ಹೊಸ ಅಧ್ಯಯನದ ಪ್ರಕಾರ ತಾಸುಗಟ್ಟಲೆ ಕುಳಿತುಕೊಂಡೇ ಇರುವುದರಿಂದ ಸಾಮಾನ್ಯ ರೀತಿಯ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಮಾಸ್ ಜನರಲ್ ಬ್ರಿಗಮ್‌ನ ಸಂಶೋಧಕರು ಕುಳಿತುಕೊಂಡೇ ಇರುವ ಜಡ ವರ್ತನೆಯು ಎಲ್ಲಾ ನಾಲ್ಕು ವಿಧದ ಹೃದ್ರೋಗಗಳ ಹೆಚ್ಚಿನ ಅಪಾಯದ ಸಾಧ್ಯತೆಗೆ ಸಂಬಂಧಿಸಿದೆ ಎಂದು ಕಂಡುಹಿಡಿದಿದ್ದಾರೆ. , ಜಡ ನಡವಳಿಕೆ ಅಥವಾ ಕುಳಿತುಕೊಂಡೇ ಇರುವುದುಮ ಮಲಗಗಿರುವುದು ಹಗಲಿಗೆ 10.6 ಗಂಟೆಗಳನ್ನು ಮೀರಿದಾಗ ಹೃದಯ ವೈಫಲ್ಯ ಮತ್ತು ಹೃದಯರಕ್ತನಾಳದಿಂದ ಉಂಟಾಗುವ ಅಪಾಯವು 40-60 ಪ್ರತಿಶತದಷ್ಟು ಹೆಚ್ಚಾಗಬಹುದು ಎಂದು ಅಧ್ಯಯನ ಕಂಡುಕೊಂಡಿದೆ ( ರಾತ್ರಿಯಲ್ಲಿ ಮಲಗುವ ಸಮಯವನ್ನು ಒಳಗೊಂಡಿರುವುದಿಲ್ಲ). ಅಧ್ಯಯನದ ಫಲಿತಾಂಶಗಳನ್ನು ಜರ್ನಲ್ ಆಫ್ ದಿ ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯಲ್ಲಿ ಪ್ರಕಟಿಸಲಾಗಿದೆ.
“ನಮ್ಮಲ್ಲಿ ಅನೇಕರು ನಮ್ಮ ಹಗಲಿನ ಬಹುಪಾಲು ಸಮಯ ಕುಳಿತುಕೊಳ್ಳುತ್ತಾರೆ. ಮತ್ತು ದೈಹಿಕ ಚಟುವಟಿಕೆಯ ಪ್ರಾಮುಖ್ಯತೆಯನ್ನು ಬೆಂಬಲಿಸುವ ಸಾಕಷ್ಟು ಸಂಶೋಧನೆಗಳು ಇದ್ದರೂ ಅದು ಹಾನಿಕಾರಕವಾಗಿದೆ ಎಂಬ ಅಸ್ಪಷ್ಟ ಅರಿವಿನಿಂದಾಗಿ ಹೆಚ್ಚು ಕುಳಿತುಕೊಳ್ಳುವ ಸಂಭಾವ್ಯ ಪರಿಣಾಮಗಳ ಬಗ್ಗೆ ನಮಗೆ ಸ್ವಲ್ಪವೇ ತಿಳಿದಿತ್ತು ಎಂದು ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ಕಾರ್ಡಿಯಾಲಜಿ ಸಹವರ್ತಿ ಎಜಿಮಾಮಕಾ ಅಜುಫೊ ಹೇಳಿದ್ದಾರೆ.
ದೈಹಿಕವಾಗಿ ಸಕ್ರಿಯವಾಗಿರುವ ಜನರಲ್ಲಿ ಸಹ ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಭ್ಯಾಸವಿದೆ. ಏಕೆಂದರೆ ನಮ್ಮಲ್ಲಿ ಅನೇಕರು ಬಹಳಷ್ಟು ಬಹಳ ಹೊತ್ತು ಕುಳಿತುಕೊಂಡು ದಿನದ ಕೊನೆಯಲ್ಲಿ ಕೆಲವು ವ್ಯಾಯಾಮವನ್ನು ಮಾಡಿದರೆ ನಾವು ಅದನ್ನು ಸಮತೋಲನಗೊಳಿಸಬಹುದು ಎಂದು ಭಾವಿಸುತ್ತಾರೆ ಎಂದು ಅಜುಫೊ ಹೇಳುತ್ತಾರೆ.
ಅಜುಫೊ ಅವರ ತಂಡವು ಯುನೈಟೆಡ್ ಕಿಂಗ್ಡಂನ ಬಯೋಬ್ಯಾಂಕ್ ನಿರೀಕ್ಷಿತ ಸಮೂಹದಿಂದ 89,530 ವ್ಯಕ್ತಿಗಳ ಒಂದು ವಾರದ ಚಟುವಟಿಕೆ-ಟ್ರ್ಯಾಕರ್ ಡೇಟಾವನ್ನು ವಿಶ್ಲೇಷಿಸಿದೆ. ಈ ವ್ಯಕ್ತಿಗಳು ಕುಳಿತುಕೊಳ್ಳುವ ದೈನಂದಿನ ಸಮಯ ಮತ್ತು ನಾಲ್ಕು ಸಾಮಾನ್ಯ ಹೃದಯರಕ್ತನಾಳದ ಕಾಯಿಲೆಗಳಾದ ಹೃತ್ಕರ್ಣದ ಕಂಪನ, ಹೃದಯಾಘಾತ, ಹೃದಯ ವೈಫಲ್ಯ ಮತ್ತು ಹೃದಯರಕ್ತನಾಳದ ತೊಂದರೆಯಿಂದ ಸಾವುಗಳು ಸಂಭವಿಸಿಸುವ ಅಪಾಯಗಳ ನಡುವಿನ ಸಂಬಂಧಗಳನ್ನು ಅವರು ವಿಶ್ಲೇಷಿಸಿದ್ದಾರೆ. ಜಡ ವರ್ತನೆಯನ್ನು ವರ್ಗೀಕರಿಸಲು ತಂಡವು ಯಂತ್ರ ಕಲಿಕೆಯ ಅಲ್ಗಾರಿದಮ್ ಅನ್ನು ಬಳಸಿದೆ.
“ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಯಾವಾಗಲೂ ಕಡಿಮೆ ಕುಳಿತುಕೊಳ್ಳುವುದು ಮತ್ತು ಹೆಚ್ಚು ಓಡಾಡುವುದು ಉತ್ತಮ ಎಂಬ ಕಲ್ಪನೆಯನ್ನು ನಮ್ಮ ಡೇಟಾ ಬೆಂಬಲಿಸುತ್ತದೆ ಮತ್ತು ಹೃದಯ ವೈಫಲ್ಯ ಮತ್ತು ಹೃದಯರಕ್ತನಾಳದ ತೊಂದರೆಯಿಂದ ಸಂಭವಿಸಬಹುದಾದ ಸಾವಿನ ಅಪಾಯವನ್ನು ಕಡಿಮೆ ಮಾಡಲು ಅತಿಯಾದ ಕುಳಿತುಕೊಂಡೇ ಇರುವ ಅಭ್ಯಾಸ ಬಿಡುವುದು ಮುಖ್ಯ ಎಂದು ಮ್ಯಾಸಚೂಸೆಟ್ಸ್ ಜನರಲ್ ಹಾಸ್ಪಿಟಲ್‌ನಲ್ಲಿ ಕಾರ್ಡಿಯಾಕ್ ಆರ್ರಿಥ್ಮಿಯಾಸ್‌ಗಾಗಿ ಟೆಲಿಮಾಕಸ್ ಮತ್ತು ಐರೀನ್ ಡೆಮೌಲಾಸ್ ಫ್ಯಾಮಿಲಿ ಫೌಂಡೇಶನ್ ಸೆಂಟರ್‌ನಲ್ಲಿ ಎಲೆಕ್ಟ್ರೋಫಿಸಿಯಾಲಜಿಸ್ಟ್ ಮತ್ತು ಫ್ಯಾಕಲ್ಟಿ ಸದಸ್ಯ ಹಾಗೂ ಅಧ್ಯಯನ ತಂಡದ ಸಹ-ಹಿರಿಯ ಲೇಖಕ ಶಾನ್ ಖುರ್ಷಿದ್ ಹೇಳಿದ್ದಾರೆ..
ಈ ಸಂಶೋಧನೆಗಳು ಭವಿಷ್ಯದ ಮಾರ್ಗಸೂಚಿಗಳು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಬೇಕಾದ ಪ್ರಯತ್ನಗಳನ್ನು ತಿಳಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನಾ ತಂಡವು ಭಾವಿಸುತ್ತದೆ. ” ದೇಹಕ್ಕೆ ವ್ಯಾಯಾಮವು ನಿರ್ಣಾಯಕವಾಗಿದೆ, ಆದರೆ ಅತಿಯಾದ ಕುಳಿತುಕೊಳ್ಳುವಿಕೆಯನ್ನು ತಪ್ಪಿಸುವುದು ವಿಶೇಷವಾಗಿ ಮುಖ್ಯವೆಂದು ತೋರುತ್ತದೆ” ಎಂದು ಹೃದ್ರೋಗ ತಜ್ಞ ಮತ್ತು ಮ್ಯಾಸಚೂಸೆಟ್ಸ್ ಜನರಲ್ ಹಾಸ್ಪಿಟಲ್‌ನಲ್ಲಿರುವ ಕೊರಿಗನ್ ಮೈನ್‌ಹನ್ ಹಾರ್ಟ್ ಸೆಂಟರ್‌ನ ಸಹ-ನಿರ್ದೇಶಕ ಸಹ-ಹಿರಿಯ ಲೇಖಕ ಪ್ಯಾಟ್ರಿಕ್ ಎಲ್ಲಿನೋರ್ ಹೇಳುತ್ತಾರೆ. ಅಧ್ಯಯನ ಒಂದು ಅವಲೋಕನವಾಗಿದೆ, ಕುಳಿತುಕೊಳ್ಳುವುದು ಹೃದ್ರೋಗಕ್ಕೆ ಕಾರಣ ಎಂದು ಸಾಬೀತುಪಡಿಸಲು ಸಾಧ್ಯವಾಗಿಲ್ಲ, ಆದರೆ ತೊಂದರೆಯಾಗಬಹುದು ಎಂಬುದು ಕಂಡುಬಂದಿದೆ ಎಂದು ಅವರು ಹೇಳಿದರು. ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಮಟ್ಟವನ್ನು ನಿಯಂತ್ರಿಸಲು ಸ್ನಾಯುಗಳು ಬಹಳ ಮುಖ್ಯ. ತಮ್ಮ ಕೆಲಸವನ್ನು ಚೆನ್ನಾಗಿ ಮಾಡಲು, ಸ್ನಾಯುಗಳಿಗೆ ಚಲನೆ ಬೇಕು. ಇದು ಹೃದಯಕ್ಕೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಮಾಸ್ ಜನರಲ್ ಬ್ರಿಗಮ್ ಲೇಖಕರಲ್ಲಿ ತಿಮೋತಿ ಡಬ್ಲ್ಯೂ. ಚರ್ಚಿಲ್, ಜೆ. ಸವಲ್ಲ ಗುಸೆಹ್ ಮತ್ತು ಕೃಷ್ಣ ಜಿ. ಆರಗಮ್ ಸೇರಿದ್ದಾರೆ. ಹೆಚ್ಚುವರಿ ಲೇಖಕರಲ್ಲಿ ಶಿನ್ವಾನ್ ಕ್ಯಾನಿ ಮತ್ತು ಜೋಯಲ್ ಟಿ. ರಾಮೊ ಸೇರಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ