ಹುಕ್ಕೇರಿ : ಹಳ್ಳದ ನೀರಿನಲ್ಲಿ ಸಿಲುಕಿದ ಶಾಲಾ ಬಸ್‌ ; ತಪ್ಪಿದ ಅನಾಹುತ

ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೊಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಶಾಲಾ ಬಸ್ ನುಗ್ಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದ್ದು ಗ್ರಾಮಸ್ಥರು ಮಕ್ಕಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಗ್ರಾಮದ ಹಳ್ಳದ ರಸ್ತೆಯ ಮೇಲೆ ಅಪಾರ ನೀರು ಹರಿಯುತ್ತಿತ್ತು. ಇದನ್ನು ಗಮನಿಸಿಯೂ ಬಸ್‌ ಚಾಲಕ ಹಳ್ಳ ದಾಟಿಸಲು ಮುಂದಾದರು. ಅರ್ಧಕ್ಕೆ ಬರುತ್ತಿದ್ದಂತೆಯೇ ಬಸ್‌ ತಗ್ಗಿನಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿತು. ಬಸ್ಸು ನೀರಿನಲ್ಲಿ ಹೋಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಳ್ಳದ ದಂಡೆ ಮೇಲೆ ನಿಂತು ಕೂಗ ತೊಡಗಿದರು. ಚಾಲಕನಿಗೆ ಬಸ್‌ ತೇಲಿ ಹೋಗುತ್ತದೆ ಎಂಬ ಕೂಗಿ ಹೇಳಿದರು. ಕೊನೆಗೆ ಚಾಲಕ ಬಸ್ ನಿಲ್ಲಿಸಿದ್ದಾನೆ. ಅದರಲ್ಲಿ ಭೀತಿಗೊಂಡಿದ್ದ ಮಕ್ಕಳನ್ನು ಬಸ್ಸಿನಿಂದ ಹೊರಗೆ ತೆಗೆಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳನ್ನು ಗ್ರಾಮಸ್ಥರು ಸುರಕ್ಷಿತವಾಗಿ ಬಸ್ಸಿನಿಂದ ಹೊರಕರೆತಂದರು. ನೀರಿನ ಹರಿವು ಕಡಿಮೆಯಾದ ಬಳಿಕ ಬಸ್‌ ದಾಟಿಸಲಾಯಿತು. ಗ್ರಾಮಸ್ಥರ ಸಮಯ ಪ್ರಜ್ಞೆ ತೋರಿದ್ದರಿಂದ ಯಾವುದೇ ಅನಾಹುತವಾಗಿಲ್ಲ.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement