ಯಾದಗಿರಿಯಲ್ಲಿ 4 ತಾಸು ಸುರಿದ ಗುಡುಗು-ಮಿಂಚು ಸಹಿತ ಅಬ್ಬರದ ಮಳೆ

ಯಾದಗಿರಿ: ಕರ್ನಾಟಕದ ಬಿಸಿಲು ನಾಡು ಎಂದು ಖ್ಯಾತಿ ಹೊಂದಿರುವ ಯಾದಗಿರಿಯಲ್ಲಿ ಮಧ್ಯಾಹ್ನ 4 ಗಂಟೆಗೂ ಹೆಚ್ಚು ಕಾಲ ಅಕಾಲಿಕ ಗುಡುಗು-ಮಿಂಚು ಭಾರಿ ಮಳೆ ಸುರಿಯಿತು.
ಸುರಿದ ಬಾರಿ ಮಳೆಯಿಂದ ನಗರದಲ್ಲಿ ರಸ್ತೆ ಹಾಗೂ ಚರಂಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಹರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಬಾರಿ ಗಾಳಿ-ಮಳೆಗೆ ನಗರಸಭೆ ಎರಡನೇ ಅಂತಸ್ತಿನ ಸಭಾಂಗಣದ ಮೇಲ್ಛಾವಣಿ ಕುಸಿದು ಬಿದ್ದಿದೆ.

ಯಾದಗಿರಿಯಲ್ಲಿ ಸತತ ನಾಲ್ಕು ತಾಸುಗಳ ಕಾಲ ಗುಡುಗು-ಮಿಂಚು ಸಹಿತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಹಳೆ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಪಕ್ಕದಲ್ಲಿರುವ ಬಿಳ್ಹಾರ್ ವ್ಯಾಪಾರ ಮಳಿಗೆ ಕಟ್ಟಡದ ೩ನೇ ಅಂತಸ್ಥಿನ ಗೋಡೆ ಕುಸಿದು ಅಂಗಡಿ ಮುಂಭಾಗದಲ್ಲಿ ಬಿದ್ದಿದೆ, ಇದರಿಂದ ಮಳಿಗೆ ಮುಂಭಾಗದಲ್ಲಿ ನಿಲ್ಲಿಸಿದ್ದ ಸಾರ್ವಜನಿಕರ ೮ ಬೈಕ್‌ಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಹಣ್ಣುಗಳನ್ನು ವ್ಯಾಪಾರ ಮಾಡುತ್ತಿದ್ದ ಮಹಿಳೆ  ಮಳೆ ಸುರಿಯುತ್ತಿದ್ದಂತೆ ಮಳಿಗೆಯ ಸಿಮೆಂಟ್ ಅಂಗಡಿ ಒಳಗೆ ರಕ್ಷಣೆಗೆ ನಿಂತ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ,
ಶಾಸ್ತ್ರೀ ವೃತ್ತದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇರೆ ಕಡೆ ಹರಿಯದೇ ನಿಂತಿದ್ದರಿಂದ ವಾಹನ ಸಂಚಾರರು ಪರದಾಡಿದರು,
ಕೃಷ್ಣಾ ಹಾಗೂ ಭೀಮಾನದಿ ತೀರದ  ರೈತರು ಅಪಾರ ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ,  ಬೆಳೆ ಒಂದು ವಾರದಲ್ಲಿ ಕಟಾವಿಗೆ ಬರುವುದಿತ್ತು, ಅಕಾಲಿಕ ಮಳೆಯಿಂದ ಅಪಾರ ಭತ್ತದ ಬೆಳೆ ಕೂಡ ನಾಶವಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement