
ಮುಂಡಗೋಡ: ಹಿರಿಯ ಪತ್ರಕರ್ತ ಹಾಗೂ ಲೋಕಧ್ವನಿ ಪತ್ರಿಕೆಯ ಮಾಜಿ ಸಂಪಾದಕ ಪಿ.ಎಸ್. ಸದಾನಂದ (75) ಅವರು ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸದಾನಂದ ಅವರು ಪತ್ನಿ, ಪುತ್ರಿ, ಪುತ್ರ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. ಪಿ.ಎಸ್. ಸದಾನಂದ ಅವರು ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದವರು. ಲೋಕಧ್ವನಿ ಪತ್ರಿಕೆ ಸಂಸ್ಥಾಪಕರಾದ ಗೋಪಾಲಕೃಷ್ಣ ಆನವಟ್ಟಿಯವರ ಕಾಲದಿಂದಲೂ ಅವರು ಲೋಕಧ್ವನಿ ಪತ್ರಿಕೆಯಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ, ಸಂಪಾದಕರಾಗಿ 35 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಅವರ ಪತ್ರಿಕೋದ್ಯಮದ ಸಾಧನೆಗೆ ಹಲವು ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿದ್ದರು.
ಸಂತಾಪ: ಪಿ.ಎಸ್. ಸದಾನಂದ ಅವರ ನಿಧನಕ್ಕೆ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಿಕಾ ಸಂಗದ ಅಧ್ಯಕ್ಷ ನರಸಿಂಹ ಅಡಿ ಹಾಗೂ ಪಧಾಧಿಕಾರಿಗಳು, ಪತ್ರಕರ್ತರು, ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ