ಬೆಂಗಳೂರು : ಬಹುನಿರೀಕ್ಷಿತ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಅನುಮೋದನೆ ನೀಡಿದ್ದು, ಒಟ್ಟು 20 ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ಒಪ್ಪಿಗೆ ಸೂಚಿಸಿದೆ. ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ನಿರೀಕ್ಷೆ ನಡುವೆಯೇ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ. ವಿಶೇಷವಾಗಿ, 20 ಮಂದಿಯಲ್ಲಿ 10 ಹೊಸ ಮುಖಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು (ಸೋಮವಾರ) ಸಂಜೆ 4.05 ಗಂಟೆಗೆ ನಡೆಯಲಿದೆ ಎಂದು ಲೋಕಭವನ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಆಗಸ್ಟ್ 3ರಂದು ಕಾಂಗ್ರೆಸ್ ಹೈಕಮಾಂಡ್‌ನಿಂದ ಸಚಿವ ಸಂಪುಟ ಸೇರ್ಪಡೆಗೆ ಅನುಮೋದನೆ ಪಡೆದ ಶಾಸಕರ ಪಟ್ಟಿಯಿರುವ ಪತ್ರ ತಲುಪಿದೆ.
ಸಚಿವರಾಗುವವರ ಸೇರ್ಪಡೆಯಾಗುವವರ ಶಾಸಕರ ಪಟ್ಟಿ ಹೀಗಿದೆ:
ಪಿ.ಎಂ. ನರೇಂದ್ರಸ್ವಾಮಿ
ಶಿವರಾಜ ತಂಗಡಗಿ
ರುದ್ರಪ್ಪ ಲಮಾಣಿ
ಕೆ.ಎಸ್. ಬಸವಂತಪ್ಪ
ಬಿ. ನಾಗೇಂದ್ರ
ಟಿ. ರಘುಮೂರ್ತಿ
ಜಮೀರ್ ಅಹ್ಮದ್ ಖಾನ್
ರಿಜ್ವಾನ್ ಅರ್ಷದ್
ಸಂತೋಷ ಲಾಡ್
ಮಧು ಬಂಗಾರಪ್ಪ
ಪುಟ್ಟರಂಗಶೆಟ್ಟಿ
ಎಸ್.ಎಸ್.ಮಲ್ಲಿಕಾರ್ಜುನ
ಅಜಯ ಸಿಂಗ್
ಎನ್. ಚಲುವರಾಯಸ್ವಾಮಿ
ಕೆ.ಎಂ. ಶಿವಲಿಂಗೇಗೌಡ
ಎಚ್.ಸಿ. ಬಾಲಕೃಷ್ಣ
ಗಾಯತ್ರಿ ಶಾಂತೇಗೌಡ
ಬಸವರಾಜ ರಾಯರೆಡ್ಡಿ
ವಿಜಯಾನಂದ ಕಾಶಪ್ಪನವರ
ಲಕ್ಷ್ಮಣ ಸವದಿ
ಸಭಾಧ್ಯಕ್ಷ-ಸಭಾಪತಿ ಹುದ್ದೆಗಳಿಗೂ ಅಭ್ಯರ್ಥಿಗಳ ಘೋಷಣೆ
ಸಚಿವ ಸಂಪುಟ ವಿಸ್ತರಣೆಯ ಜೊತೆಗೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷ ಹುದ್ದೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನೂ ಅನುಮೋದಿಸಿದೆ.
ವಿಧಾನಸಭೆ:
ಸಭಾಧ್ಯಕ್ಷರಾಗಿ (Speaker ಆಗಿ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಅನುಮೋದಿಸಿದೆ. ಹಾಗೂ ಉಪಸಭಾಧ್ಯಕ್ಷರಾಗಿ(Deputy Speaker) ಎ.ಎಸ್. ಪೊನ್ನಣ್ಣ ಅವರನ್ನು ಅನುಮೋದಿಸಲಾಗಿದೆ.
ವಿಧಾನಪರಿಷತ್: ಸಭಾಪತಿ(Chairperson)ಯಾಗಿ ಸಲೀಂ ಅಹ್ಮದ್ ಹಾಗೂ ಉಪಸಭಾಪತಿಯಾಗಿ
ಉಪಸಭಾಪತಿ (Deputy Chairperson): ಉಮಾಶ್ರೀ ಅವರ ಹೆಸರನ್ನು ಅನುಮೋದಿಸಲಾಗಿದೆ.
ಸ


ನಿಮ್ಮ ಕಾಮೆಂಟ್ ಬರೆಯಿರಿ