10ನೇ ಅವಧಿಗೆ ಸಿಎಂ ಆಗಲು ನಿತೀಶಕುಮಾರ ಸಜ್ಜು ; ಭಾರತದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆದ ಟಾಪ್‌-10 ನಾಯಕರ ವಿವರ ಇಲ್ಲಿದೆ…

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಭೂತಪೂರ್ವ ವಿಜಯ ಸಾಧಿಸಿದ್ದು, ಜೆಡಿಯು ಪಕ್ಷದ ನಾಯಕ ಮತ್ತು ಬಿಹಾರ ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದ ಕೀರ್ತಿಗೆ ಭಾಜನರಾದ ನಿತೀಶಕುಮಾರ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
ನಿತೀಶಕುಮಾರ  ಈ ಹಿಂದೆ 2000ನೇ ಇಸವಿಯಲ್ಲಿ ಏಳು ದಿನಗಳ ಕಾಲ ಸೇರಿದಂತೆ ಒಟ್ಟು ಒಂಬತ್ತು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಇದು ನಿತೀಶ ಅವರ ಗಮನಾರ್ಹ ರಾಜಕೀಯ ಪಯಣವನ್ನು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳು ಯಾರು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಟಾಪ್ 10 ಮುಖ್ಯಮಂತ್ರಿಗಳು ಯಾರು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಭಾರತದ ರಾಜಕೀಯದಲ್ಲಿ ಸುದೀರ್ಘ ಅವಧಿಗೆ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ಟಾಪ್ 10 ನಾಯಕರ ಪಟ್ಟಿ ಇಲ್ಲಿದೆ:
1 ಪವನಕುಮಾರ್ ಚಾಮ್ಲಿಂಗ್‌-ಸಿಕ್ಕಿಂ ; 24 ವರ್ಷಗಳು (ಡಿ. 12, 1994 – ಮೇ 26, 2019)
2 ನವೀನ್ ಪಟ್ನಾಯಕ್-ಒಡಿಶಾ ; 24 ವರ್ಷಗಳು (ಮಾ. 5, 2000 – ಜೂನ್ 12, 2024)
3 ಜ್ಯೋತಿ ಬಸು-ಪಶ್ಚಿಮ ಬಂಗಾಳ ; 23 ವರ್ಷಗಳು (ಜೂನ್ 21, 1977 – ನ. 5, 2000)
4 ಗೆಗಾಂಗ್ ಅಪಾಂಗ್-ಅರುಣಾಚಲ ಪ್ರದೇಶ ; 22 ವರ್ಷಗಳು (ಜನವರಿ 18, 1980 – ಜನವರಿ 19, 1999; ಆಗಸ್ಟ್ 3, 2003 – ಏಪ್ರಿಲ್ 9, 2007)
5 ಲಾಲ್ ಥನ್ಹಾವ್ಲಾ -ಮಿಜೋರಾಂ ; 22 ವರ್ಷಗಳು (ಮೇ 5, 1984 – ಆಗಸ್ಟ್ 21, 1986; ಜನವರಿ 24, 1989 – ಡಿಸೆಂಬರ್ 3, 1998; ಡಿಸೆಂಬರ್ 11, 2008 – ಡಿಸೆಂಬರ್ 15, 2018)
6 ವೀರಭದ್ರ ಸಿಂಗ್‌-ಹಿಮಾಚಲ ಪ್ರದೇಶ ; 21 ವರ್ಷಗಳು (ಏಪ್ರಿಲ್ 8, 1983 – ಮಾರ್ಚ್ 5, 1990; ಡಿಸೆಂಬರ್ 3, 1993 – ಮಾರ್ಚ್ 24, 1998; ಮಾರ್ಚ್ 6, 2003 – ಡಿಸೆಂಬರ್ 30, 2007; ಡಿಸೆಂಬರ್ 25, 2012 – ಡಿಸೆಂಬರ್ 27, 2017)
7 ಮಾಣಿಕ್ ಸರ್ಕಾರ-ತ್ರಿಪುರ ; 20 ವರ್ಷಗಳು (ಮಾರ್ಚ್‌ 11, 1998 – ಮಾರ್ಚ್‌ 9, 2018)
8 ನಿತೀಶಕುಮಾರ- ಬಿಹಾರ ; 19 ವರ್ಷಗಳು (ಮಾರ್ಚ್ 3 – 11, 2000; ನವೆಂಬರ್ 24, 2005 – ಮೇ 20, 2014; ಫೆಬ್ರವರಿ 2, 2015 – ಪ್ರಸ್ತುತ)
9 ಎಂ. ಕರುಣಾನಿಧಿ-ತಮಿಳುನಾಡು ; 18 ವರ್ಷಗಳು (ಫೆಬ್ರವರಿ 10, 1969 – ಜನವರಿ 31, 1976; ಜನವರಿ 27, 1989 – ಜನವರಿ 30, 1991; ಮೇ 13, 1996 – ಮೇ 14, 2001; ಮೇ 13, 2006 – ಮೇ 16, 2011))
10 ಪ್ರಕಾಶ್ ಸಿಂಗ್ ಬಾದಲ್‌-ಪಂಜಾಬ್18 ವರ್ಷಗಳು (ಮಾರ್ಚ್ 27, 1970 – ಜೂನ್ 14, 1971; ಜೂನ್ 20, 1977 – ಫೆಬ್ರವರಿ 17, 1980; ಫೆಬ್ರವರಿ 12, 1997 – ಫೆಬ್ರವರಿ 26, 2002; ಮಾರ್ಚ್ 1, 2007 – ಮಾರ್ಚ್ 16, 2017)

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement