ಕೋಲ್ಕತ್ತಾ/ಚೆನ್ನೈ : ಪಶ್ಚಿಮ ಬಂಗಾಳದ ಮೊದಲನೇ ಹಂತದ ಮತದಾನ ಮತ್ತು ತಮಿಳುನಾಡು ವಿಧಾನಸಭೆಯ ಮತದಾನ ಪೂರ್ಣಗೊಂಡಿದೆ. ಎರಡೂ ರಾಜ್ಯಗಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾರರು ಹಕ್ಕುಚಲಾಯಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇ. 92.03ರಷ್ಟು ಮತದಾನವಾಗಿದ್ದು, ಸ್ವಾತಂತ್ರ್ಯದ ನಂತರ ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನವಾಗಿರುವುದುಈ ಬಾರಿ ಎನ್ನುವುದು ವಿಶೇಷ. ತಮಿಳುನಾಡಿನಲ್ಲಿ ಶೇ. 84ಕ್ಕಿಂತ ಹೆಚ್ಚು ಮತದಾನವಾಗಿದೆ.
ಪಶ್ಚಿಮ ಬಂಗಾಳದ ರಘುನಾಥಗಂಜ್ನಲ್ಲಿ ಅತೀ ಹೆಚ್ಚು ಶೇ. 96.35ರಷ್ಟು ಮತದಾನವಾಗಿದ್ದರೆ ಸಮ್ಸರ್ಗಂಜ್ನಲ್ಲಿ ಶೇ. 95.89ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ನೌಡಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಎಯುಜೆಪಿ ಬೆಂಬಲಿಗರ ಮಧ್ಯೆ ಪರಸ್ಪರ ಘರ್ಷಣೆ ನಡೆದಿದೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ತಮಿಳುನಾಡು: ಶೇ. 84ಕ್ಕಿಂತ ಹೆಚ್ಚು ಮತದಾನ, ಕರೂರ್ನಲ್ಲಿ ಅತಿಹೆಚ್ಚು
2026ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಮತದಾನದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಹಲವು ಜಿಲ್ಲೆಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದೆ. ಚುನಾವಣಾ ಆಯೋಗದ ಪ್ರಕಾರ, ರಾಜ್ಯವು ಒಟ್ಟು ಶೇ. 84.29ರಷ್ಟು ಮತದಾನವನ್ನು ದಾಖಲಿಸಿದ್ದು, ಸ್ವಾತಂತ್ರ್ಯದ ನಂತರದ ಅತ್ಯಧಿಕ ಮತದಾನ ವಾಗಿದೆ ಎನ್ನಲಾಗಿದೆ.
ಅಂಕಿ-ಅಂಶಗಳ ಪ್ರಕಾರ, ಕರೂರ್ ಶೇ. 89.32ರಷ್ಟು ಮತದಾನದೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. ಸೇಲಂ ಶೇ. 88.02, ಈರೋಡ್ ಶೇ. 87.59, ಧರ್ಮಪುರಿ ಶೇ. 87.28 ಮತ್ತು ತಿರುಪ್ಪೂರಿನಲ್ಲಿ ಶೇ. 86.33ರಷ್ಟು ಮತದಾನವಾಗಿದೆ.ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಿತು. ಎರಡು ರಾಜ್ಯಗಳಲ್ಲಿ ಮೇ 4ರಂದು ಮತ ಎಣಿಕೆ ನಡೆಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ