ಗಾರ್ಡ್ ಬಚಾವ್‌ ಮಾಡಿದ ನಂತ್ರ ಮತ್ತೆ ಹೋಗಿ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಸೋಲಾಪುರ: ಮಹಾರಾಷ್ಟ್ರದ ಸೋಲಾಪುರದ ಪ್ರಸಿದ್ಧ ಉದ್ಯಮಿ ಹಾಗೂ ಜನಪ್ರಿಯ ‘ಮುಲ್ತಾನಿ ಬೇಕರಿ’ಯ ಮಾಲೀಕ ಕಟ್ಟಡವೊಂದರ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ರಸ್ತೆಯಲ್ಲಿರುವ ‘ಪನಾಶ್ ಅಪಾರ್ಟ್‌ಮೆಂಟ್’ನಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಪ್ರಕಾರ,  ಮಧ್ಯಾಹ್ನದ ವೇಳೆಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಲಿಫ್ಟ್ ಬಳಸುವ ಬದಲಿಗೆ ಮೆಟ್ಟಿಲುಗಳ ಮೂಲಕ ನೇರವಾಗಿ 17ನೇ ಮಹಡಿಗೆ ತೆರಳಿದ್ದರು. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಮುಲ್ತಾನಿ ಬೇಕರಿ ಮಾಲೀಕರಾದ ಸುನಿಲ ಸದರಂಗಾನಿ (59) ಎಂಬವರು ಅಪಾರ್ಟ್‌ಮೆಂಟ್‌ ತುದಿಯಲ್ಲಿ ನಿಂತು ಕೈಮುಗಿದು ಪ್ರಾರ್ಥನೆ ಮಾಡುತ್ತಿದ್ದ ಸುನಿಲ ಅವರ ಸ್ಥಿತಿಯನ್ನು ಗಮನಿಸಿದ ನಿವಾಸಿಗಳು ಕೂಡಲೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ರಕ್ಷಿಸಲು ಯತ್ನಿಸಿದ ಸೆಕ್ಯೂರಿಟಿ ಗಾರ್ಡ್:
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಭದ್ರತಾ ಸಿಬ್ಬಂದಿ, ಸುನಿಲ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅವರನ್ನು ಮೇಲಿನಿಂದ ಕೆಳಕ್ಕೆ ಕರೆತಂದು ಸಮಾಧಾನಪಡಿಸಿದ್ದರು. ಆದರೆ ನಂತರ ಹೀಗಾಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. “ನನ್ನ ಕೀಲಿ ಕೈ ಮೇಲೆ ಮರೆತು ಬಂದಿದ್ದೇನೆ” ಎಂದು ಭದ್ರತಾ ಸಿಬ್ಬಂದಿಗೆ ಸುನಿಲ ಹೇಳಿದ್ದಾರೆ. ಅದನ್ನು ತರುವುದಾಗಿ ಹೇಳಿ ಮತ್ತೆ 17ನೇ ಮಹಡಿಗೆ ಹೋದ ಅವರು ಅಲ್ಲಿಂದ ಕೆಳಕ್ಕೆ ಜಿಗಿದಿದ್ದಾರೆ.

ಪ್ರಮುಖ ಸುದ್ದಿ :-   ಬೆಳಿಗ್ಗೆ 2:30ಕ್ಕೆ ಸ್ನೇಹಿತನಿಗೆ ಸಂದೇಶ, 45 ನಿಮಿಷ ಸಿಪಿಆರ್‌ʼ... : ನಾನಾ ಪಾಟೇಕರ್ ಅಂತಿಮ ಕ್ಷಣಗಳು...

ಸುನಿಲ ಅವರು ಜಿಗಿಯುವ ಮುನ್ನ ಮಹಡಿಯ ತುದಿಯಲ್ಲಿ ನಿಂತು ಕೈಮುಗಿದು ಪ್ರಾರ್ಥಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಎತ್ತರದಿಂದ ಕೆಳಕ್ಕೆ ಬಿದ್ದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪ್ರತಿಮ ಯಶಸ್ಸು ಕಂಡಿದ್ದ ಉದ್ಯಮಿಯೊಬ್ಬರು ಇಂತಹ ತೀವ್ರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement