ಕಾಂಗೋ: ಈಗಾಗಲೇ ಕೊವಿಡ್ ಮಹಾಮಾರಿಯಿಂದ ಜಗತ್ತಿನಾದ್ಯಂತ 49 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈದರ ಮಧ್ಯೆಯೇ ಕಾಂಗೋದಲ್ಲಿ ಮಕ್ಕಳಲ್ಲಿ ನಿಗೂಢ ಕಾಯಿಲೆಯೊಂದು ಕಂಡುಬಂದಿದ್ದು, ಆಗಸ್ಟ್ನಿಂದ ಇಲ್ಲಿಯ ವರೆಗೆ 165ಕ್ಕೂ ಹೆಚ್ಚು ಮಕ್ಕಳು ಿದರಿಂದ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಆಗಸ್ಟ್ನಲ್ಲಿ ಕ್ವಿಲು ಪ್ರಾಂತ್ಯದ ಗುಂಗು ಪಟ್ಟಣದಲ್ಲಿ ಈ ನಿಗೂಢ ರೋಗ ಮೊದಲು ಕಾಣಿಸಿಕೊಂಡಿತ್ತು. ಈ ಕಾಯಿಲೆ 5 ವರ್ಷದವರೆಗಿನ ಮಕ್ಕಳನ್ನು ಹೆಚ್ಚಾಗಿ ಭಾಧಿಸುತ್ತಿದೆ ಎಂದು ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಜೀನ್-ಪಿಯರ್ ಬಸಾಕೆ ಹೇಳಿದ್ದು, ಕೆಲವು ಸೋಂಕಿತ ಮಕ್ಕಳಲ್ಲಿ ಮಲೇರಿಯಾದಂತಹ ರೋಗಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಈ ರೋಗವು ಮಲೇರಿಯಾದ ರೀತಿಯ ರೋಗಲಕ್ಷಣಗಳನ್ನು ಹೊಂದಿದೆ. ಈ ಕಾಯಿಲೆಯ ಕುರಿತು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ರೋಗದಿಂದ ಅನೀಮಿಯಾ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಕಾರಣವೇನೆಂಬುದು ಪತ್ತೆಯಾಗಿಲ್ಲ ಎಂದು ಬಸಾಕೆ ತಿಳಿಸಿದ್ದಾರೆ.
ಕಳೆದ ಆಗಸ್ಟ್ ಅಂತ್ಯದಲ್ಲಿ ಮೊದಲು ಕಾಣಿಸಿಕೊಂಡ ಈ ರೋಗವು ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಮಲೇರಿಯಾದ ಹೊರತಾದ ನಮಗೆ ತಿಳಿದಿಲ್ಲದ ಬೇರೆ ರೋಗವಾಗಿರಬಹುದು. ಈ ಕಾಯಿಲೆ ಬಂದ ರೋಗಗಳು ಅನೀಮಿಯಾ ಅಥವಾ ರಕ್ತಹೀನತೆಯಿಂದ ಬಳಲುತ್ತಾರೆ. ಇದಕ್ಕೆ ಯಾವ ಬಗೆಯ ಔಷಧಿ ನೀಡಬೇಕೆಂಬುದು ತಿಳಿಯುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ನಿಗೂಢ ಕಾಯಿಲೆ ಈಗ ಹೆಚ್ಚು ಆತಂಕಕ್ಕೆ ಕಾರಣವಾಗಿದೆ.
ಸೋಂಕಿನ ಮೂಲವನ್ನು ಗುರುತಿಸಲು ಮತ್ತು ರೋಗದ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ಅಭಿವೃದ್ಧಿಪಡಿಸಲು ಆರೋಗ್ಯ ಸಚಿವಾಲಯದ ತಜ್ಞರ ತಂಡವನ್ನು ಪ್ರದೇಶಕ್ಕೆ ಕಳುಹಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ