ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆ ವಿಧೇಯಕ 2024 ಮಂಡನೆ : ಪರೀಕ್ಷೆ ಅಕ್ರಮಕ್ಕೆ ಗರಿಷ್ಠ 10 ವರ್ಷ ಜೈಲು, 1 ಕೋಟಿ ರೂ.ದಂಡ

ನವದೆಹಲಿ: ಯುಪಿಎಸ್‌ಸಿ, ನೀಟ್‌, ಜೆಇಇ, ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳು ಸೇರಿದಂತೆ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆ ಮತ್ತು ನಕಲಿ ವೆಬ್‌ಸೈಟ್‌ಗಳಂತಹ ಅವ್ಯವಹಾರಗಳನ್ನು ಪರಿಶೀಲಿಸಲು ಕೇಂದ್ರವು ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕ- 2024 ಅನ್ನು ಮಂಡಿಸಿದೆ.  ಮಸೂದೆಯು ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ಸೇರಿದಂತೆ ಇದು ವಿವಿಧ ಶಿಕ್ಷಾ ಕ್ರಮಗಳಿಗೆ ಅವಕಾಶವನ್ನು ನೀಡುತ್ತದೆ. ಆದಾಗ್ಯೂ, ಸಂಘಟಿತ ಅಪರಾಧಗಳ ಪ್ರಕರಣಗಳಿಗೆ, ಮಸೂದೆಯು ೫ರಿಂದ 10 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ.
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC), ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC), ರೈಲ್ವೆ ನೇಮಕಾತಿ ಮಂಡಳಿಗಳು (RRBs), ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸ್ ನಡೆಸುವ ನೇಮಕಾತಿ ಪರೀಕ್ಷೆಗಳನ್ನು ಈ ಮಸೂದೆ ಒಳಗೊಂಡಿದೆ.
ಪ್ರಸ್ತುತ, ಕೇಂದ್ರ ಸರ್ಕಾರ ಮತ್ತು ಅದರ ಏಜೆನ್ಸಿಗಳು ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ಅಥವಾ ಅಪರಾಧಗಳನ್ನು ತಡೆಯಲು ಯಾವುದೇ ನಿರ್ದಿಷ್ಟವಾದ ವಸ್ತುನಿಷ್ಠ ಕಾನೂನು ಇಲ್ಲ.

ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಂಡಿಸಿದ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆ) ಮಸೂದೆ-2024 ಅನ್ನು ಮಂಡಿಸಿದ್ದಾರೆ. ಇದು “ಪ್ರಶ್ನೆ ಪತ್ರಿಕೆ ಅಥವಾ ಉತ್ತರ ಕೀ ಸೋರಿಕೆ”, “ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಾರ್ವಜನಿಕ ಪರೀಕ್ಷೆಯಲ್ಲಿ ಯಾವುದೇ ರೀತಿಯಲ್ಲಿ ಅನಧಿಕೃತವಾಗಿ ಅಭ್ಯರ್ಥಿಗೆ ಸಹಾಯ ಮಾಡುವುದು, ಕಂಪ್ಯೂಟರ್ ನೆಟ್‌ವರ್ಕ್ ಅಥವಾ ಕಂಪ್ಯೂಟರ್ ಸಂಪನ್ಮೂಲ ಅಥವಾ ಕಂಪ್ಯೂಟರ್ ಸಿಸ್ಟಮ್‌ನೊಂದಿಗೆ ಟ್ಯಾಂಪರಿಂಗ್ ಅನ್ನು ಅಕ್ರಮ ಎಂದು ಉಲ್ಲೇಖಿಸುತ್ತದೆ.
ಇವುಗಳ ಜೊತೆಗೆ, “ಮೋಸ ಮಾಡಲು ಅಥವಾ ಹಣದ ಲಾಭಕ್ಕಾಗಿ ನಕಲಿ ವೆಬ್‌ಸೈಟ್ ರಚಿಸುವುದು”, “ನಕಲಿ ಪರೀಕ್ಷೆ ನಡೆಸುವುದು, ನಕಲಿ ಪ್ರವೇಶ ಪತ್ರಗಳು ಅಥವಾ ಆಫರ್ ಲೆಟರ್‌ಗಳನ್ನು ಮೋಸ ಮಾಡಲು ಅಥವಾ ಹಣದ ಲಾಭಕ್ಕಾಗಿ” ಬಳಸಿಕೊಳ್ಳುವುದು ಇತ್ಯಾದಿ ಅಕ್ರಮ ವಿಧಾನಗಳನ್ನು “ಉದ್ದೇಶಿತ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳು ಎಂದು ಪರಿಗಣಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ 300ರ ಆಸುಪಾಸು ಸ್ಥಾನ ಪಡೆಯಬಹದು; ಬಿಜೆಪಿ ಸಂಖ್ಯೆ ಕುಸಿಯುವ ಗ್ರೌಂಡ್ ರಿಯಾಲಿಟಿ ನನಗೆ ಕಾಣುತ್ತಿಲ್ಲ : ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ

“ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳು ಈ ಕಾಯಿದೆಯಡಿಯಲ್ಲಿ ಅಕ್ರಮ ವಿಧಾನಗಳು ಮತ್ತು ಅಪರಾಧಿಕ ಪ್ರಕ್ರಿಯೆಗೆ ಮುಂದಾದರೆ ಅವರಿಗೆ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ” ಎಂದು ಮಸೂದೆ ಹೇಳುತ್ತದೆ. ಅಲ್ಲದೆ, ಸಂಘಟಿತ ಅಪರಾಧಗಳ ಪ್ರಕರಣಗಳಿಗೆ, ಮಸೂದೆಯು ೫ರಿಂದ 10 ವರ್ಷಗಳ ಜೈಲು ಶಿಕ್ಷೆಯನ್ನೂ ಪ್ರಸ್ತಾಪಿಸುತ್ತದೆ. ಪರೀಕ್ಷೆಗಳನ್ನು ನಡೆಸಲು ಸಾರ್ವಜನಿಕ ಪರೀಕ್ಷಾ ಪ್ರಾಧಿಕಾರದಿಂದ ತೊಡಗಿಸಿಕೊಂಡಿರುವ ಸೇವಾ ಪೂರೈಕೆದಾರರು ಅಕ್ರಮವೆಸಗಿದರೆ, 1 ಕೋಟಿ ರೂ.ವರೆಗಿನ ದಂಡ ವಿಧಿಸುವುದರೊಂದಿಗೆ ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಪರೀಕ್ಷೆಯ ವೆಚ್ಚವನ್ನು ಸಹ ಅವರಿಂದ ವಸೂಲಿ ಮಾಡಲಾಗುತ್ತದೆ. ಅಂತಹ ಸೇವಾ ಪೂರೈಕೆದಾರರನ್ನು ನಾಲ್ಕು ವರ್ಷಗಳ ಅವಧಿಗೆ ಯಾವುದೇ ಸಾರ್ವಜನಿಕ ಪರೀಕ್ಷೆಯ ನಿರ್ವಹಣೆಗೆ ಯಾವುದೇ ಜವಾಬ್ದಾರಿಗೆ ನಿಯೋಜಿಸದಂತೆ ನಿರ್ಬಂಧಿಸಲಾಗುತ್ತದೆ ಎಂದು ವಿಧೇಯಕ ಹೇಳುತ್ತದೆ.

ಸಂಘಟಿತ ಗ್ಯಾಂಗ್‌ಗಳು, ಮಾಫಿಯಾ ಅಂಶಗಳು ಮತ್ತು ದುಷ್ಕೃತ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಲು ಮತ್ತು ಪರಿಣಾಮಕಾರಿಯಾಗಿ ವ್ಯವಹರಿಸಲು ಮಸೂದೆ ನಿಬಂಧನೆಗಳನ್ನು ಹೊಂದಿದೆ. ಅಂತಹವರ ಜೊತೆ ಶಾಮೀಲಾಗಿರುವ ಸರ್ಕಾರಿ ಅಧಿಕಾರಿಗಳನ್ನು ಸಹ ಅದು ಬಿಡುವುದಿಲ್ಲ.
ಮಸೂದೆಯು ರಾಜ್ಯಗಳು ತಮ್ಮ ವಿವೇಚನೆಯಿಂದ ಅಳವಡಿಸಿಕೊಳ್ಳಲು ಮಾದರಿ ಕರಡು ಪ್ರತಿಯಾಗಿ ಕಾರ್ಯನಿರ್ವಹಿಸುತ್ತದೆ.
“ಇದು ರಾಜ್ಯಗಳ ರಾಜ್ಯ ಮಟ್ಟದ ಸಾರ್ವಜನಿಕ ಪರೀಕ್ಷೆಗಳ ನಡವಳಿಕೆಗೆ ಅಡ್ಡಿಪಡಿಸದಂತೆ ಅಪರಾಧದ ಅಂಶಗಳನ್ನು ತಡೆಯಲು ರಾಜ್ಯಗಳಿಗೆ ಸಹಾಯ ಮಾಡುತ್ತದೆ” ಎಂದು ಉದ್ದೇಶಿತ ಮಸೂದೆಯ ಉದ್ದೇಶಗಳು ಮತ್ತು ಕಾರಣಗಳು ಹೇಳುತ್ತವೆ.
ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಥವಾ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್ ದರ್ಜೆಗಿಂತ ಕಡಿಮೆಯಿಲ್ಲದ ಅಧಿಕಾರಿಯು ಉದ್ದೇಶಿತ ಕಾಯ್ದೆಯಲ್ಲಿ ಉಲ್ಲೇಖಿಸಲಾದ ಯಾವುದೇ ಅಪರಾಧವನ್ನು ತನಿಖೆ ಮಾಡಬೇಕು ಎಂದು ಅದು ಹೇಳುತ್ತದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ ಬಳಿಕ ಮೊಬೈಲ್ ರೀಚಾರ್ಜ್ ಬೆಲೆಯಲ್ಲಿ ಶೇ.25 ಹೆಚ್ಚಳ ಸಾಧ್ಯತೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement