ಅಪರಿಚಿತ ಬಂದೂಕುಧಾರಿಗಳಿಂದ ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆ’ ; ಕ್ಯಾಮೆರಾ ಮುಂದೆಯೇ ಉಗ್ರನ ಒಪ್ಪಿಗೆ

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ʼಲಷ್ಕರ್-ಎ-ತೈಬಾ (LeT)ʼದ ಹಿರಿಯ ಕಾರ್ಯಕರ್ತನೊಬ್ಬ ಕ್ಯಾಮೆರಾ ಮುಂದೆ ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಲಷ್ಕರ್-ಎ-ತೈಬಾದ ಸುಮಾರು 30ಕ್ಕೂ ಹೆಚ್ಚು ಸದಸ್ಯರನ್ನು ಪಾಕಿಸ್ತಾನದೊಳಗೆ ಗುರುತು ತಿಳಿಯದ ಅಪರಿಚಿತ ದಾಳಿಕೋರರು ಹತ್ಯೆಗೈದಿದ್ದಾರೆ  ಎಂದು ಆತ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ರಿಜ್ವಾನ್ ಹನೀಫ್, ಭಾರತಕ್ಕೆ ಬೇಕಾಗಿರುವ ಹಿರಿಯ ಲಷ್ಕರ್-ಎ-ತೈಬಾ ಉಗ್ರನಾಗಿದ್ದು, ಪಾಕಿಸ್ತಾನವು ಈ ಸಂಘಟನೆಯನ್ನು ಹಲವು ವರ್ಷಗಳ ಹಿಂದೆಯೇ ನಿಷೇಧಿಸಿ ವಿಸರ್ಜಿಸಲಾಗಿದೆ ಎಂದು ಹೇಳಿಕೊಂಡಿದ್ದರೂ, ಅದರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯೇ ಈ ರೀತಿಯ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ವಿಡಿಯೋದಲ್ಲಿ ಮಾತನಾಡಿರುವ ರಿಜ್ವಾನ್ ಹನೀಫ್, ಕಳೆದ 3 ರಿಂದ 4 ವರ್ಷಗಳ ಅವಧಿಯಲ್ಲಿ, ನಿಷೇಧಿತ  ʼಲಷ್ಕರ್-ಎ-ತೈಬಾʼ ಸಂಘಟನೆಯ ಅನೇಕ ಸದಸ್ಯರು  ʼಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರ (PoK)ʼ ದ ವಿವಿಧ ಪ್ರದೇಶಗಳಲ್ಲಿ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾನೆ.
ಆತನ ಪ್ರಕಾರ, ಪೇಶಾವರ್, ಕರಾಚಿ, ರಾವಲ್ಪಿಂಡಿ, ರಾವಲಕೋಟ್ ಮತ್ತು ಮುಜಫರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ 30ಕ್ಕೂ ಹೆಚ್ಚು ಲಷ್ಕರ್-ಎ-ತೈಬಾ ಉಗ್ರರು ಗುರುತು ತಿಳಿಯದ ಅಪರಿಚಿತ ದಾಳಿಕೋರನಿಂದ ಹತ್ಯೆಯಾಗಿದ್ದಾರೆ.
2008ರ ಮುಂಬೈ ಉಗ್ರ ದಾಳಿಯ ಹಿಂದಿದ್ದ ಲಷ್ಕರ್-ಎ-ತೈಬಾ ಸಂಘಟನೆಯು 166 ಜನರ ಸಾವಿಗೆ ಕಾರಣವಾಗಿತ್ತು. ಅಲ್ಲದೆ, ಅಲ್-ಖೈದಾ ಮತ್ತು ತಾಲಿಬಾನ್ ಸಂಘಟನೆಗಳೊಂದಿಗೆ ಹೊಂದಿದ್ದ ಸಂಪರ್ಕದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ (UN) 2005ರಲ್ಲಿ ಈ ಸಂಘಟನೆಯನ್ನು ನಿರ್ಬಂಧಿತ ಸಂಘಟನೆಯಾಗಿ ಘೋಷಿಸಿತ್ತು.
ಇಂತಹ ಹತ್ಯೆಗಳ ಬಗ್ಗೆ ಲಷ್ಕರ್-ಎ-ತೈಬಾಗೆ ಸೇರಿದ ಉಗ್ರನೊಬ್ಬ ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ.
ಭಾರತದ ಭದ್ರತಾ ಸಂಸ್ಥೆಗಳು ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದು, ವಿಡಿಯೋದಲ್ಲಿರುವ ವ್ಯಕ್ತಿ ಭಾರತಕ್ಕೆ ಬೇಕಾಗಿರುವ ಹಿರಿಯ ಲಷ್ಕರ್ ಉಗ್ರ ರಿಜ್ವಾನ್ ಹನೀಫ್ ಎಂಬುದನ್ನು ದೃಢಪಡಿಸಿವೆ.
ವಿಡಿಯೋದಲ್ಲಿ ರಿಜ್ವಾನ್ ಹನೀಫ್, ಈ ಗುರಿತಪ್ಪದ ಹತ್ಯೆಗಳ ಹಿಂದೆ ಭಾರತದ ಗುಪ್ತಚರ ಸಂಸ್ಥೆಗಳ ಕೈವಾಡವಿದೆ ಎಂದು ಆರೋಪಿಸಿದ್ದಾನೆ. ಆದರೆ, ಭಾರತ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement