ರಾಜಸ್ಥಾನದ ಕೋಟಾದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಯುವಕ ಪೊಲೀಸ್ ಜೀಪ್ ಹತ್ತಿ ಗಲಾಟೆ ಮಾಡಿದ ನಾಟಕೀಯ ದೃಶ್ಯಗಳು ವೈರಲ್ ಆಗಿವೆ. ಸೆಪ್ಟೆಂಬರ್ 19 ರಂದು ಕೋಟಾದ ರಾಂಪುರ ಪ್ರದೇಶದಲ್ಲಿ ಓಡಿಹೋಗಲು ಯತ್ನಿಸಿದ ಇಬ್ಬರನ್ನು ಕರೆತರಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. 22 ವರ್ಷದ ಯುವಕ ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ. 17 ವರ್ಷದ ಬಾಲಕಿ ಪೊಲೀಸ್ ಜೀಪಿನ ಛಾವಣಿಯ ಮೇಲೆ ಹತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಇಬ್ಬರು ಗದ್ದಲ ಎಬ್ಬಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಹದಿಹರೆಯದ ಹುಡುಗಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು, ಇದರಿಂದಾಗಿ ಆಕೆಯ ಕುಟುಂಬವು ಕೋಟಾದ ಹೊರವಲಯದಲ್ಲಿರುವ ನಾಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ರಾಂಪುರದ ಬಳಿ ಇವರಿಬ್ಬರು ಇರುವ ಮಾಹಿತಿ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಅಲ್ಲಿಗೆ ಬಂದಾಗ ಸ್ಥಳೀಯ ಎಂದು ಗುರುತಿಸಲಾದ ಯುವಕ ಬಾಲಕಿಯೊಂದಿಗೆ ಇದ್ದನೆಂದು ವರದಿಯಾಗಿದೆ.
ನಂತರ ನಡೆದದ್ದು ಗದ್ದಲ ಹಾಗೂ ಗೊಂದಲ. ಅಧಿಕಾರಿಗಳು ಇವರಿಬ್ಬರನ್ನು ಪೊಲೀಸ್ ಜೀಪಿನಲ್ಲಿ ಸುರಕ್ಷಿತವಾಗಿ ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದಾಗ, ಇಬ್ಬರೂ ಹೋಗಲು ನಿರಾಕರಿಸಿದ್ದಾರೆ. ಯುವಕ ಮೊದಲು ಹುಡುಗಿಯನ್ನು ಪೊಲೀಸ್ ವಾಹನದ ಛಾವಣಿಯ ಮೇಲೆ ಹತ್ತಿಸಿದ ನಂತರ ತಾನೂ ಏರಿದ್ದಾನೆ. ಅವರು ನಂತರ ಕೂಗಾಡಲು ಪ್ರಾರಂಭಿಸಿದ್ದಾರೆ. ಪೊಲೀಸ್ ಜೀಪಿನಿಂದ ಕೆಳಗಿಳಿಯಲು ನಿರಾಕರಿಸಿದರು.
ಇದನ್ನು ನೋಡಲು ಜನರು ಸೇರಿದ್ದರಿಂದ ಸಂಚಾರ ಸ್ಥಗಿತಗೊಂಡಿತು. ಹತ್ತು ನಿಮಿಷಗಳ ಕಾಲ ಈ ಡ್ರಾಮಾ ನಡೆಯಿತು, ಆ ಸಮಯದಲ್ಲಿ ಹುಡುಗಿ “ಅವನನ್ನು ಹೋಗಲು ಬಿಡಿ” ಎಂದು ಪದೇ ಪದೇ ಕೂಗಿ ಹೇಳುತ್ತಿದ್ದಳು. ಯುವಕ ಸಂಪೂರ್ಣವಗಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಗೆ ಪೊಲೀಸರು ಅವರನ್ನು ಕೆಳಗಿಳಿಸಿ ರಾಂಪುರ ಕೊತ್ವಾಲಿ ಠಾಣೆಗೆ ಕರೆದೊಯ್ದರು. ಯುವಕನ ವಿರುದ್ಧ ಸಾರ್ವಜನಿಕ ಅಶ್ಲೀಲತೆ, ಗೊಂದಲ ಸೃಷ್ಟಿಸುವುದು ಮತ್ತು ಅಪ್ರಾಪ್ತ ವಯಸ್ಕನೊಂದಿಗೆ ಓಡಿಹೋಗಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ