ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತನ್ನ ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಸೇರಿ 7 ಜನರನ್ನು ಜೀವಂತವಾಗಿ ಸುಟ್ಟು ಹಾಕಿದ ವ್ಯಕ್ತಿ..!

ಲಾಹೋರ್‌: ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಪರಿಣಾಮ 7 ಮಂದಿ ಸಜೀವ ದಹನವಾದ ಘಟನೆ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ ಪೀರ್​ ಜಹನೈನ್​​ ಪಟ್ಟಣದಲ್ಲಿ ವರದಿಯಾಗಿದೆ. ಈ ಸಂಬಂಧ ಆರೋಪಿ ಮಂಜೂರ್​ ಹುಸೇನ್​ ವಿರುದ್ಧ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ್ದಾರೆ.
ಮಂಜೂರ್ ಹುಸೇನ್​ ಬೆಂಕಿ ಹಚ್ಚಿದ ಮನೆಯಲ್ಲಿ ಆತನ ಇಬ್ಬರು ಹೆಣ್ಣು ಮಕ್ಕಳಾದ ಫೌಜಿಯಾ ಬೀಬಿ ಹಾಗೂ ಖುರ್ಷಿದ್​​ ಮಾಯಿ ಅವರ ಕುಟುಂಬ ವಾಸವಾಗಿತ್ತು. ಈ ದುರ್ಘಟನೆಯಲ್ಲಿ ಫೌಜಿಯಾ ಬೀಬಿ, ಖುರ್ಷಿದ್​ ಮಾಯಿ, ಫೌಜಿಯಾ ಬೀಬಿ ನಾಲ್ಕು ತಿಂಗಳ ಪುತ್ರ, ಖುರ್ಷಿದ್​​ ಮಾಯಿ ಮೂರು ಮಕ್ಕಳು ಹಾಗೂ ಅವರ ಪತಿ ಸಜೀವವಾಗಿ ದಹನವಾಗಿದ್ದಾರೆ.
ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ನಡೆಯುವ ವೇಳೆ ಫೌಜಿಯಾ ಪತಿ ಮೆಹಬೂಬ್​ ಅಹಮದ್​ ಕೆಲಸದ ನಿಮಿತ್ತ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಹಮದ್​ ಹಾಗೂ ಫೌಜಿಯಾ ಬೀಬಿ 18 ತಿಂಗಳ ಹಿಂದೆ ವಿವಾಹವಾಗಿದ್ದರು. ಈ ಮದುವೆಗೆ ಮಂಜೂರ್ ಹುಸೇನ್​ ವಿರೋಧವಿತ್ತು. ಫೌಜಾಯಿ ಬೀಬಿ ಹಾಗೂ ಸಹೀದರಿ ಖುರ್ಷಿದಾ ಮಾಯಿ ಕುಟುಂಬ ಒಂದೆ ಮನೆಯಲ್ಲಿ ವಾಸಿಸುತ್ತಿತ್ತು. ಫೌಜಿಯಾ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಹುಸೇನ್​​ ತಮ್ಮ ಪುತ್ರಿಯರಿದ್ದ ಮನೆಗೆ ಬೆಂಕಿ ಇಟ್ಟಿದ್ದಾನೆ. ಪ್ರಕರಣ ಸಂಬಂಧ ಮೆಹಬೂಬ್​ ಅಹಮದ್ ಅವರು ತನ್ನ ಮಾವ ಮಂಜೂರ್​​ ಹುಸೇನ್​ ಹಾಗೂ ಅವರ ಪುತ್ರ ಸಬೀರ್​ ಹುಸೇನ್​ ವಿರುದ್ಧ​ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಒಂದೇ ದಿನ ಸ್ವತಂತ್ರವಾದೆವು ; ನಾವೀಗ ಭಿಕ್ಷೆ ಬೇಡುತ್ತಿದ್ದೇವೆ...ಆದರೆ ಭಾರತ...: ಪಾಕಿಸ್ತಾನ ನಾಯಕನ ಹೇಳಿಕೆ ವೈರಲ್‌...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement