ಮದುವೆ ದುಃಸ್ವಪ್ನವಾಗಿ ಬದಲು..! ಅಲಂಕೃತ ಉಯ್ಯಾಲೆಯಲ್ಲಿ ಮಂಟಪಕ್ಕೆ ಬರುವಾಗ ಅಚಾನಕ್‌ ಉಯ್ಯಾಲೆ ಸಮೇತ ಕೆಳಗೆ ಬಿದ್ದ ವಧುವರ: ವೀಕ್ಷಿಸಿ

ಇತ್ತೀಚೆಗಂತೂ ಮದುವೆ ಮನೆಯಲ್ಲಿ ವಧುವರರ ಆಗಮನಕ್ಕಾಗಿಯೇ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ, ವಿಭಿನ್ನವಾಗಿ ಕಾರ್ಯಕ್ರಮ ರೂಪಿಸುತ್ತಾಎ. ಇದಕ್ಕಾಗಿಯೇ ಇವೆಂಟ್​ ಮ್ಯಾನೇಜ್ಮೆಂಟ್ ಕಂಪನಿಗಳು ಅಸ್ತಿತ್ವಕ್ಕೆ ಬಂದಿವೆ. ಪ್ರೀ ವೆಡ್ಡಿಂಗ್​ ಶೂಟ್​ , ಪೋಸ್ಟ್​ ವೆಡ್ಡಿಂಗ್​ ಶೂಟ್​ ಒಂದು ರೀತಿಯ ಟ್ರೆಂಡ್​ ಆಗಿದೆ.
ಕೆಲವೊಮ್ಮೆ ಗಮನಸೆಳೆಯಲು ಹೋಗಿ ಈ ವಿಭಿನ್ನ ಯೋಜನೆಗಳು ಎಡವಟ್ಟಿನಿಂದ ಅನಾಹುತಕ್ಕೂ ಕಾರಣವಾಗುತ್ತವೆ. ಅಂತಹ ಒಂದು ಅನಾಹುತಕಾರಿ ಘಟನೆ ಛತ್ತೀಸ್​ಘಡದ ರಾಯ್ಪುರದಲ್ಲಿ ಮದುವೆ ಸಮಾರಂಭವೊಂದರಲ್ಲಿ ನಡೆದಿದೆ.
ಈ ಅನಾಹುತದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊ ಕ್ಲಿಪ್‌ನಲ್ಲಿ ವೇದಿಕೆಯ ಮೇಲೆ ಹಲವರು ಡ್ಯಾನ್ಸ್​ ಮಾಡುತ್ತಿದ್ದು, ಸಿಡಿಮದ್ದುಗಳನ್ನು ಸಿಡಿಸಲಾಗುತ್ತಿದೆ. ಅದರ ನಡುವೆ ವೃತ್ತಾಕಾರದ ಅಲಂಕೃತ ಸುಂದರ ಉಯ್ಯಾಲೆಯಲ್ಲಿ ವಧುವರರು ಆಗಮಿಸುತ್ತಾರೆ. ಆದರೆ ಸ್ವಿಂಗ್​ ಅಚಾನಕ್ಕಾಗಿ ಮುರಿದು 12 ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಸ್ವಿಂಗ್​ನ ಜೊತೆ ನವಜೋಡಿಯೂ ಕೆಳಕ್ಕೆ ಬೀಳುತ್ತದೆ. ತಕ್ಷಣವೇ ಧಾವಿಸಿ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ವೇದಿಕೆ ಧಾವಿಸಿ ನವಜೋಡಿಯನ್ನು ರಕ್ಷಿಸಿದ್ದಾರೆ.

ಘಟನೆಯಲ್ಲಿ ವಧುವರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುದ್ದಿಸಂಸ್ಥೆಯ ವರದಿ ತಿಳಿಸಿದೆ. ಘಟನೆಯ ನಡೆದು ಅರ್ಧಗಂಟೆಯ ಬಳಿಕ ಮದುವೆ ಶಾಸ್ತ್ರಗಳು ಸಾಂಗವಾಗಿ ನೆರವೇರಿದೆ ಎಂದೂ ಹೇಳಲಾಗಿದೆ.

ಪ್ರಮುಖ ಸುದ್ದಿ :-   ಅಕ್ಟೋಬರ್‌ 3ರಿಂದ ಕೇಂದ್ರ ತಂಡದಿಂದ ಕರ್ನಾಟಕದ ಬರಪೀಡಿತ ಪ್ರದೇಶಗಳ ಪರಿಶೀಲನೆ : ಕುಮಾರಸ್ವಾಮಿ

1 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement