ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾತನಾಡುತ್ತಿದ್ದಾಗ ಅವರ ವಿರುದ್ಧ ಘೋಷಣೆ ಕೂಗಿ ಅಡ್ಡಿಪಡಿಸುತ್ತಿದ್ದ ವಿಪಕ್ಷದ ನಾಯಕರಿಗೆ ಮೋದಿ ನೀರು ಕೊಟ್ಟಿರುವ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.
ಸುಮಾರು 135 ನಿಮಿಷಗಳ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ವಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿ ಪದೇ ಪದೇ ಅಡ್ಡಿಪಡಿಸಿದರು. ಅಡೆತಡೆಗಳು ಪ್ರಾಥಮಿಕವಾಗಿ ಮಣಿಪುರದ ಮೇಲೆ ಕೇಂದ್ರೀಕೃತವಾಗಿತ್ತು. ಗಮನಾರ್ಹ ಕ್ಷಣದಲ್ಲಿ, ಪ್ರಧಾನಿ ಮೋದಿ ಅವರು ತಮ್ಮ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ವಿಪಕ್ಷದ ಸಂಸದರಿಗೆ ಒಂದು ಲೋಟ ನೀರು ನೀಡಿದರು. ಪ್ರತಿಪಕ್ಷದ ಸಂಸದರೊಬ್ಬರು ನೀರನ್ನು ಸ್ವೀಕರಿಸಿದರು ಇದು ಪ್ರಧಾನಿಯ ಸೌಹಾರ್ದತೆ ಮತ್ತು ಸ್ಥೈರ್ಯದ ಸೂಚಕವಾಗಿ ಕಂಡುಬಂದಿದೆ.
ವೀಡಿಯೊದಲ್ಲಿ, ವಿಪಕ್ಷದ ಸಂಸದರು, ಹೆಚ್ಚಾಗಿ ಕಾಂಗ್ರೆಸ್ಸಿನವರು ಸ್ಪೀಕರ್ ಓಂ ಬಿರ್ಲಾ ಅವರ ಮುಂದಿನ ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಈ ವೇಳೆ ಸದನದ ನಾಯಕರಾದ ಪ್ರಧಾನಿ ಮೋದಿ ಮುಂಭಾಗದಲ್ಲಿ ಸೀಟಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯಕ್ಕೆ ಉತ್ತರ ನೀಡುತ್ತಿದ್ದರು. ಆಗ ವಿಪಕ್ಷದ ಸಂಸದರಿಗೆ ನೀರು ನೀಡುವುದನ್ನು ಕಾಣಬಹುದು. ಓರ್ವ ಸಂಸದರು ಅದನ್ನು ತಿರಿಸ್ಕರಿಸಿದರು. ಆದಾಗ್ಯೂ, ಬಾವಿಯಲ್ಲಿದ್ದ ಅವರ ಸಹೋದ್ಯೋಗಿ ಸಂಸದರು ನೀರಿನ ಲೋಟದ ಆಫರ್ ಅನ್ನು ಸ್ವೀಕರಿಸಲು ನಿರ್ಧರಿಸಿದರು ಮತ್ತು ಕುಡಿಯಲು ಲೋಟವನ್ನು ತೆಗೆದುಕೊಂಡರು. ವಿಶೇಷವಾಗಿ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಈ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಈ ಕಾರ್ಯವು ಶೀಘ್ರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ವಿಷಯವಾಯಿತು, ಅನೇಕರು ಪ್ರಧಾನ ಮಂತ್ರಿ ಅವರ “ಬಾಸ್ ನಡೆಯನ್ನು” ಪ್ರಶಂಸಿಸಿದರು.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ
ಪ್ರಧಾನಿ ಮೋದಿ ಅವರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಅವರನ್ನು ‘ಬಾಲಕ ಬುದ್ಧಿ’ (ಬಾಲಿಶ ಮನಸ್ಸು) ಎಂದು ಲೇಬಲ್ ಮಾಡಿದರು. ಮತ್ತು ಹಲವು ವಿಚಾರಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಹಿಂಸಾಚಾರದೊಂದಿಗೆ ಹಿಂದೂಗಳನ್ನು ಸಂಯೋಜಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೋದಿ ಭಾಷಣದ ವೇಳೆ ವಿಪಕ್ಷದ ಸದಸ್ಯರನ್ನು ಪ್ರತಿಭಟನೆಗೆ ಪ್ರೋತ್ಸಾಹಿಸಿದ್ದಕ್ಕಾಗಿ ಸ್ಪೀಕರ್ ಓಂ ಬಿರ್ಲಾ ರಾಹುಲ್ ಗಾಂಧಿ ಅವರಿಗೆ ಛೀಮಾರಿ ಹಾಕಿದರು. ಸದನವು ನಂತರ ಪ್ರತಿಪಕ್ಷಗಳ ಅಡ್ಡಿಪಡಿಸುವ ನಡವಳಿಕೆಯನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿತು, ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಡಿಸಿದರು ಮತ್ತು ಗೃಹ ಸಚಿವ ಅಮಿತ್ ಶಾ ಅವರು ಅನುಮೋದಿಸಿದರು
ನಿಮ್ಮ ಕಾಮೆಂಟ್ ಬರೆಯಿರಿ