ಪುಸ್ತಕ ಎಂಬುದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ

ಸಿದ್ದಾಪುರ : ಪುಸ್ತಕ ಎಂಬುದು ಕೇವಲ ಅಚ್ಚಾದ ವಸ್ತುವಲ್ಲ; ಅದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ ಎಂದು ಸಿದ್ದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಭಿಪ್ರಾಯಪಟ್ಟರು. ಪೌರ್ಣಿಮಾ ಸಾಹಿತ್ಯ ವೇದಿಕೆ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಲಯನ್ಸ್‌ ಬಾಲಭವನದಲ್ಲಿ ಆಯೋಜಿಸಲಾದ ಪತ್ರಕರ್ತ, … Continued

ಮೇ 1ರಂದು ಗಂಗಾಧರ ಕೊಳಗಿಯವರ 2 ಕೃತಿಗಳ ಅವಲೋಕನ

ಸಿದ್ದಾಪುರ : ಸಾಹಿತಿ ಹಾಗೂ ಪತ್ರಕರ್ತ ಗಂಗಾಧರ ಕೊಳಗಿ ಅವರ ʼಕಾಡಂಚಿನ ಯಾನʼ ಹಾಗೂ ʼಮನಸು ಆಕಾಶದ ನೀಹಾರಿಕೆʼ ಎಂಬ ಎರಡು ಮರುಮುದ್ರಣ ಕೃತಿಗಳ ಅವಲೋಕನ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಲಯನ್ಸ್‌ ಬಾಲಭವನದಲ್ಲಿ ಮೇ 1ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಪೌರ್ಣಿಮಾ ಸಾಹಿತ್ಯ ವೇದಿಕೆ ಸಿದ್ದಾಪುರ ಹಾಗೂ ಪ್ರಯೋಗ ಸ್ವಸೇಸಂ ಸಿದ್ದಾಪುರ … Continued

ಅರುಣಕುಮಾರ ಹಬ್ಬು ʼಬೊಗಸೆ ನೀರುʼ ಕೃತಿಗೆ ಬಸವರಾಜ ಕಟ್ಟಿಮನಿ ಆತ್ಮಕಥೆ ಪ್ರಶಸ್ತಿ

ಹುಬ್ಬಳ್ಳಿ: ಹಿರಿಯ ಪತ್ರಕರ್ತ ಹಾಗೂ ಬರಹಗಾರ ಅರುಣಕುಮಾರ ಹಬ್ಬು ಅವರ ಆತ್ಮಕಥನ ” ಬೊಗಸೆ ನೀರು” ಕೃತಿಯು ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಕೊಡಮಾಡುವ ಬಸವರಾಜ ಕಟ್ಟಿಮನಿ ಆತ್ಮಕಥೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಯನ್ನು ಜನವರಿ 18ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ … Continued

ಯುವ ಬರಹಗಾರರ ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ 50 ಯುವ ಬರಹಗಾರರ ಹಸ್ತಪ್ರತಿಗಳ ಪ್ರಕಟಣೆಗೆ ಮಾತ್ರ 15,000 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಪ್ರಾಧಿಕಾರದ ಅರ್ಜಿ ನಮೂನೆಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ … Continued

ನನ್ನ ಪುಸ್ತಕವು ಆರೋಗ್ಯದ ಎಲ್ಲ ಆಯಾಮಗಳ ಮೂಲಕ ದೀರ್ಘಕಾಲ ಉತ್ತಮವಾಗಿ ಬದುಕುವ ಬಗ್ಗೆ ಹೇಳುತ್ತದೆ ; ಡಾ.ರಾಮಚಂದ್ರ ಹೆಗಡೆ ಭಂಡೀಮನೆ

ವೈಯಕ್ತಿಕ ಅನುಭವ, ವೃತ್ತಿಜೀವನದ ಅನುಭವ ಮತ್ತು ನಾವು ನಿವೃತ್ತಿಯ ನಂತರದ ಬದುಕನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಸಮ್ಮಿಶ್ರಣದಿಂದ ಈ ಪುಸ್ತಕ ಬಂದಿದೆ. ಅನೇಕರು ನಿವೃತ್ತಿ ನಂತರ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕ್ಷೀಣಿಸುತ್ತಿರುವ ಆರೋಗ್ಯ, ಗೊಂದಲ, ಧ್ಯೇಯದ ಕೊರತೆ ಹಾಗೂ ನಿವೃತ್ತಿ ನಂತರ ಇನ್ನು ನಮ್ಮದೇನಿಲ್ಲ, ನಮ್ಮಿಂದ ಏನೂ ಸಾಧ್ಯವಿಲ್ಲ ಅಂದುಕೊಂಡು ತಮ್ಮ … Continued

ʼಪುರುಷ ಸೂಕ್ತʼ ಮಂತ್ರವು ವಿಜ್ಞಾನದ ʼಸೃಷ್ಟಿ ತತ್ವʼದ ಬಗ್ಗೆ ಹೇಳುತ್ತವೆ ; ಇದರ ಮಂತ್ರಗಳಲ್ಲಿದೆ ಖಗೋಳ ಭೌತ ವಿಜ್ಞಾನ : ನನ್ನ ಪುಸ್ತಕದಲ್ಲಿ ಇದರ ಬಗ್ಗೆ ಹೇಳಿದ್ದೇನೆ | ಆರ್‌.ಎಸ್‌.ಹೆಗಡೆ ಬೆಳ್ಳೆಕೇರಿ

ರಘುಪತಿ ಯಾಜಿ ಪುರುಷ ಸೂಕ್ತದ ಹಲವು ಮಂತ್ರಗಳು ವಿಶ್ವದ ಎಲ್ಲ ಭೌತಿಕ ಚೈತನ್ಯದ ಸೃಷ್ಟಿಗಳ ಕುರಿತಾಗಿ ವರ್ಣಿಸುತ್ತವೆ. ನಂತರ ಭೂಮಿಯ ಮೇಲಿನ ರಸೋತ್ಪತ್ತಿ -ಜೀವೋತ್ಪತ್ತಿಗಳ ವರ್ಣನೆ, ಉಪಾಸನೆ ಹಾಗೂ ಕರ್ಮಗಳ ಬಗ್ಗೆ ವಿವರಿಸುತ್ತವೆ. ಅಂತಿಮವಾಗಿ ‘ಮೋಕ್ಷ’ ಮಾರ್ಗದ ಬಗ್ಗೆ ಹೇಳುತ್ತದೆ. ಈ ಸೂಕ್ತದ ಮಂತ್ರಗಳಲ್ಲಿರುವ ವರ್ಣನೆಗಳು ಇಂದಿನ ಖಗೋಳ ಭೌತ ವಿಜ್ಞಾನ ಹಾಗೂ ಜೀವ ವಿಜ್ಞಾನ … Continued

ಯಕ್ಷಗಾನದ ಪುನರ್‌ ವ್ಯಾಖ್ಯಾನ ಆಗಬೇಕು ; ಯಕ್ಷಗಾನ ಶಾಸ್ತ್ರೀಯ ಕಲೆ ಹೇಗೆ-ಯಾಕೆ ಎಂಬುದು ನನ್ನ ʼದಶರೂಪಕಗಳ ದಶಾವತಾರʼ ಪುಸ್ತಕದಲ್ಲಿದೆ : ಸಂದರ್ಶನದಲ್ಲಿ ಅಶೋಕ ಹಾಸ್ಯಗಾರ

ರಘುಪತಿ ಯಾಜಿ ಯಕ್ಷಗಾನದ ಪುನರ್‌ವ್ಯಾಖ್ಯಾನವಾಗಬೇಕು. ಯಕ್ಷಗಾನ ಜನಪದ ಕಲೆ ಅಲ್ಲ, ಅದು ಶಾಸ್ತ್ರೀಯ ಕಲೆ ಎಂದು ಈಗ ಅನೇಕ ವಿದ್ವಾಂಸರು ಹೇಳುತ್ತಿದ್ದಾರೆ. ಯಕ್ಷಗಾನ  ಜನಪದ ಅಲ್ಲ ಎಂದರೆ ಅದು ಹೇಗೆ ಮತ್ತು ಯಾಕೆ..? ಅದು ಶಾಸ್ತ್ರೀಯ ಎಂದಾದರೆ ಅದು ಹೇಗೆ ಮತ್ತು ಯಾಕೆ ಎಂಬುದರ ಕುರಿತು ಯಕ್ಷಗಾನ ಬಯಲಾಟದ ಪುನರ್‌ವ್ಯಾಖ್ಯಾನ ಆಗಬೇಕು. ಯಕ್ಷಗಾನ ಬಯಲಾಟವು ಶಾಸ್ತ್ರೀಯ … Continued

ಕ್ರಿಯಾಶೀಲ ವ್ಯಕ್ತಿತ್ವದ ನಿವೃತ್ತ ಗ್ರಂಥಪಾಲಕ ವೈ. ಬಿ. ಕೊರಡೂರ ʼಅಭಿನಂದನಾ ಗ್ರಂಥʼ ಲೋಕಾರ್ಪಣೆ

(೦೨.೦೬.೨೦೨೪ರಂದು ಯಲ್ಲಪ್ಪ ಬಸನಗೌಡ ಕೊರಡೂರ ಅವರ ಅಭಿನಂದನಾ ಗ್ರಂಥ ಬನಹಟ್ಟಿಯ ಜನತಾ ಶಿಕ್ಷಣ ಸಮಿತಿ ವತಿಯಿಂದ ಲೋಕರ್ಪಣೆಯಾಗುತ್ತಿದೆ. ಈ ನಿಮಿತ್ತ ಲೇಖನ) ಗ್ರಾಮೀಣ ಹಿನ್ನಲೆಯಿಂದ ಬಂದ ಗ್ರಾಮೀಣ ವಿದ್ಯಾರ್ಥಿಗಳ ಸ್ನೇಹಿತರಂತೆ ಕಾರ್ಯ ಮಾಡಿರುವ ಗ್ರಂಥಪಾಲರಾಗಿದ್ದ ಬನಹಟ್ಟಿಯ ಎಸ್.ಟಿ.ಸಿ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಿರಿಯ ಗ್ರಂಥಪಾಲಕರಾದ ಯಲ್ಲಪ್ಪ ಬಸನಗೌಡ ಕೊರಡೂರ ಅವರು ಮೇ ೩೧ರಂದು ಸೇವಾ … Continued