ಬೆಳಗಾವಿ: ಎಂಇಎಸ್, ಶಿವಸೇನಾ ನಾಯಕರ ಬಂಧನ

ಬೆಳಗಾವಿ : ಬೆಳಗಾವಿ ಮಹಾನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ನಗರದ ಶಿವಾಜಿ ಉದ್ಯಾನದಲ್ಲಿ ಉದ್ಯಾನಕ್ಕೆ ತೆರಳಿ ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸುವುದಾಗಿ ಹೇಳಿದ್ದ ಎಂಇಎಸ್ ಹಾಗೂ ಶಿವಸೇನೆ ನಾಯಕರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಎಂಇಎಸ್ ಮಾಜಿ ಮೇಯರ್ ಶಿವಾಜಿ ಸುಂಟ್ಕರ್ ಹಾಗೂ ಶಿವಸೇನೆ ನಾಯಕಪ್ರಕಾಶ ಶಿರೋಳ್ಕರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿದೆ, ಹೀಗಾಗಿ ಯಾರನ್ನು ಶಿವಾಜಿ ಉದ್ಯಾನದ ಒಳಗೆ ಬಿಡುವುದಿಲ್ಲ ಎಂದು ಪೊಲೀಸರು ಪರಿಪರಿಯಾಗಿ ಹೇಳಿದರು. ಆದರೆ ಅವರ ಮನವಿಗೆ ಓಗೊಡದ ಎಂಇಎಸ್ ಮತ್ತು ಶಿವಸೇನೆ ನಾಯಕರು ಶಿವಾಜಿ ಉದ್ಯಾನದ ಬಳಿ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಅನಿವಾರ್ಯವಾಗಿ ಅವರನ್ನು ವಶಕ್ಕೆ ಪಡೆದಿದ್ದಾರೆ.

4 / 5. 1

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement