ತಮಿಳುನಾಡಲ್ಲಿ ರಾಜಕೀಯ ಅನಿಶ್ಚಿತತೆ ಅಂತ್ಯ : ತಮಿಳುನಾಡು ಸಿಎಂ ಆಗಿ ವಿಜಯ ನಾಳೆ ಪ್ರಮಾಣವಚನ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತಾಗಿದ್ದ ಕುತೂಹಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ ಅವರು ಶನಿವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ರಾಜ್ಯಪಾಲರ ಅನುಮೋದನೆಯ ನಂತರ, ಭಾನುವಾರ (ಮೇ ೧೦) ಬೆಳಿಗ್ಗೆ 10 ಗಂಟೆಗೆ ವಿಜಯ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಎಡಪಕ್ಷಗಳ ದೀರ್ಘಕಾಲದ ಮಿತ್ರಪಕ್ಷವಾದ ವಿಸಿಕೆ (VCK), ಶುಕ್ರವಾರವೇ ವಿಜಯ ಅವರಿಗೆ ಬೆಂಬಲ ಸೂಚಿಸಿತ್ತು. ಇದರ ಬೆನ್ನಲ್ಲೇ ಡಿಎಂಕೆ ಮೈತ್ರಿಕೂಟದ ಮತ್ತೊಂದು ಪಕ್ಷವಾದ ಐಯುಎಂಎಲ್‌ (IUML) ಕೂಡ ಟಿವಿಕೆಗೆ ಬೆಂಬಲ ಘೋಷಿಸಿದೆ.

ಇಬ್ಬರು ಶಾಸಕರನ್ನು ಹೊಂದಿರುವ ಐಯುಎಂಎಲ್‌ ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಟಿವಿಕೆ ಪರ ಇರುವ ಶಾಸಕರ ಸಂಖ್ಯೆ 120ಕ್ಕೆ ಏರಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ವಿಜಯ ನೇತೃತ್ವದ ಮೈತ್ರಿಕೂಟ ಸರಳ ಬಹುಮತಕ್ಕಿಂತ ಎರಡು ಸ್ಥಾನಗಳನ್ನು ಹೆಚ್ಚು ಹೊಂದಿದೆ.
ಟಿವಿಕೆ ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಲಿದ್ದು, ಆ ಪಕ್ಷದ ಮೂವರು ಶಾಸಕರು ಸಚಿವರಾಗುವ ಸಾಧ್ಯತೆಯಿದೆ.
ಟಿವಿಕೆ ನಾಯಕ ಆದವ್ ಅರ್ಜುನ ಮಾತನಾಡಿ, “ವಿಸಿಕೆ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದೆ. ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲರಿಗೆ ಬೆಂಬಲ ಪತ್ರ ನೀಡಿದ್ದಾರೆ,” ಎಂದು ತಿಳಿಸಿದರು. ಈ ಯಶಸ್ಸಿಗಾಗಿ ಅವರು ಕಾಂಗ್ರೆಸ್, ಎಡಪಕ್ಷಗಳು ಮತ್ತು ತಿರುಮಾವಳವನ್ ಅವರಿಗೆ ಧನ್ಯವಾದ ಅರ್ಪಿಸಿದರು. ಸದ್ಯಕ್ಕೆ ವಿಸಿಕೆ ಪಕ್ಷವು ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಲು ನಿರ್ಧರಿಸಿದೆ.
ಮತ್ತೊಂದೆಡೆ, “ಸ್ಟಾಲಿನ್ ಬಯಸಿದಂತೆಯೇ ನಾವು ನಡೆಯುತ್ತೇವೆ” ಎಂದು ಹೇಳಿದ್ದ ಐಯುಎಂಎಲ್‌ (IUML) ಕೂಡ ಈಗ ಟಿವಿಕೆಗೆ ಬೇಷರತ್ ಬೆಂಬಲ ನೀಡಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಚುನಾವಣಾ ಫಲಿತಾಂಶ 
ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಸಿನೆಮಾ ನಟ ವಿಜಯ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಹುಮತಕ್ಕೆ 10 ಸ್ಥಾನಗಳ ಕೊರತೆಯಿದ್ದ ಕಾರಣ, ಅವರು ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳ ಬೆಂಬಲ ಕೋರಿದ್ದರು.
ವಿಶೇಷವೆಂದರೆ, ವಿಜಯ ಅವರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ನಿಯಮದಂತೆ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಆಗ ಟಿವಿಕೆ ಸಂಖ್ಯಾಬಲ 107ಕ್ಕೆ ಇಳಿಯಲಿದೆ. ಆದರೂ ಕಾಂಗ್ರೆಸ್ (5), ಸಿಪಿಐ (2), ಸಿಪಿಐ(ಎಂ) (2), ವಿಸಿಕೆ (2) ಮತ್ತು ಐಯುಎಂಎಲ್ (2) ಶಾಸಕರ ಬೆಂಬಲದೊಂದಿಗೆ ಅವರ ಪಕ್ಷವು ಸರಳ ಬಹುಮತದ ಗಡಿಯನ್ನು ದಾಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement