ಮಳೆ ಅಬ್ಬರ : ಪದವಿ ಪರೀಕ್ಷೆ ಮುಂದೂಡಿದ ಮಂಗಳೂರು ವಿವಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದ ಹಿನ್ನೆಲೆಯಲ್ಲಿ ನಾಳೆ (ಜುಲೈ 25)ನಡೆಯಬೇಕಿದ್ದ ಮಂಗಳೂರು ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿವಿ ಪ್ರಕಟನೆಯಲ್ಲಿ ತಿಳಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ದಿನಾಂಕ 25-07-2023ರಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ … Continued

ಕುಂದಾಪುರ: ಅರಶಿಣಗುಂಡಿ ಜಲಪಾತ ವೀಕ್ಷಣೆ ಮಾಡುವಾಗ ನೀರು ಪಾಲಾದ ಯುವಕ

ಉಡುಪಿ : ಜಲಪಾತ ವೀಕ್ಷಣೆಗೆ ಹೋಗಿದ್ದ ಯುವಕ ಕಾಲು ಜಾರಿ ನೀರು ಪಾಲಾದ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಸಮೀಪದ ಅರಶಿಣ ಗುಂಡಿ ಜಲಪಾತದಲ್ಲಿ ನಡೆದಿದೆ. ನೀರಿಗೆ ಬಿದ್ದ ಯುವಕನನ್ನು ಭದ್ರಾವತಿ ಮೂಲದ 23 ವರ್ಷದ ಶರತಕುಮಾರ ಎಂದು ಗುರುತಿಸಲಾಗಿದೆ. ಭಾನುವಾರ ಸ್ನೇಹಿತನೊಂದಿಗೆ ಕೊಲ್ಲೂರಿಗೆ ಬಂದಿದ್ದ ಈತ ಅರಶಿನಗುಂಡಿ ಜಲಪಾತ ನೊಡಲು ತೆರಳಿದ್ದರು. ಬಂಡೆಕಲ್ಲಿನ … Continued

ಮುಂದುವರೆದ ಭಾರೀ ಮಳೆ: ಜುಲೈ 25ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು/ಉಡುಪಿ : ಮಂಗಳವಾರ (ಜುಲೈ 25) ಹವಾಮಾನ ಇಲಾಖೆಯ ಭಾರೀ ಮಳೆ ಮುನ್ಸೂಚನೆ ನೀಡಿ ರೆಡ್‌ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಜು.25ರಂದು ರಜೆ ಘೋಷಣೆ ಮಾಡಲಾಗಿದೆ. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜುಲೈ 25ರಂದು ರಜೆ ಘೋಷಣೆ … Continued

ಭಾರೀ ಮಳೆ ಹಿನ್ನೆಲೆ: ಜುಲೈ 25ರಂದು ಉತ್ತರ ಕನ್ನಡ ಜಿಲ್ಲೆಯ ಶಾಲೆ-ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್‌ಗಳಿಗೆ ಜುಲೈ 25ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲಾಡಳಿತವು ಸೋಮವಾರ ಜುಲೈ 25ರಂದು ಜಿಲ್ಲಾದ್ಯಂತ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದೆ. … Continued

ಕರ್ನಾಟಕ ಹೈಕೋರ್ಟ್​ನ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ನ ಆರು ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆಯ ಸಂದೇಶ ಬಂದಿದ್ದು, ಬೆದರಿಕೆ ಹಾಕಿರುವವರು 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಹಾಗೂ ಅದನ್ನು ಪಾಕಿಸ್ತಾನದ ಬ್ಯಾಂಕ್‌ ಅಕೌಂಟ್‌ಗೆ ಹಾಕಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಕೊಲೆ ಬೆದರಿಕೆ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಎಫ್‌ಐಆರ್‌ ದಾಖಲಾಗಿದ್ದು, … Continued

ಅತಿ ದೀರ್ಘ ಕಾಲ ಸಿಎಂ : ಜ್ಯೋತಿ ಬಸು ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಿದ ನವೀನ ಪಟ್ನಾಯಕ್ : ಮೊದಲ ಸ್ಥಾನದಲ್ಲಿ ಯಾರು..? ಟಾಪ್ 10 ಸಿಎಂಗಳ ಪಟ್ಟಿ…

ನವದೆಹಲಿ : ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಈಗ ದೇಶದ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾದವರಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿ 23 ವರ್ಷ 140 ದಿನಗಳನ್ನು ಪೂರೈಸಿದ್ದಾರೆ. ಅವರು ಮಾರ್ಚ್ 5, 2000 ರಿಂದ ಒಡಿಶಾದ ಮುಖ್ಯಮಂತ್ರಿಯಾಗಿದ್ದಾರೆ. ಈಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ದಾಖಲೆಯನ್ನು … Continued

ಗುಂಡು ಹಾರಿಸಿ ಹೆಂಡತಿ, ಅಳಿಯನನ್ನು ಕೊಂದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿರಿಯ ಪೊಲೀಸ್‌ ಅಧಿಕಾರಿ

ಪುಣೆ : 57 ವರ್ಷದ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಸೋಮವಾರ ಮಹಾರಾಷ್ಟ್ರದ ಪುಣೆ ನಗರದಲ್ಲಿನ ತನ್ನ ಮನೆಯಲ್ಲಿ ತನ್ನ ಪತ್ನಿ ಮತ್ತು ಸೋದರಳಿಯನನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾರೆ ಹಾಗೂ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾನೇರ್ ಪ್ರದೇಶದ ಎಸಿಪಿ ಭರತ್ ಗಾಯಕ್ವಾಡ ಅವರ ಬಂಗಲೆಯಲ್ಲಿ ಬೆಳಗಿನ ಜಾವ 3:30ರ … Continued

2022-23ನೇ ಸಾಲಿಗೆ ನೌಕರರ ಭವಿಷ್ಯ ನಿಧಿಗೆ ಶೇ.8.15 ಬಡ್ಡಿದರಕ್ಕೆ ಒಪ್ಪಿಗೆ ನೀಡಿದ ಸರ್ಕಾರ

ನವದೆಹಲಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಶೇಕಡಾ 8.15 ರಷ್ಟು ಬಡ್ಡಿಯನ್ನು ಕ್ರೆಡಿಟ್ ಮಾಡಲು ಅನುಮೋದಿಸಿದೆ. ಜುಲೈ 24 ರಂದು ಹೊರಡಿಸಲಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಚೇರಿ ಆದೇಶದ ಪ್ರಕಾರ, ಕಾರ್ಮಿಕ ಸಚಿವಾಲಯವು ಇಪಿಎಫ್ ಯೋಜನೆಯ ಪ್ರತಿಯೊಬ್ಬ ಸದಸ್ಯರಿಗೆ 2021-22 ಕ್ಕೆ ವಾರ್ಷಿಕ … Continued

ಯಲ್ಲಾಪುರ : ಹಿರಿಯ ಪತ್ರಕರ್ತ ಅನಂತ ವೈದ್ಯ ನಿಧನ

ಯಲ್ಲಾಪುರ : ಹಿರಿಯ ಪತ್ರಕರ್ತ, ಅಂಕಣಕಾರ ಅನಂತ ವೈದ್ಯ (75) ಅವರು ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ. ಮೂಲತಃ ಅಂಕೋಲಾ ತಾಲೂಕಿನ ವೈದ್ಯಹೆಗ್ಗಾರಿನವರಾಗಿದ್ದು ಅವರು ಪತ್ನಿ ವಿಜಯಶ್ರೀ, ಇಬ್ಬರು ಪುತ್ರಿಯರಾದ ಕವಿತಾ, ಸಂಗೀತಾ, ಓರ್ವ ಪುತ್ರ ಕಿರಣ ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ. ರಾಜ್ಯ ಮಟ್ಟದ ದಿನಪತ್ರಿಕೆಯ ವರದಿಗಾರರಾಗಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. … Continued

ಬೆಂಗಳೂರು: ಆರ್‌ಎಸ್‌ಎಸ್ ಪ್ರಮುಖ ಮದನದಾಸ ದೇವಿ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ಮುಖಂಡ ಮದನದಾಸ ದೇವಿ (81) ಅವರು ಸೋಮವಾರ (ಜುಲೈ 24) ಬೆಳಿಗ್ಗೆ ನಿಧನರಾದರು. ಮೂಲತಃ ಮಹಾರಾಷ್ಟ್ರದವರಾದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಮುಂಜಾನೆ 5 ಗಂಟೆಗೆ ರಾಜರಾಜೇಶ್ವರಿ ನಗರದ  ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪಾರ್ಥೀವ ಶರೀರವನ್ನು ಆರ್‌ಎಸ್‌ಎಸ್‌ ಸ್ಥಳೀಯ ಪ್ರಧಾನ ಕಚೇರಿ … Continued