ಅಂತರ್ಜಾಲದಲ್ಲಿ ವೈರಲ್ ಆಗಿರುವ ಹೃದಯಸ್ಪರ್ಶಿ ವೀಡಿಯೊದಲ್ಲಿ, ಎಮ್ಮೆಯೊಂದು ಆಮೆಯ ಜೀವವನ್ನು ಉಳಿಸಿದೆ.
ಹೌದು, ಬೆನ್ನು ಅಡಿಗಾಗಿ ಬಿದ್ದು ಒದ್ದಾಡುತ್ತಿದ್ದ ಆಮೆಯನ್ನು ನೋಡಿದ ಎಮ್ಮೆಯೊಂದು ಆಮೆ ಜೀವ ಉಳಿಸಿದ್ದು ವಿಡಿಯೊದಲ್ಲಿ ಸೆರೆಯಾಗಿದೆ.
ಬೆನ್ನು ಅಡಿಯಗಿ ಬಿದ್ದ ಆಮೆಗೆ ಏಳಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಇದನ್ನು ನೋಡಿದ ಎಮ್ಮೆಯೊಂದು ತನ್ನ ಕೊಂಬುಗಳಿಂದ ಆಮೆಯನ್ನು ತಿರುಗಿಸಿ ಅದನ್ನು ಸಹಜ ಸ್ಥಿತಿಯಲ್ಲಿ ಇರಿಸಿದೆ. ಸುಮಾರು 15 ಸೆಕೆಂಡುಗಳ ಕ್ಲಿಪ್ ಆನ್‌ಲೈನ್‌ನಲ್ಲಿ ಅನೇಕ ಹೃದಯಗಳನ್ನು ಗೆದ್ದಿದೆ. ಮತ್ತು ಎಮ್ಮೆಯ ಬುದ್ಧಿವಂತಿಕೆ ಹಾಗೂ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ