ಸಮಾಜವಾದಿ ಪಕ್ಷದ ಶಾಸಕನ ಮಗಳ ಜೊತೆ ತನ್ನ ಮಗನ ಮದುವೆ ಮಾಡಿದ್ದಕ್ಕೆ ಪಕ್ಷದ ನಾಯಕನನ್ನೇ ಉಚ್ಚಾಟಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ..!

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕರೊಬ್ಬರ ಪುತ್ರಿಯೊಂದಿಗೆ ತಮ್ಮ ಮಗನ ವಿವಾಹವನ್ನು ಏರ್ಪಡಿಸಿದ ಕಾರಣಕ್ಕೆ ಹಿರಿಯ ನಾಯಕರೊಬ್ಬರನ್ನು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಪಕ್ಷ಼ದಿಂದ ಉಚ್ಚಾಟಿಸಿದ್ದಾರೆ ಎಂದು ವರದಿಯಾಗಿದೆ. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಹಿರಿಯ ನಾಯಕ ಸುರೇಂದ್ರ ಸಾಗರ ಅವರನ್ನು ವಿಲಕ್ಷಣ ಕ್ರಮದಲ್ಲಿ ಉಚ್ಚಾಟಿಸಿದ್ದಾರೆ. ಸುರೇಂದ್ರ ಸಾಗರ ಅವರ ಪುತ್ರ … Continued

ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ ; 6 ಕೆನಡಾ ರಾಜತಾಂತ್ರಿಕರನ್ನು ಹೊರಹಾಕಿದ ಭಾರತ

ನವದೆಹಲಿ : ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಗದ್ದಲ ಸೋಮವಾರ ತಡರಾತ್ರಿ ಉಲ್ಬಣಗೊಂಡಿದ್ದು, ಭಾರತವು ಕೆನಡಾದಲ್ಲಿನ ತನ್ನ ಉನ್ನತ ರಾಯಭಾರಿಯನ್ನು ಹಿಂಪಡೆದಿದ್ದು, ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ತನಿಖೆಯಲ್ಲಿ ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಮತ್ತು ಇತರ ಕೆಲವು ರಾಜತಾಂತ್ರಿಕರನ್ನು ‘ಆಸಕ್ತಿಯ ವ್ಯಕ್ತಿಗಳು’ ಎಂದು … Continued

ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧೆ : ಬಿಜೆಪಿಯಿಂದ ಭೋಜಪುರಿ ನಟನ ಉಚ್ಛಾಟನೆ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಭೋಜಪುರಿ ನಟ ಮತ್ತು ಗಾಯಕ ಪವನ್ ಸಿಂಗ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಪಕ್ಷದಿಂದ ಬುಧವಾರ ಉಚ್ಛಾಟಿಸಿದೆ. ಈ ಹಿಂದೆ ಪಶ್ಚಿಮ ಬಂಗಾಳದ ಅಸನ್ಸೋಲ್‌ ಕ್ಷೇತ್ರದಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಅವರು ಅಸನ್ಸೋಲ್‌ ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಹಿಂದೆ … Continued

ಅಶ್ಲೀಲ ವಿಡಿಯೋ ಪ್ರಕರಣ : ಜೆಡಿಎಸ್‌ ನಿಂದ ಪ್ರಜ್ವಲ್‌ ರೇವಣ್ಣ ಅಮಾನತಿಗೆ ನಿರ್ಧಾರ

ಬೆಂಗಳೂರು/ ಶಿವಮೊಗ್ಗ : ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜಾತ್ಯತೀತ ಜನತಾದಳ ಪಕ್ಷದಿಂದ  ಅಮಾನತು ಮಾಡಲಾಗಿದೆ. ದೇವೇಗೌಡ ಅವರ ಸೂಚನೆಯ ಮೇರೆ   ಲೆ ಜಾತ್ಯತೀತ ಜನತಾದಳವು ಈ ಕ್ರಮ ಕೈಗೊಂಡಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ … Continued

ಹಿರಿಯ ನಾಯಕ ಸಂಜಯ ನಿರುಪಮ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್‌

ನವದೆಹಲಿ: ‘ಅಶಿಸ್ತು’ ಮತ್ತು ‘ಪಕ್ಷ ವಿರೋಧಿ ಹೇಳಿಕೆ’ಗಾಗಿ ಹಿರಿಯ ನಾಯಕ ಸಂಜಯ ನಿರುಪಮ ಅವರನ್ನು ಕಾಂಗ್ರೆಸ್ ಬುಧವಾರ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಅಶಿಸ್ತು ಮತ್ತು ಪಕ್ಷ ವಿರೋಧಿ ಹೇಳಿಕೆಗಳ ದೂರುಗಳನ್ನು ಗಮನಿಸಿ ಕಾಂಗ್ರೆಸ್ ಅಧ್ಯಕ್ಷರು ಸಂಜಯ ನಿರುಪಮ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ ಎಂದು … Continued