ವಯನಾಡು : ಇತ್ತೀಚಿನ ಭೂಕುಸಿತ ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ ಭಾರತೀಯ ಸೈನಿಕರ ಧೀರ ಪ್ರಯತ್ನಗಳನ್ನು ಗುರುತಿಸಿ, ಕೇರಳದ ವಯನಾಡ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿಗೆ ಜನರು ಹೃತ್ಪೂರ್ವಕ ಮತ್ತು ಭಾವನಾತ್ಮಕ ವಿದಾಯ ಹೇಳಿದರು.
ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸೈನಿಕರಿಗೆ ಸ್ಥಳೀಯ ಸಮುದಾಯ ಮತ್ತು ಹೊರಗಿನವರು ಕೃತಜ್ಞತೆ ಮತ್ತು ಮೆಚ್ಚುಗೆಯ ಸುರಿಮಳೆಗೈದರು. ಕೊಚ್ಚಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಈ ಸೈನಿಕರು ಪ್ರದರ್ಶಿಸಿದ ಶೌರ್ಯ ಮತ್ತು ನಿಸ್ವಾರ್ಥತೆಗೆ ತೀವ್ರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಭೂಕುಸಿತ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎಲ್ಲವನ್ನೂ ಪಣಕ್ಕಿಟ್ಟ ನಮ್ಮ ವೀರ ಯೋಧರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ…ನಿಮ್ಮ ಧೈರ್ಯ ಮತ್ತು ತ್ಯಾಗವನ್ನು ಮರೆಯಲಾಗುವುದಿಲ್ಲ” ಎಂದು ಪಿಆರ್‌ಒ (PRO) ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸವಾಲಿನ ಮತ್ತು ಅಪಾಯಕಾರಿ ಪರಿಸ್ಥಿತಿಗಳಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಗಳು, ವಿನಾಶಕಾರಿ ಭೂಕುಸಿತದಿಂದ ಹಾನಿಗೊಳಗಾದವರಿಗೆ ಜೀವಗಳನ್ನು ಉಳಿಸಲು ಮತ್ತು ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಸೈನಿಕರು ದಣಿವರಿಯಿಲ್ಲದೆ ಶ್ರಮಿಸುತ್ತಿದ್ದಾರೆ. ಸೈನಿಕರು ನಿರ್ಗಮಿಸುತ್ತಿದ್ದಂತೆ, ಸ್ಥಳೀಯ ನಿವಾಸಿಗಳು, ಅಧಿಕಾರಿಗಳು ಮತ್ತು ಹಿತೈಷಿಗಳು ತಮ್ಮ ಹೃತ್ಪೂರ್ವಕ ಧನ್ಯವಾದ ಮತ್ತು ಶುಭ ಹಾರೈಕೆಗಳನ್ನು ನೀಡಲು ಸೈನಿಕರು ಹೋಗುವಾಗ ಅವರ ಇಕ್ಕೆಲಗಳಲ್ಲಿ ನಿಂತು ತಮ್ಮ ಭಾವನೆಗಳ ಮಹಾಪೂರವನ್ನೇ ಹರಿಸಿದರು. ವಯನಾಡ್‌ನಲ್ಲಿ ಸೈನಿಕರನ್ನು ಜನರು ಬೀಳಕೊಡುತ್ತಿರುವ ವೀಡಿಯೊವನ್ನು PRO ಹಂಚಿಕೊಂಡಿದ್ದಾರೆ. ವಯನಾಡ್ ಜಿಲ್ಲಾಡಳಿತವು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯ ಭಾಗವಾಗಿದ್ದ ಭಾರತೀಯ ಸೇನಾ ಸಿಬ್ಬಂದಿಗೆ ಬೀಳ್ಕೊಡುಗೆಯನ್ನು ಆಯೋಜಿಸಿತ್ತು.
ಸೇನೆಯು 10 ದಿನಗಳ ರಕ್ಷಣಾ ಕಾರ್ಯಾಚರಣೆ ಪೂರ್ಣ…
ಹತ್ತು ದಿನಗಳ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಯು ಹೊರಡಲಿರುವ ಕಾರಣ, ರಕ್ಷಣಾ ಕಾರ್ಯಾಚರಣೆಯನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ. ತಿರುವನಂತಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಬೆಂಗಳೂರಿನಿಂದ ಸುಮಾರು 500 ಸದಸ್ಯರನ್ನು ಒಳಗೊಂಡಿರುವ ಭಾರತೀಯ ಸೇನಾ ಬೆಟಾಲಿಯನ್ ತಮ್ಮ ಸ್ವಸ್ಥಾನಕ್ಕೆ ಮರಳಲು ಸಜ್ಜಾಗಿದೆ. ಭಾರತೀಯ ಸೇನೆಯು ತಾತ್ಕಾಲಿಕವಾಗಿ ನಿರ್ಮಿಸಿದ ಬೈಲಿ ಸೇತುವೆಯ ನಿರ್ವಹಣಾ ತಂಡವು ಭೂ ಕುಸಿತದ ಪ್ರದೇಶದಲ್ಲಿ ಉಳಿಯಲಿದೆ.
ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಸ್ಥಳೀಯರು ಮತ್ತು ಆಡಳಿತವು ಅಪಾರ ಬೆಂಬಲವನ್ನು ನೀಡಿದೆ ಎಂದು ಸೇನೆಯ ವಯನಾಡ್ ಮಿಷನ್‌ನ ಉಸ್ತುವಾರಿ ಕರ್ನಲ್ ಪರಮವೀರ್ ಸಿಂಗ್ ನಾಗ್ರಾ ಹೇಳಿದ್ದಾರೆ. “ಇದು ಸ್ಥಳೀಯರು ಮತ್ತು ಆಡಳಿತದ ಬೆಂಬಲದೊಂದಿಗೆ ಮೇಜರ್ ಜನರಲ್ ಮ್ಯಾಥ್ಯೂ ಅವರ ನೇತೃತ್ವದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಾಗಿದೆ. ಸ್ವಯಂಸೇವಕರ ಕೊರತೆ ಇರಲಿಲ್ಲ. ವಯನಾಡ್ ಮಾತ್ರವಲ್ಲದೆ ಕೇರಳ, ತಮಿಳುನಾಡಿನ ಎಲ್ಲಾ ಜಿಲ್ಲೆಗಳಿಂದ ಜನರು ಬಂದು ನಮಗೆ ಸಹಾಯ ಮಾಡಿದರು ಎಂದು ಕರ್ನಲ್ ನಾಗ್ರಾ ತಿಳಿಸಿದ್ದಾರೆ.
ವಯನಾಡ್ ಭೂಕುಸಿತ
ಐಎಎಫ್ ಹೆಲಿಕಾಪ್ಟರ್‌ಗಳು ಈಗ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಗೆ ಸಹಾಯ ಮಾಡುತ್ತಿವೆ. ಜುಲೈ 30ರಂದು ವಯನಾಡಿನಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿದ ನಂತರ ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳು ಭಾರಿ ಹಾನಿಗೊಳಗಾಗಿವೆ. 300 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ವ್ಯಾಪಕವಾದ ಆಸ್ತಿಪಾಸ್ತಿಗಳು ಹಾನಿಗೊಳಗಾದವು.
ನಿಮ್ಮ ಕಾಮೆಂಟ್ ಬರೆಯಿರಿ