೆಮಿ ಫೈನಲ್‌ ಪ್ರವೇಶಿಸಬೇಕಾದರೆ ಅದು ಗೆಲ್ಲಲೇಬೇಕು. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ, ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಅಂಕಗಳು ಸಮನಾಗುತ್ತದೆ. ಆದರೆ ನೆಟ್‌ ರನ್‌ ರೇಟ್‌ ಆಧಾರದಲ್ಲಿ ವೆಸ್ಟ್‌ ಇಂಡೀಸ್‌ ಸೆಮಿ ಫೈನಲ್‌ ಪ್ರವೇಶಿಸಲಿದೆ. ಹೀಗಾಗಿ ಭಾರತಕ್ಕೆ ಗೆಲುವು ಅನಿವಾರ್ಯ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement