ಉತ್ತರಾಖಂಡದಲ್ಲಿ ಹಿಮಪದರ ಕುಸಿತ: ೨೬ ಸಾವು, 15 ಜನರ ರಕ್ಷಣೆ

ಉತ್ತರಾಖಂಡ: ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ನಂತರ ಉತ್ತರಾಖಂಡದ ತಪೋವನ್ ಜಲ-ವಿದ್ಯುತ್ ಶಕ್ತಿ ಅಣೆಕಟ್ಟು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎಂದು ಭಾರತೀಯ ವಾಯುಪಡೆಯ ಆರಂಭಿಕ ವರದಿಯಲ್ಲಿ ತೋರಿಸಲಾಗಿದೆ.
ಧೌಲಿ ಗಂಗಾ ಮತ್ತು ರಿಷಿ ಗಂಗಾ ನದಿಗಳ ಸಂಗಮದಲ್ಲಿರುವ ಅಣೆಕಟ್ಟು ಸಂಪೂರ್ಣವಾಗಿ ನಾಶವಾಗಿದೆ ಎಂದು ಸಮೀಕ್ಷೆಯ ಚಿತ್ರಗಳು ತೋರಿಸಿದೆ. ಮಲಾರಿ ಕಣಿವೆಯ ಪ್ರವೇಶದ್ವಾರದಲ್ಲಿ ಮತ್ತು ತಪೋವನ್ ಬಳಿಯಿರುವ ಎರಡು ಸೇತುವೆಗಳು ಸಹ ಕೊಚ್ಚಿ ಹೋಗಿವೆ.
ಅಣೆಕಟ್ಟನ್ನು ತಪೋವನ್ ಹೈಡ್ರೊ-ಎಲೆಕ್ಟ್ರಿಕ್ ಪವರ್ ಡ್ಯಾಮ್ ಎಂದು ಕರೆಯಲಾಗುತ್ತದೆ. ಇದು ಧೌಲಿ ಗಂಗಾ ಮತ್ತು ರಿಷಿ ಗಂಗಾ ಸಂಗಮದಲ್ಲಿದೆ. “ಕಣಿವೆಯ ಕೆಳಭಾಗದಲ್ಲಿರುವ ನಿರ್ಮಾಣ ಕಾರ್ಯಗಳು ಮತ್ತು ಗುಡಿಸಲುಗಳು ಹಾನಿಗೀಡಾಗಿವೆ. ನಂದಾ ದೇವಿ ಹಿಮನದಿಯ ಪ್ರವೇಶದ್ವಾರದಿಂದ ಪಿಪಲ್‌ಕೋಟಿ ಮತ್ತು ಚಮೋಲಿವರೆಗೆ ಧೌಲಿ ಗಂಗಾ ಮತ್ತು ಅಲಕಾನಂದದವರೆಗೆ ಕಲ್ಲುಮಣ್ಣುಗಳು ಕಾಣಿಸಿಕೊಂಡಿವೆ” ಎಂದು ಅದು ಹೇಳಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ನಂದಾ ದೇವಿ ಹಿಮನದಿಯ ಒಂದು ಭಾಗ ಒಡೆದು ಅಲಕಾನಂದ ನದಿಯಲ್ಲಿ ಹಿಮಪಾತ ಮತ್ತು ಪ್ರವಾಹಕ್ಕೆ ಕಾರಣವಾಯಿತು, ಅಲ್ಲಿನ ಜಲವಿದ್ಯುತ್ ಕೇಂದ್ರಗಳು ನಾಸವಾಗಿದ್ದು. ಕನಿಷ್ಠ ೨೬ ಜನರು ಮೃತಪಟ್ಟಿದ್ದಾರೆ, ೧೫ ಜರನ್ನು ರಕ್ಷಿಸಲಾಗಿದ್ದು ಮತ್ತು 125ಕ್ಕೂ ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಸುರಂಗದಲ್ಲಿ ಸಿಲುಕಿರುವವರಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದೆ. ಜೆಸಿಬಿಗಳ ಸಹಾಯದಿಂದ ಸುರಂಗದೊಳಗೆ ತಲುಪುವ ಮೂಲಕ ದಾರಿ ತೆರೆಯುವ ಪ್ರಯತ್ನಗಳು ನಡೆಯುತ್ತಿವೆ. ಐಟಿಬಿಪಿ, ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರಾಣ ಕಳೆದುಕೊಂಡವರ ರಕ್ತಸಂಬಂಧಿಗಳಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಲಾ 4 ಲಕ್ಷ ರೂ.ಗಳ ನೆರವನ್ನು ಪ್ರಕಟಿಸಿದ್ದಾರೆ.ಹಾಗೂ ಪ್ರಧಅನಿ ಮೋದಿಯವರು ಮೃತರ ಕುಟುಂಬಗಳಿಗೆ ತಲಾ ೨ ಲಕ್ಷ ರೂ.ಗಳ ನೆರವು ಘೋಷಿಸಿದ್ದಾರೆ.
ಹಿಮನದಿ ಸ್ಫೋಟದ ಹಿಂದಿನ ಕಾರಣವನ್ನು ತಜ್ಞರು ನೀಡಬಹುದು ಎಂದು ಮುಖ್ಯಮಂತ್ರಿ ಹೇಳಿದ್ದು, ಜನರ ಪ್ರಾಣ ಉಳಿಸುವ ಮತ್ತು ರಕ್ಷಣಾ ಕಾರ್ಯಾಚರಣೆಯತ್ತ ಸರ್ಕಾರ ಗಮನ ಹರಿಸುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement