ಜಿ.ಆರ್.ಪಂಡಿತರ ಯಕ್ಷಗಾನದ ಚೌಕಿಮನೆ ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಬಹುಮಾನ

ಶಿರಸಿ : ಸಾಗರದ ಜಿ.ಆರ್.ಪಂಡಿತ ಅವರು ತೆಗೆದ ಯಕ್ಷಗಾನದ ಒಂದು ಮೇಕಪ್ ಫೋಟೋಕ್ಕೆ ಅಂತಾರಾಷ್ಟ್ರೀಯ ಬಹುಮಾನಕ್ಕೆ ಪಾತ್ರವಾಗಿದೆ. ಇದೇ ಏಪ್ರಿಲ್ ನಲ್ಲಿ ಯುರೋಪಿನ ಸರ್ಬಿಯಾ ದೇಶದ ನೊವಿಸಡ್ ನಗರದ ಸ್ಟರಿಜಿನೊ ಪೊಜೊರ್ಜೆ ಎಂಬ ಖ್ಯಾತ ಛಾಯಾಗ್ರಹಣ ಸಂಸ್ಥೆಯು ಆಯೋಜಿಸಿದ್ದ 18ನೇ “ಟ್ರೈಯೇನಿಯಲ್ ಫೋಟೋಗ್ರಫಿಕ್ ಆರ್ಟ್ ನಲ್ಲಿ ಥಿಯೇಟರ್” ಎಂಬ ಹೆಸರಿನ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ 13 ಛಾಯಾಗ್ರಾಹಕರು ಬಹುಮಾನ ಪಡೆದಿದ್ದಾರೆ. ಇವರಲ್ಲಿ ಭಾರತದ ಮೂವರು ಸೇರಿದ್ದು, ಸಾಗರದ ಜಿ.ಆರ್.ಪಂಡಿತ ಅವರ ಯಕ್ಷಗಾನದ ಮೇಕಪ್‌ ರೂಮಿನ ಛಾಯಾಚಿತ್ರ ಈ ಬಹುಮಾನ ಪಡೆದಿದೆ.

‘ಸಾಗರ ಫೋಟೋಗ್ರಾಫಿಕ್ ಸೊಸೈಟಿ’ಯು ಕಳೆದ ಡಿಸೆಂಬರ್ ನಲ್ಲಿ ನೀನಾಸಮ್ ಹೆಗ್ಗೋಡಿನಲ್ಲಿ ಆಯೋಜಿಸಿದ್ದ ಛಾಯಾಗ್ರಹಣ ಕಾರ್ಯಾಗಾರದಲ್ಲಿ ಕಂಸವಧೆ ಎಂಬ ಯಕ್ಷಗಾನದ ಮೇಕಪ್ ರೂಮಿನ ಫೋಟೋ ತೆಗೆದಿದ್ದರು. ಅದು ಈಗ “ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಆರ್ಟ್ ಫೋಟೋಗ್ರಫಿಕ್ ಅವಾರ್ಡ್” ಪಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ನಿವಾಸಿಯಾದ ಜಿ.ಎಸ್‌.ಪಂಡಿತ ಅವರು ಉತ್ತಮ ಹವ್ಯಾಸಿ ಛಾಯಾಗ್ರಾಹಕರು. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳಕೋಡು ಎಂಬ ಗ್ರಾಮದವರು. ಇವರು ಪೋಸ್ಟಲ್ ಉದ್ಯೋಗಿಯಾಗಿದ್ದರು. ಸಾಗರ ಫೋಟೋಗ್ರಾಫಿಕ್ ಸೊಸೈಟಿಯ ಸಂಚಾಲಕರಾಗಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement