ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿಲ್ಲಾ ಪಂಚಾಯತ ವಿಭಾಗೀಯ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲೆಕ್ಕಪರಿಶೋಧಕ ಮಲ್ಲಿಕಾರ್ಜುನ ಪಾಟೀಲ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮುಂಡಗೋಡಿನ ಗುತ್ತಿಗೆದಾರ ನಾಗರಾಜ ಕಟ್ಟಿಮನೆ ಎಂಬವರ ಬಳಿ ಗುತ್ತಿಗೆ ಕೆಲಸದ ಬಿಲ್ ಮಾಡಲು ಕೇಳಿದ್ದ 10 ಸಾವಿರ ರೂ ಲಂಚ ಪಡೆಯುವಾಗಸಂದರ್ಭದಲ್ಲಿ ಬುಧವಾರ ಜಿಪಂ ಕಚೇರಿಯಲ್ಲಿಯೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ. ಡಿಎಸ್ಪಿ ಧನ್ಯಾ ನಾಯಕ್, ಸಿಪಿಐ ರವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಗುತ್ತಿಗೆ ಕೆಲಸದ ಬಿಲ್ ಮಾಡಲು ಮುಂಡಗೋಡಿನ ಗುತ್ತಿಗೆದಾರ ನಾಗರಾಜ ಕಟ್ಟಿಮನೆ ಅವರ ಬಳಿ 10 ಸಾವಿರ ರೂ ಲಂಚದ ಬೇಡಿಕೆ ಇಡಲಾಗಿತ್ತು. ಈ ಕುರಿತು ಗುತ್ತಿಗೆದಾರ ಲೋಕಾಯುಕ್ತರಿಗೆ ದೂರು ನೀಡಿದ್ದರು.ಈ ದೂರಿನ ಆಧಾರದಲ್ಲಿ ಡಿ.ವೈಎಸ್ .ಪಿ .ಧನ್ಯ ನಾಯಕ್ ನೇತೃತ್ವದ ತಂಡ ದಾಳಿ ನಡೆಸಿ ಬುಧವಾರ ಸಾಯಂಕಾಲ ಜಿಪಂ ಕಚೇರಿಯಲ್ಲಿಯೇ ರೆಡ್ ಹ್ಯಾಂಡ್ ಹಿಡಿದಿದ್ದಾರೆ. ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ