ಶಿರಸಿ : ಸೆ.19ರಂದು ಸಪ್ತಕ ಜಿ.ಎಸ್‌. ಹೆಗಡೆ ದಂಪತಿಗೆ ಸನ್ಮಾನ, ಸಂಗೀತ ಕಾರ್ಯಕ್ರಮ

ಶಿರಸಿ: ಸಪ್ತಕ ಬೆಂಗಳೂರು ಸಂಸ್ಥಾಪಕ ಜಿ.ಎಸ್‌. ಹೆಗಡೆ (G.S. Hegde) ಹಾಗೂ ಗೀತಾ ಹೆಗಡೆ ದಂಪತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಸೆಪ್ಟಂಬರ್‌ 19ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಂಗಧಾಮದಲ್ಲಿ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿ.ಎಸ್‌. ಹೆಗಡೆ ಅವರ 75ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಡೆಯಲಿರುವ ಸಪ್ತಕ ಸನ್ಮಾನ ಸಮಿತಿ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮವು ಸೆ.19ರ ಶನಿವಾರ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಜಿ‌.ಎಸ್. ಹೆಗಡೆ ಹಾಗೂ ಪತ್ನಿ ಗೀತಾ ಹೆಗಡೆ ದಂಪತಿಗೆ ಸನ್ಮಾನ ನಡೆಯಲಿದೆ.

ಸಪ್ತಕದ ಚಟುವಟಿಕೆಗಳನ್ನು ದೇಶದ ವಿವಿಧ ಭಾಗಗಳಿಗೂ ವಿಸ್ತರಿಸುವ ಮೂಲಕ ಭಾರತೀಯ ಸಂಗೀತ ಪರಂಪರೆಯನ್ನು ಮುಂದಕ್ಕೆ ಒಯ್ಯುತ್ತಿರುವ ಜಿ.ಎಸ್‌.ಹೆಗಡೆ ಅವರು ಶಿರಸಿಯಲ್ಲಿ 25ಕ್ಕೂ ಹೆಚ್ಚು ಹಾಗೂ ದೇಶದ ಹಲವು ನಗರ, ಪಟ್ಟಣಗಳಲ್ಲಿ ಒಟ್ಟು ಸುಮಾರು 1 ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಲ್ಲವೂ ಉಚಿತ ಕಾರ್ಯಕ್ರಮವಾಗಿದೆ.
ಅವರ ಸನ್ಮಾನ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಮುಂಬೈನ ಸ್ವಪ್ನಿಲ್ ಭಿಸೆ ಅವರಿಂದ ತಬಲಾ ಸೋಲೋ ನಡೆಯಲಿದ್ದು, ಅವರಿಗೆ ಅಜಯ್ ಹೆಗಡೆ ವರ್ಗಾಸರ ಲೆಹರಾ ನೀಡಲಿದ್ದಾರೆ. ನಂತರ ಧನಂಜಯ ಹೆಗಡೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅವರಿಗೆ ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಹಾಗೂ ತಬಲಾದಲ್ಲಿ ಸ್ವಪ್ನಿಲ್ ಭಿಸೆ ಸಾಥ್ ನೀಡಲಿದ್ದಾರೆ.

ಪ್ರಮುಖ ಸುದ್ದಿ :-   ಕಲ್ಲಿನಿಂದ ಜಜ್ಜಿ ಮಹಿಳೆ ಕೊಲೆ ಮಾಡಿ ಶವದ ಮೇಲೆಯೇ ಮಗು ಮಲಗಿಸಿ ಹೋದ ಹಂತಕರು !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement