ಹಾಗಾದ್ರೆ ಕೇರಳದ ಕಾಂಗ್ರೆಸ್‌ ಸಿಎಂ, ತಮಿಳುನಾಡು ಟಿವಿಕೆ ಸಿಎಂ ಕೂಡ ಮತಗಳ್ಳರೇ: ಸಿಜೆಪಿ ಹೇಳಿಕೆಗೆ ಚೇತನ್ ಅಹಿಂಸಾ ಆಕ್ಷೇಪ

ಬೆಂಗಳೂರು : ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲೇ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಎಸ್‌ಐಆರ್‌ ಬಗ್ಗೆ ಪ್ರತಿಭಟನಾನಿರತ ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ವಿಪಕ್ಷಗಳ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.
ಈ ಆರೋಪಗಳಿಗೆ ಸೂಕ್ತ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, ಇವು ಕೇವಲ ಸಂಕುಚಿತ ಹಾಗೂ ಬಿಜೆಪಿ-ವಿರೋಧಿ ಅಜೆಂಡಾದಿಂದ ಪ್ರೇರಿತವಾದ, ಯಾವುದೇ ಆಧಾರವಿಲ್ಲದ ಹೇಳಿಕೆಗಳು ಎಂದು ಬಣ್ಣಿಸಿದ್ದಾರೆ. ಇತ್ತೀಚಿನ ಚುನಾವಣಾ ಫಲಿತಾಂಶಗಳ ಕುರಿತು ರಾಜಕೀಯ ವಿರೋಧಿಗಳು ಮತ್ತು ಟೀಕಾಕಾರರು ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚೇತನ ಅಹಿಂಸಾ, ಟೀಕಾಕಾರರ ವಾದಗಳಲ್ಲಿನ ವೈರುಧ್ಯವನ್ನು ಪ್ರಶ್ನಿಸಿದ್ದಾರೆ.

ಮೋದಿ ಅವರು ‘ಮತಗಳ್ಳತನ’ ಮಾಡಿ ಪ್ರಧಾನಿ ಆದರು ಎಂಬ ಕಾಕ್ರೋಚ್‌ ಜನತಾ ಪಾರ್ಟಿ ಆರೋಪವು, ಮನುವಾದಿಗಳು ಮತ್ತು ಎಸ್‌ಐಆರ್‌ (SIR) ವಿರೋಧಿಗಳು ಯಾವುದೇ ಆಧಾರವಿಲ್ಲದೆ ಮಾಡುವ ಆರೋಪಗಳಿಗೆ ಮತ್ತೊಂದು ಉದಾಹರಣೆ ಎಂದು ಹೇಳಿದ್ದಾರೆ.
ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ತಮಿಳುನಾಡಿನ ಟಿವಿಕೆ ಮುಖ್ಯಮಂತ್ರಿ ಕೂಡ ‘ಮತಗಳ್ಳರೇ’?ನಿಮ್ಮ ಕೈಯಲ್ಲಿ ಸುತ್ತಿಗೆ ಒಂದೇ ಇದ್ದರೆ, ಎಲ್ಲವೂ ಮೊಳೆಯಂತೆ ಕಾಣುತ್ತದೆ. ಅದೇ ರೀತಿ, ನಿಮ್ಮ ಮನಸ್ಸಿನಲ್ಲಿ ಬಿಜೆಪಿಯನ್ನು ವಿರೋಧಿಸುವ ಒಂದೇ ಆಲೋಚನೆ ಇದ್ದರೆ, ಪ್ರತಿಯೊಂದೂ ಪಿತೂರಿಯಂತೆ ಕಾಣುತ್ತದೆ. ನಿಮ್ಮ ಅಜೆಂಡಾಗೆ ಹೊಂದಿಕೆಯಾಗದ ಪ್ರತಿಯೊಂದು ಚುನಾವಣಾ ಫಲಿತಾಂಶವೂ ‘ಮತಗಳ್ಳತನ’ ಎನಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ: ಅ.10ರಂದು ʼಭಾವಧಾರʼ ಗೀತೆಗಳ ಗುಚ್ಛ ಗಾಯನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement