ಚೀನಾದಲ್ಲಿ ಕೊರೊನಾ ವೈರಸ್‌, ಡಾಗ್‌ ವೈರಸ್‌ ಆಯ್ತು: ಈಗ ಮಂಕಿ ವೈರಸ್‌ ಪತ್ತೆ, ಪಶು ವೈದ್ಯನ ಸಾವು

ಬೀಜಿಂಗ್: ಕೊರೊನಾ ವೈರಸ್ ಈಗ ತನ್ನ ಮೂರನೇ ಅಲೆ ತೋರಿಸುತ್ತಿರುವ ಬೆನ್ನಲ್ಲೇ ಈಗ ಚೀನಾದಲ್ಲಿ ಮಂಕಿ ವೈರಸ್ ಪತ್ತೆಯಾಗಿದೆ.
ಮಾರ್ಚ್ ಆರಂಭದಲ್ಲಿ ಮೃತಪಟ್ಟ ಎರಡು ಕೋತಿಗಳನ್ನು ಅಧ್ಯಯನ ನಡೆಸಿದ್ದ ಬೀಜಿಂಗ್ ಮೂಲದ ಪಶುವೈದ್ಯನೇ ಈ ಮಂಕಿ ಬಿ ವೈರಸ್ ಸೋಂಕಿಗೆ ತುತ್ತಾಗಿ ಸಾವಿಗೀಡಾಗಿದ್ದಾನೆ ಎಂದು ಚೀನಾದ ಸಿಡಿಸಿ ವೀಕ್ಲಿ ವರದಿ ಮಾಡಿದೆ.
ಸಿಡಿಸಿ ವೀಕ್ಲಿ ವರದಿ ಪ್ರಕಾರ, 53 ವರ್ಷದ ಪಶುವೈದ್ಯನಿಗೆ ಆರಂಭದಲ್ಲಿ ವಾಂತಿ ಬಂದಿತ್ತು. ನಂತರ ಜ್ವರ, ನರ ರೋಗದ ಲಕ್ಷಣಗಳು ಕಂಡು ಬಂತು. ಕೂಡಲೇ ಆಸ್ಪತ್ರೆಗಳಿಗೆ ವೈದ್ಯನನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೇ 27 ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ವಿಶಿಷ್ಟ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ಸಂಶೋಧಕರು ಮುಂದಿನ ಅಧ್ಯಯನಕ್ಕಾಗಿ ಆತನ ದೇಹದಿಂದ ರಕ್ತ, ಮೂಗಿನ ದ್ರವ, ಗಂಟಲ ದ್ರವ ಮತ್ತು ಪ್ಲಾಸ್ಮಾ ಸೇರಿದಂತೆ ಹಲವಾರು ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಈ ವೈರಸ್ ಹೊಸದೆನಲ್ಲ. 1992ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಈ ವೈರಸ್‍ಗೆ ಭಯಪಡುವ ಅಗತ್ಯವಿಲ್ಲ. ಕೋತಿಯ ಜೊತೆ ನೇರವಾಗಿ ಸಂಪರ್ಕ ಹೊಂದಿದರೆ ಮಾತ್ರ ಈ ಸೋಂಕು ಬರುತ್ತದೆ. ವೈರಸ್ ದೇಹ ಪ್ರವೇಶಿಸಿದ 1-3 ವಾರದದಲ್ಲಿ ಈ ಸೋಂಕಿನ ಲಕ್ಷಣಗಳು ಕಾಣಿಸುತ್ತದೆ. ಸಾವಿನ ಪ್ರಮಾಣವು 70% -80% ರಷ್ಟು ಇರುತ್ತದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಚೀನಾದಲ್ಲಿ ಕೊರೊನಾ ವೈರಸ್‌ ಆಯಿತು, ನಂತರ ಡಾಗ್‌ ವೈರಸ್‌ ಆಯಿತು, ಈಗ ಮಂಕಿ ವೈರಸಸ್‌ ಬಂದಿದೆ..!

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement