20 ಅಡಿ ಆಳದ ಬಾವಿಗೆ ಬಿದ್ದು 3 ದಿನದಿಂದ ಜೀವ ಹಿಡಿದುಕೊಂಡಿದ್ದ ವೃದ್ಧ ; ಕಾಪಾಡಿದ್ದು ಗ್ಯಾಸ್‌ ಸಿಲಿಂಡರ್‌…!

ಉಡುಪಿ : ಬಾವಿಯ ಪಂಪ್ ಸರಿಪಡಿಸಲು ಹೋಗಿ ಬಾವಿಗೆ ಬಿದ್ದ ವೃದ್ಧರೊಬ್ಬರು (senior citizen) ಸತತ ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ ಎಂದು ವರದಿಯಗಿದೆ.
ಗ್ಯಾಸ್‌ ಸಿಲಿಂಡರ್ ಒಟಿಪಿಯ ಕಾರಣದಿಂದ ಬಾವಿಗೆ ಬಿದ್ದ ವೃದ್ಧರು ಪತ್ತೆಯಾಗಿದ್ದು, ಆದಿ ಉಡುಪಿಯ ಕಂಬಳಕಟ್ಟೆಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ.
ಮನೆಯಲ್ಲಿ ಒಬ್ಬರೇ ಇರುವ ಕಂಬಳಕಟ್ಟೆಯ ನಿವಾಸಿ ಶ್ರೀನಿವಾಸ ಆಚಾರ್ಯ (62) ಶನಿವಾರ ಸಂಜೆ ತಮ್ಮ ಮನೆಯ ಮುಂದಿನ ಬಾವಿಯ ಪಂಪ್ ಸರಿಪಡಿಸಲು ಮುಂದಾಗಿದ್ದರು. 20 ಅಡಿ ಆಳದ ಬಾವಿಯ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಎಳೆಯುವಾಗ ಅದು ತುಂಡಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಆಚಾರ್ಯರು ಬಾವಿಯ ನೀರಿಗೆ ಬಿದ್ದಿದ್ದಾರೆ. ಒಂಟಿಯಾಗಿ ವಾಸವಿದ್ದ ಅವರ ಕಿರುಚಾಟ ಅಕ್ಕಪಕ್ಕದವರಿಗೆ ಕೇಳಿಸಲಿಲ್ಲ.
ಅದೃಷ್ಟವಶಾತ್ ಕೈಗೆ ಸಿಕ್ಕ ಫುಟ್‌ಬಾಲ್ ಪೈಪ್ ಹಾಗೂ ಹಳೆಯ ಹಗ್ಗವನ್ನೇ ಹಿಡಿದುಕೊಂಡು ಮೂರು ದಿನಗಳ ಕಾಲ ನೀರಿನಲ್ಲೇ ಇದ್ದಾರೆ.

ಆಗ ಅವರ ನೆರವಿಗೆ ಬಂದಿದ್ದುಅವರು ಬುಕ್ ಮಾಡಿದ್ದ ಒಂದು ಗ್ಯಾಸ್ ಸಿಲಿಂಡರ್. ಆಚಾರ್ಯರು ತಮ್ಮ ಪರಿಚಯಸ್ಥ ಗಣೇಶ ಎಂಬವರಿಂದ ಗ್ಯಾಸ್ ಪಡೆದಿದ್ದರು. ತಾನು ಬುಕ್ ಮಾಡಿದ ಸಿಲಿಂಡರ್ ಬಂದ ಮೇಲೆ ಅದನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಆದರೆ, ಮೂರು ದಿನಗಳಾದರೂ ಶ್ರೀನಿವಾಸ ಅವರು ಫೋನ್ ಕರೆಗೆ ಸಿಗದಿದ್ದಾಗ ಗಣೇಶ ಅವರಿಗೆ ಅನುಮಾನ ಬಂದಿದೆ. ಕೂಡಲೇ ಗ್ಯಾಸ್ ಏಜೆನ್ಸಿಗೆಅವರನ್ನು ಸಂಪರ್ಕಿಸಿದಾಗ, ನಾವು ಅವರ ಮನೆಗೆ ಹೋಗಿದ್ದೆವು. ಮನೆಯಲ್ಲಿ ಅವರು ಇರಲಿಲ್ಲ ಎಂದು ಹೇಳಿದ್ದಾರೆ. ಆತಂಕಗೊಂಡ ಗಣೇಶ ಅವರು, ಅಕ್ಕಪಕ್ಕದವರಿಗೆ ಈ ಬಗ್ಗೆ ತಿಳಿಸಿ ಪರಿಶೀಲಿಸಲು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

ಅಕ್ಕಪಕ್ಕದವರು ಹುಡುಕಾಟ ನಡೆಸಿ ನಂತರ ಬಾವಿಯ ಹತ್ತಿರ ಹೋಗಿ ನೋಡಿದಾಗ ಆಚಾರ್ಯರು ನಿತ್ರಾಣ ಸ್ಥಿತಿಯಲ್ಲಿ ಬಾವಿಯೊಳಗೆ ಪತ್ತೆಯಾಗಿದ್ದಾರೆ.
ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಮತ್ತು ಏಣಿಯ ಸಹಾಯದಿಂದ ಬಾವಿಗಿಳಿದು ಸಂಪೂರ್ಣ ನಿತ್ರಾಣಗೊಂಡಿದ್ದ ಶ್ರೀನಿವಾಸ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ತಂದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

5 / 5. 5

ಶೇರ್ ಮಾಡಿ :

  1. Devarasam

    Such a great concern of the gas cylinder supplier Mr Ganesh.God bless

ನಿಮ್ಮ ಕಾಮೆಂಟ್ ಬರೆಯಿರಿ

advertisement