ತನಿಖೆ ನಡೆಸಲು ನಮಗೆ ಅಧಿಕಾರವಿದೆ: ಸಾ.ರಾ.ಮಹೇಶ ಆಪಾದನೆಗೆ ಉತ್ತರ ನೀಡಿದ ಮೌದ್ಗೀಲ್

ಮೈಸೂರು: ಶಾಸಕ ಸಾ.ರಾ.ಮಹೇಶ್‌ ಭೂ ದಾಖಲೆಗಳ ಸರ್ವೆ ಕುರಿತು ಮಾಡಿರುವ ಆಪಾದನೆಗಳಿಗೆ ಭೂದಾಖಲೆಗಳ ಆಯುಕ್ತ ಮನೀಶ್‌ ಮೌದ್ಗೀಲ್‌ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ತನಿಖೆಗೆ ಆದೇಶ ನೀಡಲು ತಮಗೆ ಇರುವ ಅಧಿಕಾರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ನಾನು ಸರ್ವೆಗೆ ಆದೇಶಿಸಿದ್ದೇನೆಯೇ ಹೊರತು ಮರು ಸಮೀಕ್ಷೆಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಾಡಿದ್ದು ಸರ್ವೆ ಆಗಿರಲಿಲ್ಲ. ಆದರೆ ಈಗ ಅರ್ಜಿ ಹಾಕಿರುವವರು ಹಲವು ಮಾಹಿತಿ ಕೋರಿದ್ದು, ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಹೀಗಾಗಿಯೇ ಹೊಸದಾಗಿ ಸರ್ವೆ ನಡೆಸಲು ಆದೇಶಿಸಲಾಗಿದೆʼ ಎಂದು ಮೌದ್ಗೀಲ್‌ ಹೇಳಿದ್ದಾರೆ ಎಂದು ಆಂದೋಳನ.ಇನ್‌ ವರದಿ ಹೇಳಿದೆ.
ಸಾ.ರಾ.ಮಹೇಶ್​ ಅವರಿಗೆ ಸಂಬಂಧಿಸಿದಂತೆ ಹಲವು ಅಕ್ರಮಗಳ ಆರೋಪ ಕೇಳಿಬಂದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ 6ರಿಂದ 7. ಈ ಹಿಂದೆಯೂ ಲಿಖಿತ ರೂಪದಲ್ಲಿ ಹಲವು ಅಕ್ರಮಗಳ ಬಗ್ಗೆ ಆರೋಪಿಸಲಾಗಿತ್ತು. ಪ್ರಾದೇಶಿಕ ಆಯುಕ್ತರಿಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಮಾತ್ರ (ರಾಜಕಾಲುವೆ ಒತ್ತುವರಿ) ವಿಚಾರಣೆ ನಡೆಸಲು ಆದೇಶಿಸಲಾಗಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಭೂಮಿ ಒತ್ತುವರಿ, ಕೆರೆಯ ಬಫರ್​ ವಲಯಗಳಲ್ಲಿ ರೆಸಾರ್ಟ್​ಗಳಿಗೆ ಅನುಮೋದನೆ ನೀಡಿರುವ ಬಗ್ಗೆ ವಿಚಾರಣೆ ನಡೆದಿರಲಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಅರ್ಜಿದಾರರು ಕೋರಿದ್ದರು.
ಹೀಗಾಗಿ ವಾಸ್ತವಾಂಶ ಬೆಳಕಿಗೆ ತರಲು ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಯಾವುದೇ ನಿರ್ದಿಷ್ಟ ಆರೋಪ ಅಥವಾ ಒತ್ತವರಿಗೆ ಸಂಬಂಧಿಸಿದ ತನಿಖೆ ಇದಲ್ಲ. ಸರ್ವೆ ಆಯುಕ್ತರ ನಿರ್ದೇಶನದ ಮೇಲೆ ಈ ಹಿಂದೆಯೇ ಸರ್ವೆ ನಡೆದಿತ್ತು. ಅದು ಮುಕ್ತಾಯವಾಗಿದೆ ಎಂಬ ಹೇಳಿಕೆಗಳು ಆಧಾರರಹಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement