
ಫೆಬ್ರವರಿ 28 ರಂದು ನಡೆದ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಮೃತಪಟ್ಟಿದ್ದು, ಅದೇ ದಾಳಿಯಲ್ಲಿ ಅವರ ಪುತ್ರ ಹಾಗೂ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕೂಡ ಗಾಯಗೊಂಡಿದ್ದಾರೆ ಎಂದು ಸೈಪ್ರಸ್‌ನಲ್ಲಿರುವ ಇರಾನ್ ರಾಯಭಾರಿ ಬುಧವಾರ ‘ದಿ ಗಾರ್ಡಿಯನ್’ ಪತ್ರಿಕೆಗೆ ತಿಳಿಸಿದ್ದಾರೆ.
ರಾಯಭಾರಿ ಅಲಿರೆಜಾ ಸಲೇರಿಯನ್ ಮಾತನಾಡಿ, “ಬಾಂಬ್ ದಾಳಿ ನಡೆದ ಸಮಯದಲ್ಲಿ ಅವರು (ಮೊಜ್ತಬಾ) ಅಲ್ಲೇ ಇದ್ದರು ಮತ್ತು ಗಾಯಗೊಂಡಿದ್ದಾರೆ. ಆದರೆ ವಿದೇಶಿ ಸುದ್ದ ಮಾಧ್ಯಮಗಳಲ್ಲಿ ಇದು ಎಲ್ಲಿಯೂ ವರದಿಯಾಗಿರುವುದನ್ನು ನಾನು ಕಂಡಿಲ್ಲ,” ಎಂದಿದ್ದಾರೆ.
“ಅವರ ಕಾಲುಗಳು, ಕೈ ಮತ್ತು ಭುಜಕ್ಕೆ ಗಾಯಗಳಾಗಿವೆ ಎಂದು ನಾನು ಕೇಳಿದ್ದೇನೆ… ಅವರು ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ,” ಎಂದು ರಾಯಭಾರಿ ತಿಳಿಸಿದ್ದಾರೆ. ಇರಾನ್‌ನ ಈ ಧರ್ಮಗುರು ಯಾಕೆ ಬೆಂಬಲಿಗರ ಮುಂದೆ ಕಾಣಿಸಿಕೊಳ್ಳುತ್ತಿಲ್ಲ ಅಥವಾ ವಿಡಿಯೋ ಸಂದೇಶವನ್ನೂ ಹಂಚಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಮೇನಿ ಅವರು ಸದ್ಯದ ಪರಿಸ್ಥಿತಿಯಲ್ಲಿ “ಭಾಷಣ ಮಾಡುವಂತಹ ಸ್ಥಿತಿಯಲ್ಲಿಲ್ಲ” ಎಂದು ವಿವರಿಸಿದ್ದಾರೆ.

ಕುಟುಂಬದವರ ಸಾವು
ತೆಹ್ರಾನ್‌ನಲ್ಲಿರುವ ಅಧ್ಯಕ್ಷೀಯ ಸಂಕೀರ್ಣದ ಮೇಲೆ ನಡೆದ ದಾಳಿಯ ಮೊದಲ ದಿನವೇ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ದಾಳಿ ನಡೆದ ಸಂದರ್ಭದಲ್ಲಿ ಅಲಿ ಖಮೇನಿ ಅವರು ತಮ್ಮ ಕುಟುಂಬದವರಾದ ಮೊಜ್ತಬಾ ಅವರ ಪತ್ನಿ ಮತ್ತು ಮಗನ ಜೊತೆಗಿದ್ದರು. ದಾಳಿಯಲ್ಲಿ ಅವರೆಲ್ಲರೂ ಸಾವಿಗೀಡಾಗಿದ್ದಾರೆ.
“ದಿವಂಗತ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ತಮ್ಮ ಪತ್ನಿ, ಮಗಳು, ಅಳಿಯ ಮತ್ತು ಮಗಳ 14 ತಿಂಗಳ ಮಗುವಿನೊಂದಿಗೆ ಹತರಾದರು,” ಎಂದು ಸಲೇರಿಯನ್ ಹೇಳಿದ್ದಾರೆ. ಅವರು ಅಧ್ಯಕ್ಷೀಯ ಕಚೇರಿಯ ಸಮೀಪವಿರುವ ತಮ್ಮ ಮನೆಯ ಒಳಗಿದ್ದರು. ಅಂದು ಅಲ್ಲಿಗೆ ಉನ್ನತ ಕಮಾಂಡರ್‌ಗಳನ್ನೂ ಆಹ್ವಾನಿಸಲಾಗಿದ್ದರಿಂದ ಅವರೂ ಕೂಡ ಈ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಅಯತೊಲ್ಲಾ ಅಲಿ ಖಮೇನಿ ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಅವರು ತಾವು ಕೆಲಸ ಮಾಡುವ ಸ್ಥಳದಲ್ಲೇ ವಾಸವಾಗಿದ್ದರು.
‘ಗಾರ್ಡಿಯನ್’ ವರದಿಯ ಪ್ರಕಾರ, ನೂತನ ನಾಯಕನ ಮೇಲೆ ಹತ್ಯೆಯ ಪ್ರಯತ್ನ ನಡೆಯಬಹುದು ಎಂಬ ಭೀತಿಯಿಂದ ಗುಪ್ತಚರ ಸಂಸ್ಥೆಗಳು ಅವರನ್ನು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ದೂರ ಇಟ್ಟಿವೆ ಎಂದು ನಂಬಲಾಗಿದೆ.
ಮೊಜ್ತಬಾ ಖಮೇನಿ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿಕೆ
ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಇನ್ನು ಮುಂದೆ “ಶಾಂತಿಯಿಂದ ಬದುಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಅಲಿ ಖಮೇನಿಯ ಎರಡನೇ ಮಗನನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಇರಾನ್‌ನ ಈ ನಾಯಕತ್ವದ ಆಯ್ಕೆಯಿಂದ ತಮಗೆ ಸಂತೋಷವಾಗಿಲ್ಲ ಎಂದು ತಿಳಿಸಿದ್ದಾರೆ. “ಅವರು ಶಾಂತಿಯಿಂದ ಬದುಕಬಲ್ಲರು ಎಂದು ನಾನು ನಂಬುವುದಿಲ್ಲ,” ಎಂದು ಟ್ರಂಪ್ ಹೇಳಿದ್ದಾರೆ.
ಮೊಜ್ತಬಾ ಖಮೇನಿ ಅವರ ನೇಮಕಕ್ಕೂ ಮೊದಲು ಟ್ರಂಪ್ ಅವರು, ಈ ಹಿಂದೆ ವೆನೆಜುವೆಲಾದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಿದಂತೆಯೇ, ಇರಾನ್‌ನ ಮುಂದಿನ ನಾಯಕನನ್ನು ಆಯ್ಕೆ ಮಾಡುವಲ್ಲಿ ಅಮೆರಿಕದ ಪಾತ್ರವೂ ಇರಬೇಕು ಎಂದು ಪ್ರತಿಪಾದಿಸಿದ್ದರು


ನಿಮ್ಮ ಕಾಮೆಂಟ್ ಬರೆಯಿರಿ