ಚೀನಾ: 25 ವರ್ಷಗಳಲ್ಲಿ ಮೊದಲ ಬಾರಿಗೆ ಕ್ಸಿ ಜಿನ್‌ಪಿಂಗ್‌ರ ಹೊಸ ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ

ಶನಿವಾರ ಬಿಡುಗಡೆಯಾದ ಹೊಸ ಪಾಲಿಟ್‌ಬ್ಯುರೊ ರೋಸ್ಟರ್ ಪ್ರಕಾರ, ಚೀನೀ ಕಮ್ಯುನಿಸ್ಟ್ ಪಕ್ಷದ ಉನ್ನತ ಸಂಸ್ಥೆಯು 25 ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳಾ ಸದಸ್ಯರನ್ನು ಹೊಂದಿಲ್ಲ. ಹಿಂದಿನ ಪಾಲಿಟ್‌ಬ್ಯೂರೊದ ಭಾಗವಾಗಿದ್ದ ಏಕೈಕ ಮಹಿಳೆ ಸನ್ ಚುನ್ಲಾನ್ ನಿವೃತ್ತರಾಗಿದ್ದಾರೆ. ಪ್ರಾಬಲ್ಯದ ಸಮಿತಿಗೆ ಯಾವುದೇ ಮಹಿಳೆಯನ್ನು ನೇಮಿಸಲಾಗಿಲ್ಲ. ಅನೇಕ ವರದಿಗಳ ಪ್ರಕಾರ ಕ್ಸಿ ಜಿನ್‌ಪಿಂಗ್ ಅವರು 205-ಸದಸ್ಯರ ಕೇಂದ್ರ ಸಮಿತಿ, 24-ಸದಸ್ಯರ ಪಾಲಿಟ್‌ಬ್ಯೂರೊ ಮತ್ತು 7-ಸದಸ್ಯರ ಸ್ಥಾಯಿ ಸಮಿತಿಯನ್ನು ಪುನರ್ರಚನೆ ಮಡಿದಂತೆ ಕೆಲವು ಉನ್ನತ ಶ್ರೇಣಿಯ ಅಧಿಕಾರಿಗಳ ಬಡ್ತಿಗಳನ್ನೂ ಮಾಡಿದರು.
ಕ್ಸಿ ಅವರ ಪೂರ್ವವರ್ತಿ ಚೀನಾದ ನಾಯಕ ಹು ಜಿಂಟಾವೊ ಅವರನ್ನು 20 ನೇ ಪಕ್ಷದ ಕಾಂಗ್ರೆಸ್‌ನ ಮುಕ್ತಾಯ ಸಮಾರಂಭದಲ್ಲಿ ಸಿಬ್ಬಂದಿ ಸದಸ್ಯರು ಸಭಾಂಗಣದಿಂದ ಅನಿರೀಕ್ಷಿತವಾಗಿ ಹೊರಹಾಕಿದರು. ಚೀನಾದ ದೂರದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದ ಮಾಜಿ ಪಕ್ಷದ ಕಾರ್ಯದರ್ಶಿ ಚೆನ್ ಕ್ವಾಂಗುವೊ ಅವರನ್ನು ಸಹ ಪೊಲಿಟ್‌ಬ್ಯುರೊದಿಂದ ತೆಗೆದುಹಾಕಲಾಗಿದೆ. ಅವರು ಉಯ್ಘರ್ ಸಮುದಾಯದ ವಿರುದ್ಧ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಹೊಂದಿದ್ದರು ಮತ್ತು ಅಮೆರಿಕ ಅವರ ಮೇಲೆ ನಿಷೇಧ ಹೇರಿತ್ತು.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮರು ಆಯ್ಕೆ
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೂರನೇ ಅವಧಿಗೆ ಅಧಿಕಾರ ಪಡೆದರು, ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ನಂತರ ಸತತವಾಗಿ ಮೂರು ಬಾರಿ ಆಯ್ಕೆಯಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ (CPC) ಮೊದಲ ನಾಯಕರಾದರು. 69 ವರ್ಷ ವಯಸ್ಸಿನ ಹೊಸ ಏಳು ಸದಸ್ಯರ ಸ್ಥಾಯಿ ಸಮಿತಿಯಿಂದ ಐದು ವರ್ಷಗಳ ಅವಧಿಗೆ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕ್ಸಿ ಮೊದಲ ಬಾರಿಗೆ 2012 ರಲ್ಲಿ ಆಯ್ಕೆಯಾದರು ಮತ್ತು ಈ ವರ್ಷ 2022 ರಲ್ಲಿ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರು. ಚೀನಾದ ಕಮ್ಯುನಿಸ್ಟ್ ಪಕ್ಷದ (CCP) ವಾರದ 20 ನೇ ಪಕ್ಷದ ಕಾಂಗ್ರೆಸ್ ಶನಿವಾರ ಮುಕ್ತಾಯವಾಯಿತು. ಚೀನಾದ ಅತ್ಯಂತ ಶಕ್ತಿಶಾಲಿ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ, ಪಾಲಿಟ್‌ಬ್ಯುರೊ ಸ್ಥಾಯಿ ಸಮಿತಿಯಲ್ಲಿ ಹೆಚ್ಚಾಗಿ ಕ್ಸಿ ಅವರ ಮಿತ್ರರು ಮತ್ತು ನಿಷ್ಠಾವಂತರನ್ನೇ ಹೊಂದಿದೆ.
ಚೀನೀ ಕಮ್ಯುನಿಸ್ಟ್ ಪಕ್ಷದ (CCP) 20 ನೇ ಕಾಂಗ್ರೆಸ್ ಚೀನೀ ಸಂವಿಧಾನದ ಚಾರ್ಟರ್ ಅನ್ನು ತಿದ್ದುಪಡಿ ಮಾಡಿತು. “ಹೋರಾಟ” ಅಥವಾ “ಹೋರಾಟದ ಮನೋಭಾವದಂತಹ ಹಲವಾರು ಕ್ಸಿ ಬೆಂಬಲಿತ ನುಡಿಗಟ್ಟುಗಳನ್ನು ಸೇರಿಸಲಾಗಿದೆ. ಬಾಹ್ಯ ಬೆದರಿಕೆಗಳು ಮತ್ತು ಮಿಲಿಟರಿ ಅಪಾಯಗಳನ್ನು ಎತ್ತಿ ತೋರಿಸುವಾಗ ಈ ಪದಗಳನ್ನು ಕ್ಸಿ ಹೆಚ್ಚಾಗಿ ಬಳಸುತ್ತಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement