ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಶಿರಸಿ : ನ.17ರಂದು ಅಶೋಕ ಹಾಸ್ಯಗಾರರ ‘ದಶರೂಪಕಗಳ ದಶಾವತಾರ’ ಕೃತಿಯ ರಂಗ ಚಿಂತನೆ-ಸಂವಾದ

ಶಿರಸಿ: ವಿಶ್ರಾಂತ ಸಂಪಾದಕ ಹಾಗೂ ಸಾಹಿತಿ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಕೃತಿಯ ‘ರಂಗಚಿಂತನೆ ಮತ್ತು ಸಂವಾದ’ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಮಮದಿ ಕುಟೀರದಲ್ಲಿ ನವೆಂಬರ್ 17ರಂದು ಅಪರಾಹ್ನ 3:30ರಿಂದ ಆಯೋಜಿಸಲಾಗಿದೆ.
ಹೊಂಗಿರಣ ಫೌಂಡೇಶನ್ (ರಿ.) ಯಕ್ಷಶುಭೋದಯ ಹಾಗೂ ಲಯನ್ಸ್ ಕ್ಲಬ್ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನವೆಂಬರ್‌ 17ರಂದು ಅಪರಾಹ್ನ 3:30ರಿಂದ ಸಂಜೆ 6:30ರವರೆಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಸಂವಾದ ನಡೆಯಲಿದೆ.
ವಿಶ್ವವಿದ್ಯಾಲಯದ ನಿವೃತ್ತ ಡೀನ್, ಲೇಖಕ ಹಾಗೂ ಯಕ್ಷಗಾನ ವಿದ್ವಾಂಸರಾದ ಸೋಂದಾದ ಡಾ. ಜಿ.ಎ. ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಲೇಖಕ ಹಾಗೂ ವಿಮರ್ಶಕರಾದ ಸುಬ್ರಾಯ ಮತ್ತಿಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸೆಲ್ಕೊದ ನಿವೃತ್ತ ಸಿಇಒ ಹಾಗೂ ಯಕ್ಷಗಾನ ಅರ್ಥಧಾರಿಗಳಾದ ಹೆರವಟ್ಟಾದ ಮೋಹನ ಹೆಗಡೆ, ಸಾಹಿತಿ ಹಾಗೂ ಯಕ್ಷಗಾನ ವಿಮರ್ಶಕರಾದ ನಿತ್ಯಾನಂದ ಹೆಗಡೆ ಮುರೂರು, ಯಕ್ಷಗಾನ ಅರ್ಥಧಾರಿ ಹಾಗೂ ಸಂಸ್ಕೃತಿ ಚಿಂತಕ ಕಾಶ್ಯಪ ಪರ್ಣಕುಟಿ ಮತ್ತು ಹಿರಿಯ ಯಕ್ಷಗಾನ ಕಲಾವಿದ ಯಲ್ಲಾಪುರದ ಸಿ.ಜೆ. ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಲಯನ್ಸ್ ಕ್ಲಬ್ ಶಿರಸಿಯ ಅಧ್ಯಕ್ಷ ಮನೋಹರ ಮಲ್ಮನೆ, ಕೃತಿಯ ಕರ್ತೃ ಅಶೋಕ ಹಾಸ್ಯಗಾರ ಹಾಗೂ ಹಿರಿಯ ಸಾಹಿತಿ, ವಿಮರ್ಶಕ ಆರ್.ಡಿ. ಹೆಗಡೆ ಆಲ್ಮನೆ ಅವರು ಪಾಲ್ಗೊಳ್ಳಲಿದ್ದಾರೆ. ಸಾಹಿತಿಗಳಾದ ಶಂಕರ್ ಹೆಗಡೆ ಭದ್ರನ್ ಹಾಗೂ ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಅವರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಆಸಕ್ತರು ಸಂವಾದದಲ್ಲಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ಮದ್ಯದ ಅಮಲಿನಲ್ಲಿ ಮನೆ ಕಾಂಪೌಂಡ್‌ಗೆ ಕಾರು ಡಿಕ್ಕಿ; ಸಂಚಾರ ಪೊಲೀಸರ ಪಿಎಸ್‌ಐ ಮೇಲೆ ಹಲ್ಲೆ, ಕಾರು ಬ್ರೋಕರ್ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement