ಭಾರತದ ಬತ್ತಳಿಕೆಗೆ ಮತ್ತೊಂದು ‘ಬ್ರಹ್ಮಾಸ್ತ್ರ’: ಮೇ ವೇಳೆಗೆ ಬರಲಿದೆ ರಷ್ಯಾದ 4ನೇ S-400 ಕ್ಷಿಪಣಿ ವ್ಯವಸ್ಥೆ

ನವದೆಹಲಿ: ‘ಆಪರೇಷನ್ ಸಿಂಧೂರʼದ ವರ್ಷಾಚರಣೆ ಭಾರತದ ರಕ್ಷಣಾ ವಲಯಕ್ಕೆ ದೊಡ್ಡ ಬಲ ಸಿಕ್ಕಿದೆ. ರಷ್ಯಾದ ಅತ್ಯಾಧುನಿಕ S-400 ವಾಯು ರಕ್ಷಣಾ ವ್ಯವಸ್ಥೆಯ ನಾಲ್ಕನೇ ಘಟಕವು ಭಾರತಕ್ಕೆ ಪ್ರಯಾಣ ಬೆಳೆಸಿದ್ದು, ಮೇ ಮಧ್ಯಭಾಗದ ವೇಳೆಗೆ ಭಾರತದ ಬಂದರು ತಲುಪುವ ನಿರೀಕ್ಷೆಯಿದೆ.
ಅಲ್ಲದೆ, ‘ಆಪರೇಷನ್ ಸಿಂಧೂರʼದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಐದನೇ S-400 ವ್ಯವಸ್ಥೆಯು ಇದೇ ವರ್ಷದ ನವೆಂಬರ್‌ನಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ. ಹೊಸದಾಗಿ ಬರುತ್ತಿರುವ ಈ 4ನೇ ವ್ಯವಸ್ಥೆಯನ್ನು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನ ಸೆಕ್ಟರ್‌ನಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಈ ವ್ಯವಸ್ಥೆಯು ಸುಮಾರು 400 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಪಾಕಿಸ್ತಾನದ ಸಿಂಧೂ ನದಿಯ ಪೂರ್ವ ಭಾಗದ ಯಾವುದೇ ವೈಮಾನಿಕ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಆಪರೇಷನ್ ಸಿಂಧೂರ ಮತ್ತು S-400 ಅಬ್ಬರ
ವರದಿಗಳ ಪ್ರಕಾರ, ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಒಟ್ಟು 11 ದೀರ್ಘ ವ್ಯಾಪ್ತಿಯ S-400 ಕ್ಷಿಪಣಿಗಳನ್ನು ಉಡಾಯಿಸಿತ್ತು. ಇವು ಪಾಕಿಸ್ತಾನದ ಫೈಟರ್ ಜೆಟ್‌ಗಳು, ವೈಮಾನಿಕ ಮುನ್ನೆಚ್ಚರಿಕೆ ವ್ಯವಸ್ಥೆಗಳು (AEW&C) ಮತ್ತು ಸಾರಿಗೆ ವಿಮಾನಗಳನ್ನು ಯಶಸ್ವಿಯಾಗಿ ನಾಶಪಡಿಸಿದ್ದವು. S-400 ಭೀತಿಯಿಂದಾಗಿ ಪಾಕಿಸ್ತಾನವು ತನ್ನ ಎಲ್ಲಾ ಯುದ್ಧ ವಿಮಾನಗಳನ್ನು ಗಡಿಯಿಂದ ದೂರವಿರುವ ಕ್ವೆಟ್ಟಾ ಮತ್ತು ಪೇಶಾವರ ವಾಯುನೆಲೆಗಳಿಗೆ ಸ್ಥಳಾಂತರಿಸುವಂತಾಗಿತ್ತು.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

ಭವಿಷ್ಯದ ರಕ್ಷಣಾ ಯೋಜನೆಗಳು
ಮೋದಿ ಸರ್ಕಾರವು ಈಗಾಗಲೇ ಇನ್ನೂ ಐದು S-400 ವ್ಯವಸ್ಥೆಗಳ ಖರೀದಿಗೆ ಹಸಿರು ನಿಶಾನೆ ತೋರಿಸಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಬಳಸಲಾದ ಕ್ಷಿಪಣಿಗಳ ಕೊರತೆ ನೀಗಿಸಲು 280 ಹೊಸ ಕ್ಷಿಪಣಿಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ.
ಪ್ಯಾಂಟ್ಸಿರ್ (Pantsir) ವ್ಯವಸ್ಥೆ: S-400 ಘಟಕಗಳನ್ನು ಡ್ರೋನ್ ದಾಳಿಯಿಂದ ರಕ್ಷಿಸಲು ರಷ್ಯಾದಿಂದ 12 ‘ಪ್ಯಾಂಟ್ಸಿರ್’ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮತ್ತು ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಇನ್ನೂ 40 ಘಟಕಗಳನ್ನು ತಯಾರಿಸಲು ಯೋಜನೆ ರೂಪಿಸಲಾಗಿದೆ. ಭಾರತದಲ್ಲೇ S-400 ವ್ಯವಸ್ಥೆಯ ದುರಸ್ತಿ ಮತ್ತು ನಿರ್ವಹಣೆ (MRO) ಸೌಲಭ್ಯವನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಇದರೊಂದಿಗೆ ಚೀನಾ ಗಡಿಯಲ್ಲಿ (ಮಧ್ಯ ಸೆಕ್ಟರ್) 5ನೇ ವ್ಯವಸ್ಥೆಯನ್ನು ನಿಯೋಜಿಸುವ ಮೂಲಕ ಭಾರತ ತನ್ನ ವಾಯು ಗಡಿಯನ್ನು ಸಂಪೂರ್ಣವಾಗಿ ಅಭೇದ್ಯಗೊಳಿಸಲಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement