ಪಂಚಮಸಾಲಿ ಪೀಠದಿಂದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಅವರನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.
ಕೂಡಲಸಂಗಮ (Koodala Sangama) ಪಂಚಮಸಾಲಿ ಟ್ರಸ್ಟ್‌ನ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಶ್ರೀಗಳ ಬಗ್ಗೆ ಸಾಕಷ್ಟು ದೂರುಗಳು ಇವೆ. ಅವರು ಟ್ರಸ್ಟ್‌ನ ಮಾತು ಕೇಳುತ್ತಿಲ್ಲ,. ಸ್ವಾಮೀಜಿ ತಮಗಾಗಿ ಸ್ವಂತ ಆಸ್ತಿ ಮಾಡಿಕೊಳ್ಳಬಾರದು ಎಂದು ನಮ್ಮ ಬೈಲಾದಲ್ಲಿ ಇದೆ. ಆದರೆ ಸ್ವಾಮೀಜಿ ಸ್ವಂತಕ್ಕೆ ಆಸ್ತಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಸ್ವಾಮೀಜಿ ವಿರುದ್ಧ ದೂರಗಳ ಪಟ್ಟಿಯೇ ಇದೆ. ಸಮಾಜವನ್ನು ಸಂಘಟನೆ ಮಾಡುವ ಬದಲಿಗೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಣಕಾಸು ವಿಚಾರದಲ್ಲಿ ದೂರುಗಳಿವೆ. ಅವರು ಬಸವತತ್ವ ಬಿಟ್ಟು ಹಿಂದುತ್ವದ ಪರವಾಗಿ ಮಾತನಾಡುತ್ತಾರೆ ಎಂದು ಆರೋಪಿಸಿದರು. ಸ್ವಾಮೀಜಿಗೆ ಹಿಂದೆ 2014ರಲ್ಲೇ ನೋಟಿಸ್ ಕೊಡಲಾಗಿತ್ತು. ಇಂದು, ಭಾನುವಾರ ಕೂಡಲಸಂಗಮದಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಸ್ವಾಮೀಜಿಯವರನ್ನು ಪೀಠದಿಂದ ಉಚ್ಚಾಟನೆ ಮಾಡಲು 30 ಟ್ರಸ್ಟಿಗಳ ಪೈಕಿ ಹೆಚ್ಚಿನ ಟ್ರಸ್ಟಿಗಳು ಒಪ್ಪಿಗೆ ನೀಡಿದರು ಎಂದು ಅವರು ತಿಳಿಸಿದರು.
ಟ್ರಸ್ಟ್‌ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸ್ವಾಮೀಜಿ ಅವರನ್ನು ಕೆಲವರು ಬಳಸಿಕೊಂಡಿದ್ದಾರೆ. ಸ್ವಾಮೀಜಿಯವರು ಸ್ವಂತಕ್ಕೆ ಹಲವೆಡೆ ಆಸ್ತಿ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಹಲವಾರು ದೂರುಗಳಿವೆ. ಈ ಕಾರಣದಿಂದ ಟ್ರಸ್ಟ್‌ ಸದಸ್ಯರಯ ಅವರನ್ನು ಉಚ್ಚಾಟಿಸುವ ತೀರ್ಮಾನ ಮಾಡಿದೆ. ಸ್ವಾಭಿಮಾನವಿದ್ದರೆ ಸ್ವಾಮೀಜಿ ಪೀಠಕ್ಕೆ ಬರಬಾರದು. ಎಂದು ಹೇಳಿದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement