

ಶಿರಸಿ: ಬೆಳೆ ರಕ್ಷಣೆಗಾಗಿ ಭತ್ತದ ಗದ್ದೆಯ ಸುತ್ತ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಹರಿಸಿದ ಪರಿಣಾಮ ಕಾಡಾನೆಯೊಂದು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಗಿದೆ.
ಕಾಡಾನೆಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ರೈತನೋರ್ವ ತನ್ನ ಮಾಲ್ಕಿ ಜಮೀನಿನ ಭತ್ತದ ಗದ್ದೆಯ ಸುತ್ತ ತಂತಿಬೇಲಿ ಅಳವಡಿಸಿದ್ದು ಇದಕ್ಕೆ ನೇರವಾಗಿ ವಿದ್ಯುತ್ ಹರಿಸಿದ್ದ ಎನ್ನಲಾಗಿದೆ. ಆದರೆ ಈ ಬೇಲಿ ವಿದ್ಯುತ್ ಸ್ಪರ್ಶಿಸಿ ಗಂಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಶಿರಸಿ ವಿಭಾಗದ ಬನವಾಸಿ ವೃತ್ತದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಆನೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮಳಲಗಾಂವದ ಶಿವಪ್ಪ ನಾಯ್ಕ (76) ಹಾಗೂ ನಾಗರಾಜ ನಾಯ್ಕ (43) ಎಂದು ಗುರುತಿಸಲಾಗಿದೆ. ಕೃಷಿ ಜಮೀನಿಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಅಕ್ರಮವಾಗಿ ಹಾಆಕಲಾಗಿದ್ದ ವಿದ್ಯುತ್ ತಂತಿಯನ್ನು ವಶಕ್ಕೆ ಪಡೆಯಲಾಗಿದೆ.





ನಿಮ್ಮ ಕಾಮೆಂಟ್ ಬರೆಯಿರಿ