ಶಿರಸಿ : ಕೆರೆಗೆ ಈಜಲು ಹೋದಾಗ ನೀರು ಪಾಲು

ಶಿರಸಿ : ಗಣೇಶ ಹಬ್ಬದ ಸಂಭ್ರದಲ್ಲಿ ಈಜಲು ಹೋದ 17 ವರ್ಷದ ಅಪ್ರಾಪ್ತ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಗಾವಿಯಲ್ಲಿ ಮಂಗಳವಾರ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತನನ್ನು ಸುನಿಲ ಕೃಷ್ಣ ಚೆನ್ನಯ್ಯ ಎಂದು ಗುರುತಿಸಲಾಗಿದೆ. ಮಂಗಳವಾರ ಸ್ಥಳೀಯರಾದ  ಸುನಿಲ ಹಾಗೂ ಕೆಲವರು  ಸುಗಾವಿಯ  ಭಟ್ರಕೆರೆಗೆ ಕೆರೆಗೆ ಈಜಲು ಹೋಗಿದ್ದರು. ಆದರೆ ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಶಿರಸಿಯ ಶ್ರೀ ಮಾರಿಕಾಂಭ ಲೈಫ್‌ ಗಾರ್ಡ್‌ ತಂಡದ ಸದಸ್ಯರು ಆಗಮಿಸಿ ಕಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಳಗಾವಿ : ಫ್ರಿಜ್‌ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನ

ನಿಮ್ಮ ಕಾಮೆಂಟ್ ಬರೆಯಿರಿ

advertisement