ಎಂಟಿ-ವೈರಸ್ ಸಾಫ್ಟ್‌ವೇರ್ ಪ್ರವರ್ತಕ ಜಾನ್ ಮ್ಯಾಕ್‌ಅಫೀ ಸ್ಪೇನ್‌ ಜೈಲಿನಲ್ಲಿ ಆತ್ಮಹತ್ಯೆ: ವಕೀಲರ ಹೇಳಿಕೆ

ತೆರಿಗೆ ವಂಚನೆ ಆರೋಪದ ಮೇಲೆ ಅಮೆರಿಕಕ್ಕೆ ಹಸ್ತಾಂತರಿಸಲು ಸ್ಪೇನ್‌ ಹೈಕೋರ್ಟ್ ಅಧಿಕಾರ ನೀಡಿದ ನಂತರ ಬ್ರಿಟಿಷ್ ಮೂಲದ ಅಮೆರಿಕದ ತಂತ್ರಜ್ಞಾನ ಉದ್ಯಮಿ ಜಾನ್ ಮ್ಯಾಕ್ಅಫೀ ಬಾರ್ಸಿಲೋನಾ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಅವರ ವಕೀಲರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಮ್ಯಾಕ್ಅಫೀ ಅವರ ವಕೀಲ ಜೇವಿಯರ್ ವಿಲ್ಲಾಲ್ಬಾ, ಎಂಟಿ-ವೈರಸ್ ಸಾಫ್ಟ್‌ವೇರ್ ಪ್ರವರ್ತಕ ಜಾನ್ ಮ್ಯಾಕ್ಅಫೀ ಒಂಭತ್ತು ತಿಂಗಳ ಜೈಲಿನಲ್ಲಿದ್ದ ಕಾರಣ ಮಾನಸಿಕವಾಗಿ ಹತಾಶರಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, 75 ವರ್ಷದ ಮ್ಯಾಕ್ಅಫೀ, ತನ್ನ ವಯಸ್ಸನ್ನು ಗಮನಿಸಿದರೆ, ಅಮೆರಿಕದಲ್ಲಿ ಅಪರಾಧ ಸಾಬೀತಾದರೆ ತಾನು ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ಹೇಳಿದ್ದರು “ಸ್ಪೇನ್‌ ನ್ಯಾಯಾಲಯವು ಈ ಅನ್ಯಾಯವನ್ನು ನೋಡುತ್ತದೆ ಎಂದು ನಾನು ಭಾವಿಸುತ್ತೇನೆ.”ಮತ್ತು “ಅಮೆರಿಕವು ನನ್ನನ್ನು ಉದಾಹರಣೆಯಾಗಿ ಬಳಸಲು ಬಯಸಿದೆ ಎಂದು ಎಂದು ಅವರು ಹೇಳಿದ್ದರು.
ಮ್ಯಾಕ್ಅಫೀ ಅಮೆರಿಕ ಅಧಿಕಾರಿಗಳಿಂದ ವರ್ಷಗಳ ಕಾಲ ತಪ್ಪಿಸಿಕೊಂಡಿದ್ದರು. ತೆರಿಗೆ ವಂಚನೆ ಆರೋಪದ ಮೇಲೆ ಅವರ ಮೇಲೆ ದೋಷಾರೋಪಣೆ ಮಾಡಲಾಯಿತು ಮತ್ತು ನ್ಯೂಯಾರ್ಕ್‌ನಲ್ಲಿ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಯಿತು.
ವರ್ಣರಂಜಿತ ಟೆಕ್ ಸಂಸ್ಥಾಪಕನನ್ನು ಅಕ್ಟೋಬರ್ 3, 2020 ರಂದು ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು, ಅವರು ಬ್ರಿಟಿಷ್ ಪಾಸ್ಪೋರ್ಟ್‌ ನೊಂದಿಗೆ ಇಸ್ತಾಂಬುಲ್‌ಗೆ ವಿಮಾನ ಹತ್ತಲು ಹೊರಟಿದ್ದರು ಎಂದು ಸ್ಪೇನ್‌ ಪೊಲೀಸ್ ಮೂಲವೊಂದು ಆ ಸಮಯದಲ್ಲಿ ತಿಳಿಸಿತ್ತು.
1987 ರಲ್ಲಿ ಕಂಪಯೂಟರಿನ ವಿಶ್ವದ ಮೊದಲ ವಾಣಿಜ್ಯ ವಿರೋಧಿ ವೈರಸ್ ಅನ್ನು ಪ್ರಾರಂಭಿಸುವ ಮೊದಲು ಮ್ಯಾಕ್ಅಫೀ ನಾಸಾ, ಜೆರಾಕ್ಸ್ ಮತ್ತು ಲಾಕ್ಹೀಡ್ ಮಾರ್ಟಿನ್ ಗಾಗಿ ಕೆಲಸ ಮಾಡಿದರು. ಅವರು ತಮ್ಮ ಸಾಫ್ಟ್‌ವೇರ್ ಕಂಪನಿಯನ್ನು 2011 ರಲ್ಲಿ ಇಂಟೆಲ್‌ಗೆ ಮಾರಿದರು ಮತ್ತು ನಂತರದಲ್ಲಿ ವ್ಯವಹಾರದಲ್ಲಿ ಅವರ ಯಾವುದೇ ಒಳಗೊಳ್ಳುವಿಕೆ ಇರಲಿಲ್ಲ. ಎಂಟಿ ವೈರಸ್‌ ಪ್ರೋಗ್ರಾಂ ಇನ್ನೂ ಅವರ ಹೆಸರನ್ನು ಹೊಂದಿದೆ ಮತ್ತು ವಿಶ್ವಾದ್ಯಂತ 50 ಕೋಟಿ ಬಳಕೆದಾರರನ್ನು ಹೊಂದಿದೆ.
ಮ್ಯಾಕ್‌ಅಫಿಯನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಸ್ಪೇನ್‌ನ ಹೈಕೋರ್ಟ್ ಬುಧವಾರ ತಿಳಿಸಿದೆ. ಹಸ್ತಾಂತರಕ್ಕಾಗಿ ಕಾಯುತ್ತಿರುವ 75 ವರ್ಷದ ಅಮೆರಿಕದ ವ್ಯಕ್ತಿಯೊಬ್ಬ ತನ್ನ ಕೋಶದಲ್ಲಿ ಬುಧವಾರ ಮೃತಪಟ್ಟಿರುವುದು ಪ್ರಾದೇಶಿಕ ನ್ಯಾಯ ಇಲಾಖೆ ದೃ ಢಪಡಿಸಿದೆ. ಜೈಲು ಅಧಿಕಾರಿಗಳು ಸಾವಿಗೆ ಕಾರಣ ತನಿಖೆ ನಡೆಸುತ್ತಿದ್ದಾರೆ.
ಮ್ಯಾಕ್ಅಫೀ ಅವರಿಗೆ ಮೇಲ್ಮನವಿ ಸಲ್ಲಿಸಲು ಇನ್ನೂ ಅವಕಾಶಗಳಿದ್ದವು. ಆದರೆ ಜೈಲಿನಲ್ಲಿ ಹೆಚ್ಚು ಸಮಯ ಕಳೆಯಲು ಅವರಿಗೆ ಸಾಧ್ಯವಿರಲಿಲ್ಲ ಎಂದು ವಿಲ್ಲಾಲ್ಬಾ ಹೇಳಿದರು.
ಇದು ಕ್ರೂರ ವ್ಯವಸ್ಥೆಯ ಪರಿಣಾಮವಾಗಿದೆ, ಈ ವ್ಯಕ್ತಿಯನ್ನು ಇಷ್ಟು ದಿನ ಜೈಲಿನಲ್ಲಿಡಲು ಯಾವುದೇ ಕಾರಣವಿಲ್ಲ” ಎಂದು ವಿಲ್ಲಾಲ್ಬಾ ಹೇಳಿದರು. ಮ್ಯಾಕ್ಅಫಿಯ ಸಾವಿನ ಕಾರಣ ಅವರ ಮೇಲಿರುವ ಆರೋಪಗಳನ್ನು ವಜಾಗೊಳಿಸಲು ತೆರಿಗೆ ವಂಚನೆ ಪ್ರಕರಣದ ಮೇಲ್ವಿಚಾರಣೆಯ ನ್ಯಾಯಾಧೀಶರನ್ನು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಕೇಳಲಿದ್ದಾರೆ.
ಸೈದ್ಧಾಂತಿಕ ಕಾರಣಗಳಿಗಾಗಿ ( ideological reasons) ಎಂಟು ವರ್ಷಗಳಿಂದ ಅಮೆರಿಕದ ಆದಾಯ ತೆರಿಗೆಯನ್ನು ಪಾವತಿಸಿಲ್ಲ ಎಂದು ಮ್ಯಾಕ್ಅಫೀ 2019 ರಲ್ಲಿ ಹೇಳಿದ್ದರು. ಆ ವರ್ಷ, ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ಅಮೆರಿಕವನ್ನುತೊರೆದರು, ಅವರ ಪತ್ನಿ, ನಾಲ್ಕು ದೊಡ್ಡ ನಾಯಿಗಳು, ಇಬ್ಬರು ಸೆಕ್ಯುರಿಟಿ ಗಾರ್ಡ್ ಮತ್ತು ಏಳು ಸಿಬ್ಬಂದಿಯೊಂದಿಗೆ ಹೆಚ್ಚಾಗಿ ಮೆಗಯಾಚಿನಲ್ಲಿ ವಾಸಿಸುತ್ತಿದ್ದರು.
ಕ್ರಿಪ್ಟೋಕರೆನ್ಸಿಯನ್ನು ಬಳಸಿಕೊಂಡು ಅಮೆರಿಕ ವ್ಯಾಪಾರ ನಿರ್ಬಂಧವನ್ನು ತಪ್ಪಿಸಿ ಕ್ಯೂಬಾಗೆ ಸಹಾಯ ಮಾಡಲು ಅವರು ಮುಂದಾದರು ಮತ್ತು ಲಿಬರ್ಟೇರಿಯನ್ ಪಕ್ಷದಿಂದ ಅಮೆರಿಕ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಯತ್ನಿಸಿದರು.ತನಗೆ ಕನಿಷ್ಠ 47 ಮಕ್ಕಳಿದ್ದಾರೆ ಎಂದು 2018 ರಲ್ಲಿ ಹೇಳಿದ ಮ್ಯಾಕ್‌ಅಫೀ, ಬೆಲೀಜಿನಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರು.
2012 ರ ನೆರೆಯವನ ಕೊಲೆ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಿದ ನಂತರ ಆತ ಪರಾರಿಯಾಗಿದ್ದರು. ಆದರೆ ಪೊಲೀಸರು ಅಂತಿಮವಾಗಿ ಅವರು ಶಂಕಿತರಲ್ಲ ಎಂದು ಹೇಳಿದ್ದರು.
ಜಾನ್ ಅವರ ಪತ್ನಿ ಜಾನಿಸ್ ಮ್ಯಾಕ್ಅಫೀ ಭಾನುವಾರ ಟ್ವಿಟ್ಟರ್ನಲ್ಲಿ ಪೋಸ್ಟ್‌ ನಲ್ಲಿ, “ಈಗ ಅಮೆರಿಕ ಅಧಿಕಾರಿಗಳು ತಮ್ಮ ಸರ್ಕಾರಿ ಸಂಸ್ಥೆಗಳೊಳಗಿನ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಜಾನ್ ಅವರನ್ನು ಉದಾಹರಣೆಯಾಗಿ ಮಾಡಲು ಜೈಲಿನಲ್ಲಿ ಸಾಯಬೇಕೆಂದು ನಿರ್ಧರಿಸಲಾಗಿದೆ …ಅಲ್ಲಿ ಅವರಿಗೆ ನ್ಯಾಯ ಸಿಗುತ್ತದೆ ಎಂಬ ಬಗ್ಗೆ ಯಾವುದೇ ಭರವಸೆ ಇಲ್ಲ ಎಂದು ಹೇಳಿದ್ದರು.
ಮ್ಯಾಕ್ಅಫೀ ಟ್ವಿಟ್ಟರಿನ ಸಮೃದ್ಧ ಬಳಕೆದಾರರಾಗಿದ್ದರು, ಅಲ್ಲಿ ಅವರು 10 ಲಕ್ಷ ಫಾಲೋವರ್ಸ್ ಹೊಂದಿದ್ದರು ಮತ್ತು ಇತರ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುತ್ತಿದ್ದರು.
ವಿಶ್ವದಾದ್ಯಂತ ಹಲವಾರು ಕ್ರಿಪ್ಟೋಕರೆನ್ಸಿ ಬೆಂಬಲಿಗರು ಬುಧವಾರ ಸಂತಾಪದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಜೂನ್ 18 ರಂದು ತನ್ನ ಕೊನೆಯ ಸಾರ್ವಜನಿಕ ಟ್ವೀಟ್‌ನಲ್ಲಿ, ಎಲ್ಲಾ ಅಧಿಕಾರವು ಭ್ರಷ್ಟವಾಗಿದೆ. ಪ್ರಜಾಪ್ರಭುತ್ವವನ್ನು ನಿಯಂತ್ರಿಸಲು ನೀವು ಯಾವ ಅಧಿಕಾರವನ್ನು ಅನುಮತಿಸುತ್ತೀರಿ ಎಂದು ನೋಡಿಕೊಳ್ಳಿ ಎಂದು ಮ್ಯಾಕ್‌ಅಫೀ ಬರೆದಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement