ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆ ಗುಡ್ಡದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬೆಂಕಿ ವ್ಯಾಪಿಸಿದ್ದು ಸಸ್ಯ ಸಂಕುಲಗಳು ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ಶುಕ್ರವಾರ ಅಪರಾಹ್ನದ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದೆ.
ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿರುವ ಕಡ್ಲೆ ಗುಡ್ಡದಲ್ಲಿ ವ್ಯಾಪಿಸಿರುವ ಬೆಂಕಿ ನಂದಿಸುವುದು ಸುಲಭವಲ್ಲ. ಅರಬ್ಬೀ ಸಮುದ್ರದ ಪಶ್ಚಿಮ ದಿಕ್ಕಿನಿಂದ ಬೆಂಕಿ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ. ಬೇಸಿಗೆಯಾಗಿದ್ದರಿಂದ ಯಾರೋ ಸಿಗರೇಟು ಅಥವಾ ಬೀಡಿ ಸೇದಿ ಎಸೆದದ್ದು ಬೆಂಕಿ ಹೊತ್ತಿಕೊಂಡು ಅರಣ್ಯ ಪ್ರದೇಶಕ್ಕೆ ವ್ಯಾಪಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ