ವೀಡಿಯೊ..| ಕರ್ನಾಟಕದ ಆಳಂದ ಮತಕ್ಷೇತ್ರದ 6,000ಕ್ಕೂ ಹೆಚ್ಚು ಮತದಾರರ ಹೆಸರು ತೆಗೆದುಹಾಕಲು ಯತ್ನ : ರಾಹುಲ್ ಗಾಂಧಿ ಆರೋಪ

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ತಮ್ಮ ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಮತದಾರರ ಪಟ್ಟಯಿಂದ ಮತದಾರರ ಹೆಸರನ್ನು ಸಾಮೂಹಿಕವಾಗಿ ಅಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇಂದು ಗುರುವಾರ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಸಾಮೂಹಿಕ ಮತ ಅಳಿಸುವಿಕೆ ಯತ್ನ ನಡೆದಿದ್ದು, ಆರೋಪಗಳನ್ನು ದೃಢೀಕರಿಸಲು ಸ್ಪಷ್ಟ ಪುರಾವೆಗಳು ನನ್ನ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ. ಈ ಮತದಾರರ ಗುರುತಿನ ಚೀಟಿಗಳನ್ನು ಕರ್ನಾಟಕದ ಹೊರಗಿನಿಂದ ನಕಲಿ ಲಾಗಿನ್‌ಗಳು ಮತ್ತು ಫೋನ್ ಸಂಖ್ಯೆಗಳನ್ನು ಬಳಸಿ ಅಳಿಸಲಾಗಿದೆ.   ಈ ಮತದಾರರ ಗುರುತಿನ ಚೀಟಿಗಳನ್ನು ವ್ಯಕ್ತಿಗಳು ಅಳಿಸಿಲ್ಲ, ಬದಲಾಗಿ ಸಾಫ್ಟ್‌ವೇರ್ ಬಳಸಿ ಮತ್ತು ಕೇಂದ್ರೀಕೃತ ರೀತಿಯಲ್ಲಿ ಅಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮತಗಳನ್ನು ಅಳಿಸಲು ಪ್ರಯತ್ನಿಸಿದರು. 2023 ರ ಚುನಾವಣೆಯಲ್ಲಿ ಆಳಂದದಲ್ಲಿ ಅಳಿಸಲಾದ ಒಟ್ಟು ಮತಗಳ ಸಂಖ್ಯೆ 6,018 ಕ್ಕಿಂತ ಹೆಚ್ಚು, ಆದರೆ ಯಾರೋ ಆ 6018 ಮತಗಳನ್ನು ಅಳಿಸುವಾಗ ಸಿಕ್ಕಿಬಿದ್ದರು, ಅದು ಕಾಕತಾಳೀಯ. ಆಳಂದ ಕ್ಷೇತ್ರದಲ್ಲಿ ತನ್ನ ಚಿಕ್ಕಪ್ಪನ ಮತವನ್ನು ಅಳಿಸಲಾಗಿದೆ ಎಂಬುದು ಬೂತ್ ಮಟ್ಟದ ಅಧಿಕಾರಿಯ ಗಮನಕ್ಕೆ ಬಂದಾಗ ತಮ್ಮ ಚಿಕ್ಕಪ್ಪನ ಮತವನ್ನು ಯಾರು ಅಳಿಸಿದ್ದಾರೆಂಬ ಬಗ್ಗೆ ಅವರು ಪರಿಶೀಲಿಸಿದರು. ಅವರು ತಮ್ಮ ನೆರೆಹೊರೆಯವರನ್ನು ಕೇಳಿದರು, ಮತವನ್ನು ಅಳಿಸಿದ ವ್ಯಕ್ತಿ ಯಾರು ಎಂದು ಅವರಿಗೆ ಗೊತ್ತಾಗಲಿಲ್ಲ ಎಂದ ರಾಹುಲ್‌ ಗಾಂಧಿ ಯಾವುದೋ ಶಕ್ತಿ  ಪ್ರಕ್ರಿಯೆಯನ್ನು ಹೈಜಾಕ್ ಮಾಡಿ ಮತವನ್ನು ಅಳಿಸಿದೆ ಎಂದು ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ ವಿವಿಧ ಚುನಾವಣೆಗಳಲ್ಲಿ, ಕೆಲವು ಶಕ್ತಿಗಳು ಭಾರತದಾದ್ಯಂತ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಅಳಿಸಿ ಹಾಕುತ್ತಿದ್ದಾರೆ. ವಿಪಕ್ಷಗಳಿಗೆ ಮತ ಹಾಕುತ್ತಿರುವ ಮತಗಳನ್ನು ನಿರ್ದಿಷ್ಟವಾಗಿ ಗುರಿಮಾಡಿಕೊಳ್ಳಲಾಗಿದೆ ಎಂದು  ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವದ ಕೊಲೆಗಾರರ ರಕ್ಷಣೆ’
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು “ಮತ ಕಳ್ಳರನ್ನು” ರಕ್ಷಿಸುತ್ತಿದ್ದಾರೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.”ನಾನು ಇದನ್ನು ಲಘುವಾಗಿ ಹೇಳುತ್ತಿಲ್ಲ, ಲೋಕಸಭೆಯಲ್ಲಿ ವಿಪಕ್ಷದ ನಾಯಕನಾಗಿ ಹೇಳುತ್ತಿದ್ದೇನೆ. ಭಾರತದ ಮುಖ್ಯ ಚುನಾವಣಾ ಆಯುಕ್ತರು ಮತ ಕಳ್ಳರನ್ನು ರಕ್ಷಿಸುತ್ತಿದ್ದಾರೆ. ಇದು ಕಪ್ಪು ಬಿಳುಪಿನ ಪುರಾವೆ; ಇದರಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಹೇಳಿದರು.
ಕರ್ನಾಟಕದ ತನಿಖಾಧಿಕಾರಿಗಳು ಕಾರ್ಯಾಚರಣೆಯ ಮೂಲವನ್ನು ಬಹಿರಂಗಪಡಿಸಬಹುದಾದ ಮೂಲಭೂತ ಡಿಜಿಟಲ್ ಸುಳಿವುಗಳಿಗಾಗಿ ಚುನಾವಣಾ ಆಯೋಗಕ್ಕೆ ಪದೇ ಪದೇ ಮನವಿ ಮಾಡುತ್ತಿದ್ದಾರೆ. ಆದರೆ, ಆ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಆರೋಪಿಸಿದರು.
“ಕರ್ನಾಟಕದಲ್ಲಿ ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ಕರ್ನಾಟಕದ ಸಿಐಡಿ 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಕಳುಹಿಸಿದೆ ಮತ್ತು ಅವರು ಚುನಾವಣಾ ಆಯೋಗದಿಂದ ಕೆಲವು ಸರಳ ಸಂಗತಿಗಳ ಬಗ್ಗೆ ಮಾಹಿತಿ ಕೇಳಿದೆ. ಅವರು ಅದನ್ನು ಏಕೆ ನೀಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಆಧಾರ ರಹಿತ ಆರೋಪ…
“ರಾಹುಲ್ ಗಾಂಧಿಯವರು ತಪ್ಪಾಗಿ ಭಾವಿಸಿದ್ದಾರೆ. ಯಾವುದೇ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ. ಬಾಧಿತ ವ್ಯಕ್ತಿಗೆ ಕೇಳಲು ಅವಕಾಶ ನೀಡದೆ ಯಾವುದೇ ಅಳಿಸುವಿಕೆ ನಡೆಯುವುದಿಲ್ಲ” ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಭಾರತದ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶಕುಮಾರ, ರಾಹುಲ್ ಗಾಂಧಿ ಮಾಡಿದ ಆರೋಪಗಳು ಹುರುಳಿಲ್ಲದ ಆರೋಪಗಳಾಗಿದ್ದು, ಆಧಾರರಹಿತವಾಗಿವೆ. ಯಾವುದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿಯವರ ಚಿಂತನೆ ತಪ್ಪು. ಯಾಕೆಂದರೆ ವ್ಯಕ್ತಿಯ ಒಪ್ಪಿಗೆ ಇಲ್ಲದೆಯೇ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement