ನವದೆಹಲಿ: 2024ನೇ ಸಾಲಿನ ಭಾರತೀಯ ಸಿನಿರಂಗದ ಅತ್ಯುತ್ತಮ ಸಾಧನೆಗಳನ್ನು ಗೌರವಿಸುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಶನಿವಾರ ಸಂಜೆ ಪ್ರಕಟಿಸಲಾಯಿತು.
ನವದೆಹಲಿ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ವಿಜೇತರನ್ನು ಘೋಷಿಸಲಾಯಿತು. ‘ಆರ್ಟಿಕಲ್ 370’ ಚಿತ್ರದ ಅಭಿನಯಕ್ಕಾಗಿ ಯಾಮಿ ಗೌತಂ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರೆ, ‘ಚಂದು ಚಾಂಪಿಯನ್’ (ಹಿಂದಿ) ಚಿತ್ರದ ಅಭಿನಯಕ್ಕಾಗಿ ಕಾರ್ತಿಕ್ ಆರ್ಯನ್ ಹಾಗೂ ‘ಬ್ರಮಯುಗಂ’ (ಮಲಯಾಳಂ) ಚಿತ್ರದ ಅಭಿನಯಕ್ಕಾಗಿ ಮಮ್ಮುಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
‘ಆರ್ಟಿಕಲ್ 370’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಒಟ್ಟು ಮೂರು ಪ್ರಶಸ್ತಿಗಳನ್ನು ಗೆದ್ದಿದೆ. ಈ ಚಿತ್ರಕ್ಕೆ ಶಾಶ್ವತ ಸಚದೇವ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನೂ ಪಡೆದಿದ್ದಾರೆ. ‘ಅಮರನ್’ (ತಮಿಳು) ಚಿತ್ರದ ನಿರ್ದೇಶಕ ರಾಜಕುಮಾರ ಪೆರಿಯಸಾಮಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಶ್ರೀಕಾಂತ’ ಅತ್ಯುತ್ತಮ ಹಿಂದಿ ಚಿತ್ರವಾಗಿ ಆಯ್ಕೆಯಾಗಿದೆ.
ಅಭಿನಯ ವಿಭಾಗ
ಅತ್ಯುತ್ತಮ ನಟ: ಕಾರ್ತಿಕ ಆರ್ಯನ್ (ಚಂದು ಚಾಂಪಿಯನ್ – ಹಿಂದಿ), ಮಮ್ಮುಟ್ಟಿ (ಬ್ರಮಯುಗಂ– ಮಲಯಾಳಂ)
ಅತ್ಯುತ್ತಮ ನಟಿ: ಯಾಮಿ ಗೌತಂ (ಆರ್ಟಿಕಲ್ 370)
ಅತ್ಯುತ್ತಮ ಬಾಲ ಕಲಾವಿದರು: ಅತೀಶ ಎಸ್. ಶೆಟ್ಟಿ (ಮಿಥ್ಯ – ಕನ್ನಡ), ರಿದ್ಧಿಮಾನ್ ಬ್ಯಾನರ್ಜಿ, ತಪೋಮಯ್ ದೇಬ್, ಗೀತಾಶ್ರೀ ಚಕ್ರಬರ್ತಿ (ಓಂಕೊ ಕಿ ಕೋಥಿನ್ – ಬೆಂಗಾಲಿ) , ಅರುಣದೇವ ಪಾಥುಲಾ (ಚಿನ್ನ ಕಥಾ ಕಾಡು– ತೆಲುಗು),
ಅತ್ಯುತ್ತಮ ಪೋಷಕ ನಟಿ: ಸಚನಾ ನಮಿದಾಸ್ (ಮಹಾರಾಜ – ತಮಿಳು)
ಅತ್ಯುತ್ತಮ ಪೋಷಕ ನಟ: ಸಂಜಯ ಮಿಶ್ರಾ (ಭಕ್ಷಕ್ – ಹಿಂದಿ)
ಪ್ರಮುಖ ಪ್ರಶಸ್ತಿಗಳು
ಅತ್ಯುತ್ತಮ ನಿರ್ದೇಶಕ: ರಾಜಕುಮಾರ ಪೆರಿಯಸಾಮಿ (ಅಮರಾನ್ – ತಮಿಳು)
ಅತ್ಯುತ್ತಮ ಮಕ್ಕಳ ಚಿತ್ರ: 35 – ಚಿನ್ನ ಕಥಾ ಕಾಡು
ರಾಷ್ಟ್ರೀಯ ಅಥವಾ ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಿತ್ರ: ಕ್ಯಾಪ್ಟನ್ ಮಿಲ್ಲರ್ (ತಮಿಳು)
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕಲ್ಕಿ 2898 AD (ತೆಲುಗು)
ಅತ್ಯುತ್ತಮ ಪ್ರಥಮ ಚಿತ್ರ: ಸ್ವಾತಂತ್ರ್ಯ ವೀರ ಸಾವರ್ಕರ
ಅತ್ಯುತ್ತಮ ಚಲನಚಿತ್ರ: ಆರ್ಟಿಕಲ್ 370
ಫೀಚರ್ ಚಿತ್ರಗಳ ವಿಭಾಗ
ಅತ್ಯುತ್ತಮ ತುಳು ಚಿತ್ರ: ಇಂಬು (IMBU)
ಅತ್ಯುತ್ತಮ ಗಢ್ವಾಳಿ ಚಿತ್ರ: ಧೋಲಿ (Dholi)
ಅತ್ಯುತ್ತಮ ಗಾರೋ ಚಿತ್ರ: ರಿಮ್ಡೋಟಿಯಾಂಗಾ (Rimdottianga)
ಅತ್ಯುತ್ತಮ ತೆಲುಗು ಚಿತ್ರ : ಕಮಿಟಿ ಕುರ್ರೊಲು (The Carnival Committee)
ಅತ್ಯುತ್ತಮ ತಮಿಳು ಚಿತ್ರ: ರಾಯನ್ (Raayan)
ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ (Godday Godday Chaa)
ಅತ್ಯುತ್ತಮ ಒಡಿಯಾ ಚಿತ್ರ: ಲಹರಿ (Tide of Times)
ಅತ್ಯುತ್ತಮ ಮರಾಠಿ ಚಿತ್ರ: ಮುಕ್ಕಂ ಪೋಸ್ಟ್ ಬೊಂಬಿಲವಾಡಿ (Mukkam Post Bombilwadi)
ಅತ್ಯುತ್ತಮ ಮಣಿಪುರಿ ಚಿತ್ರ: ಸುನಿತಾ (Sunita)
ಅತ್ಯುತ್ತಮ ಮಲಯಾಳಂ ಚಿತ್ರ: ಫೆಮಿನಿಚಿ ಫಾತಿಮಾ (Feminist Fathima)
ಅತ್ಯುತ್ತಮ ಕೊಂಕಣಿ ಚಿತ್ರ: ಮೋಗ್ ಅಸುಮ್ (Let There Be Love)
ಅತ್ಯುತ್ತಮ ಕನ್ನಡ ಚಿತ್ರ : ಮಿಥ್ಯ (Illusion)
ಅತ್ಯುತ್ತಮ ಹಿಂದಿ ಚಿತ್ರ: ಶ್ರೀಕಾಂತ (Srikanth)
ಅತ್ಯುತ್ತಮ ಗುಜರಾತಿ ಚಿತ್ರ: ಮಾರನ್ (The Hunt)
ಅತ್ಯುತ್ತಮ ಬೆಂಗಾಲಿ ಚಿತ್ರ: ಚಾಲ್ವಿತ್ರ ಎಖೋನ್ (Kaleidoscope Now)
ಅತ್ಯುತ್ತಮ ಅಸ್ಸಾಮಿ ಚಿತ್ರ: ಜೂಫೂಲ್ (Orange and Purple)
ತಾಂತ್ರಿಕ ಹಾಗೂ ವೈಯಕ್ತಿಕ ಪ್ರಶಸ್ತಿಗಳು
ಅತ್ಯುತ್ತಮ ಸಾಹಸ ನಿರ್ದೇಶನ: ಮಹಾರಾಜ (ತಮಿಳು)
ಅತ್ಯುತ್ತಮ ನೃತ್ಯ ಸಂಯೋಜನೆ: ವಿಜಯ ಗಂಗೂಲಿ – (ಆಜ್ ಕೀ ರಾತ್ (Stree 2))
ಅತ್ಯುತ್ತಮ ಸಾಹಿತ್ಯ: ಮನೋಜ್ ಮುಂತಶಿರ್ – ಮೈದಾನ್ –ಜಾನೇ ದೋ- ಹಿಂದಿ
ಅತ್ಯುತ್ತಮ ಸಂಗೀತ ನಿರ್ದೇಶನ: ಜಿ.ವಿ. ಪ್ರಕಾಶಕುಮಾರ (ಅಮರಾನ್ – ತಮಿಳು)
ಅತ್ಯುತ್ತಮ ಹಿನ್ನೆಲೆ ಸಂಗೀತ: ಶಶ್ವತ್ ಸಚದೇವ (ಆರ್ಟಿಕಲ್ 370 – ಹಿಂದಿ)
ಅತ್ಯುತ್ತಮ ಮೇಕಪ್: ಪಿ. ರವಿ ಕುಮಾರ (ಕಮಿಟಿ ಕುರ್ರೊಲು-ತೆಲುಗು)
ಅತ್ಯುತ್ತಮ ವಸ್ತ್ರ ವಿನ್ಯಾಸ: ದೀಪಾಲಿ ನೂರ್ ಹಾಗೂ ಶೀತಲ್ ಶರ್ಮಾ (ಪುಷ್ಪ: The Rule Part 02)
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕಲ್ಕಿ 2898 AD (ತೆಲುಗು)
ಅತ್ಯುತ್ತಮ ಸಂಕಲನ: ಆರ್. ಕಲೈವಣ್ಣನ್ (ಅಮರಾನ್ – ತಮಿಳು)
ಅತ್ಯುತ್ತಮ ಧ್ವನಿ ವಿನ್ಯಾಸ: ಮಾನಸ ಚೌಧುರಿ (Bhool Bhulaiyaa 3)
ಅತ್ಯುತ್ತಮ ಚಿತ್ರಕಥೆ: ಯೋಗೇಶ ದೇಶಪಾಂಡೆ (ಸ್ವರ ಗಂಧರ್ವ ಸುಧೀರ ಫಡ್ಕೆ – ಮರಾಠಿ) ಹಾಗೂ ಬಂಧರೆಡ್ಡಿ ಸುಕುಮಾರ (ಪುಷ್ಪ: The Rule 2 – ತೆಲುಗು)
ಅತ್ಯುತ್ತಮ ಸಂಭಾಷಣೆ: ವೆಂಕಿ ಅಟ್ಲೂರಿ (ಲಕ್ಕಿ ಭಾಸ್ಕರ – ತೆಲುಗು)
ಅತ್ಯುತ್ತಮ ಛಾಯಾಗ್ರಹಣ: ಶೆಹ್ನಾದ್ ಜಲಾಲ್ (ಬ್ರಮಯುಗಂ – ಮಲಯಾಳಂ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ವೈಕೋಮ್ ವಿಜಯಲಕ್ಷ್ಮಿ – A.R.M. “ಅಂಗು ವನ ಕೊನಿಲು” – ಮಲಯಾಳಂ) (ಮಲಯಾಳಂ)
ಅತ್ಯುತ್ತಮ ಹಿನ್ನೆಲೆ ಗಾಯಕ: ಅಭಯ ಜೋಧ್ಪುರ್ಕರ್ –ನವಾಸಾಚಿ ಗೌರಿ ಮಾಝಿ ((ಘರತ್ ಗಣಪತಿ – ಮರಾಠಿ)
ನಾನ್-ಫೀಚರ್ ಚಲನಚಿತ್ರಗಳು:
ವಿಶೇಷ ಉಲ್ಲೇಖಗಳು: ಚೋಳ ದೋರಾ ಔರ್ ಸೂಯಿ (ಹಿಂದಿ) – ಜೈಮಿನ್ ಮೋದಿ ಮತ್ತು ಲೋಕೇಶ ಘಾಯ್;
ಭದ್ರ-ಕಾಳಿ ನಾಟಕಂ (ಭದ್ರ: ದಿ ಡ್ಯಾನ್ಸ್ ಆಫ್ ಕಾಳಿ) (ಮಲಯಾಳಂ) – ಆನಂದ ಜ್ಯೋತಿ (ಜೋಸ್ ಆಂಟೋನಿ);
ಸೌಂಡ್ ಮಿಕ್ಸ್ ಇಂಜಿನಿಯರ್ – ಮೆಯ್ಯಳಗನ್ (ತಮಿಳು)
ಧನುಷ್ – ಕ್ಯಾಪ್ಟನ್ ಮಿಲ್ಲರ್ (ತಮಿಳು)
ಅತ್ಯುತ್ತಮ ಸ್ಕ್ರಿಪ್ಟ್: ಒಬುರ್ (ಕ್ಲೌಡ್ಸ್) (ಹಿಂದಿ ಮತ್ತು ಕಾಶ್ಮೀರಿ)
ಅತ್ಯುತ್ತಮ ಧ್ವನಿಮುದ್ರಿಕೆ: ಸೌಂದರ್ಯ ಜಯಚಂದ್ರನ್ (ಲಿಟಲ್ ಪ್ಲಾನೆಟ್: ಎ ಟೇಲ್ ಆಫ್ ಫ್ರಾಗ್ಸ್) – ಇಂಗ್ಲಿಷ್
ಅತ್ಯುತ್ತಮ ಸಂಗೀತ ನಿರ್ದೇಶನ: ಶಿವಪಾಲ ಸಿಂಗ್ ಕಾಂಗ್ (ಪ್ಯಾರಾಟ್ 41~ಚೆಕ್~ ಚ್ಯಾ ಮಗವರ್) – ಮರಾಠಿ
ಅತ್ಯುತ್ತಮ ಸಂಕಲನ: ಮನ್ವಿರ ಜಸ್ರೋತಿಯಾ (ಎನ್ಡಿಎ) – ಹಿಂದಿ
ಅತ್ಯುತ್ತಮ ಧ್ವನಿ ವಿನ್ಯಾಸ: ಟಿ.ಎಸ್. ಹರಿ ಹರ ಸುಧನ್ (ನೀಲಿ) – ತಮಿಳು
ಅತ್ಯುತ್ತಮ ಛಾಯಾಗ್ರಹಣ: ಎಡ್ಮಂಡ್ ರಾನ್ಸನ್ (ಲೈಫ್ ಇನ್ ಲೂಮ್) – ಇಂಗ್ಲಿಷ್, ಹಿಂದಿ, ತಮಿಳು, ಅಸ್ಸಾಮಿ, ಬಂಗಾಳಿ
ಅತ್ಯುತ್ತಮ ನಿರ್ದೇಶನ: ಆನಂದ ಎಲ್. ರೈ (ಏಕತೆಯ ಪ್ರತಿಮೆ: ಏಕ್ತಾ ಕಾ ಪ್ರತೀಕ್) – ಹಿಂದಿ
ಅತ್ಯುತ್ತಮ ಕಿರುಚಿತ್ರ: ಹಂಸಫರ್ – ಮರಾಠಿ
ಅತ್ಯುತ್ತಮ ಅನಿಮೇಷನ್ ಚಿತ್ರ: ಟಚ್ಡ್ ಏಸ್ ವಾಟರ್ (ಸೈಲೆಂಟ್)
ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ: ಪಿಪ್ಲಾಂಟ್ರಿ: ಎ ಟೇಲ್ ಆಫ್ ಇಕೋ ಫೆಮಿನಿಸಂ (ಹಿಂದಿ, ರಾಜಸ್ಥಾನಿ, ಇಂಗ್ಲಿಷ್)
ಅತ್ಯುತ್ತಮ ಸಾಕ್ಷ್ಯಚಿತ್ರ: ರಾಮ-ನಾಮಿ (ಹಿಂದಿ)
ಅತ್ಯುತ್ತಮ ಕಲೆ/ಸಂಸ್ಕೃತಿ ಚಿತ್ರ: ಮೈ ನಿದಾ (ಹಿಂದಿ)
ಅತ್ಯುತ್ತಮ ಜೀವನಚರಿತ್ರೆ/ಐತಿಹಾಸಿಕ ಪುನರ್ನಿರ್ಮಾಣ ಚಿತ್ರ: ಕಾಕೋರಿ (ಹಿಂದಿ)
ಅತ್ಯುತ್ತಮ ಚೊಚ್ಚಲ ಚಿತ್ರ: ಆಂಜೆನ್ (ಅದೃಶ್ಯ) – ಸಂಥಾಲಿ
ಅತ್ಯುತ್ತಮ ಕಾಲ್ಪನಿಕವಲ್ಲದ ಚಿತ್ರ: ಭಂಗಾರ್ – ಮರಾಠಿ ಮತ್ತು ಇಂಗ್ಲಿಷ್


ನಿಮ್ಮ ಕಾಮೆಂಟ್ ಬರೆಯಿರಿ