ಆಗ್ರಾ : ಮಹಾಕುಂಭ ಮೇಳ 2025 ಮುಕ್ತಾಯಗೊಳ್ಳುವ ಮೂರು ದಿನಗಳ ಮೊದಲು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಾಕುಂಭಕ್ಕೆ ಈವರೆಗೆ 62 ಕೋಟಿ ಭಕ್ತರು ಆಗಮಿಸಿದ್ದಾರೆ ಎಂದು ಭಾನುವಾರ ತಿಳಿಸಿದ್ದಾರೆ. ಮತ್ತು ನಿರ್ದಿಷ್ಟ ಅವಧಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಸೇರಿದ್ದು “ಶತಮಾನದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.
ಆಗ್ರಾದಲ್ಲಿ ನಡೆದ ಯುನಿಕಾರ್ನ್ ಕಂಪನಿಗಳ ಸೃಂಗಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಮಹಾಕುಂಭ ಮೇಳಕ್ಕೆ ಈವರೆಗೆ 62 ಕೋಟಿ ಭಕ್ತರು ಆಗಮಿಸಿದ್ದಾರೆ.
”ಪ್ರಪಂಚದ ಯಾವುದೇ ಸಮಾರಂಭದಲ್ಲಿ, ಅದು ಆಧ್ಯಾತ್ಮಿಕ ಅಥವಾ ಪ್ರವಾಸೋದ್ಯಮ ಅಥವಾ ಇನ್ನಾವುದೇ ಇರಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಎಲ್ಲಿಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರ ಸೇರುವಿಕೆ ಆಗಿಲ್ಲ. ಒಂದು ನಿರ್ದಿಷ್ಟ ಅವಧಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಸೇರುವುದು ಮತ್ತು ಆ ಕಾರ್ಯಕ್ರಮದೊಂದಿಗೆ ಐಕ್ಯವಾಗುವುದು ಶತಮಾನದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಗೋರಕ್ಷಾಪೀಠದ ಮಹಂತರೂ ಆಗಿರುವ ಆದಿತ್ಯನಾಥ ಅವರು, ಸಂಪ್ರದಾಯಗಳು ಮತ್ತು ಸಂಸ್ಕೃತಿ ಸಂಪರ್ಕವನ್ನು ಮರುಸ್ಥಾಪಿಸಲು ಕುಂಭವು ಪ್ರಬಲ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ