ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ ನಿಧನ

ನವ ದೆಹಲಿ; ಕರ್ನಾಟಕ ಮೂಲದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನ್ಯಾ. ಮೋಹನ್ ಎಂ. ಶಾಂತನಗೌಡರ್ ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮೋಹನ್ ಮಲ್ಲಿಕಾರ್ಜುನಗೌಡ ಶಾಂತನಗೌಡರ್ (61) ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಡಲಾಗಿತ್ತು. ಶನಿವಾರ ರಾತ್ರಿ ಅವರು ನಿಧನರಾಗಿದ್ದಾರೆ. ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದವರು. … Continued

ರೆಮ್ಡಿಸಿವಿರ್‌ : ಕರ್ನಾಟಕದ ಪಾಲು 1.22 ಲಕ್ಷ ವಯಲ್‌

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಶನಿವಾರ ರೆಡಿಸಿವಿರ್‌ ಮರು ಹಂಚಿಕೆ ಮಾಡಿದ್ದೇವೆ. ಇದರಲ್ಲಿ ಕರ್ನಾಟಕದ ಪಾಲು 1.22 ಲಕ್ಷ ವಯಲ್‌ಗ‌ಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ನಾನು ನಿರ್ವಹಿಸುವ ಔಷಧ ಇಲಾಖೆ ಮತ್ತು ಆರೋಗ್ಯ ಇಲಾಖೆಯ … Continued

ಅನಿಲ ದೇಶ್ಮುಖರಿಂದ ತಮ್ಮ ಸಾರ್ವಜನಿಕ ಕರ್ತವ್ಯದಲ್ಲಿ ಅಪ್ರಾಮಾಣಿಕ ಸಾಧನೆಗಾಗಿ ಅನಗತ್ಯ ಲಾಭ ಪಡೆಯಲು ಪ್ರಯತ್ನ: ಸಿಬಿಐ ಎಫ್‌ಐಆರ್‌

ಮುಂಬೈ; ಲಂಚ, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಅಪರಿಚಿತ ಜನರ ವಿರುದ್ಧ ಮೊದಲ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಅಪರಿಚಿತ ಇತರರು ತಮ್ಮ ಸಾರ್ವಜನಿಕ ಕರ್ತವ್ಯದ ಅನುಚಿತ … Continued

ಮಹತ್ವದ ಸುದ್ದಿ.. ಕೋವಾಕ್ಸಿನ್ ದರ ಪ್ರಕಟಿಸಿದ ಭಾರತ್‌ ಬಯೋಟೆಕ್‌ : ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 600 ರೂ., ಖಾಸಗಿ ಆಸ್ಪತ್ರೆಗಳಿಗೆ 1200 ರೂ. ನಿಗದಿ

ನವ ದೆಹಲಿ:  ಕೊವಾಕ್ಸಿನ್ ಲಸಿಕೆಯ ದರವನ್ನ ಹೈದರಾಬಾದ್ ಮೂಲದ ಕಂಪನಿ ಭಾರತ್‌ ಬಯೋಟಿಕ್‌ ಘೋಷಿಸಿದ್ದು, ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ. ಭಾರತ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ನಾವು ಕೋವಾಕ್ಸಿನ್ ಲಸಿಕೆಗಳ ಬೆಲೆಗಳನ್ನು ಘೋಷಿಸುತ್ತೇವೆ. ರಾಜ್ಯ ಸರ್ಕಾರದ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ … Continued

ಐಸಿಐಸಿಐ ಬ್ಯಾಂಕ್ 4ನೇ ತ್ರೈಮಾಸಿಕದ ನಿವ್ವಳ ಲಾಭ ಎರಡು ಪಟ್ಟು ಹೆಚ್ಚಳ

ಮುಂಬೈ: ನಿವ್ವಳ ಬಡ್ಡಿ ಆದಾಯ (ಎನ್‌ಐಐ) ಏರಿಕೆ ಮತ್ತು ಕಡಿಮೆ ನಿಬಂಧನೆಯ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಮೂರು ತಿಂಗಳ ಅವಧಿಯಲ್ಲಿ ಖಾಸಗಿ ವಲಯದ ಬ್ಯಾಂಕ್‌ ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ  4,402.61 ಕೋಟಿ ರೂ. ಅಂದರೆ 260.47% (ವರ್ಷದಿಂದ ವರ್ಷಕ್ಕೆ ) ನಿವ್ವಳ ಲಾಭ ತಲುಪಿದೆ. ಹಿಂದಿನ ತ್ರೈಮಾಸಿಕದಲ್ಲಿ ಬ್ಯಾಂಕ್ 1,221.36 ಕೋಟಿ ನಿವ್ವಳ ಲಾಭ ಗಳಿಸಿತ್ತು. … Continued

ಕೋವಿಡ್ ಚಿಕಿತ್ಸಾ ವೆಚ್ಚ ಕಡಿಮೆ ಮಾಡಲು ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚೆ

ಹುಬ್ಬಳ್ಳಿ: ಧಾರವಾಡದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಕೊವೀಡ್ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಶೇ.50 ರಷ್ಟು ಕಡಿಮೆ ಮಾಡುವಂತೆ ಕೋರಲಾಗುವುದು. ಈ ಕುರಿತು ಎಸ್.ಡಿ.ಎಂ. ನ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ಬಳಿ ಜಿಲ್ಲಾಡಳಿತದಿಂದ ಆರಂಭಿಸಲಾಗಿರುವ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ … Continued

ಕೊರೊನಾ ಹೊಡೆತಕ್ಕೆ ಮೀನಾಗರರು ಸಂಕಷ್ಟದಲ್ಲಿ

ಕಾರವಾರ : ಕೊರೋನಾ ಮಹಾಮಾರಿ ಮೀನುಗಾರರ ಬದುಕನ್ನುಸಂಕಷ್ಟಕ್ಕೆ ತಳ್ಳಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರಿಗೆ ಅವಧಿಗೂ ಮುಂಚಿತವೇ ಮೀನುಗಾರಿಕೆ ಬಂದ್ ಮಾಡುವ ಸ್ಥಿತಿ ಮತ್ತೊಮ್ಮೆ ಬಂದೊದಗಿದೆ. ಆಳ ಸಮುದ್ರ ಮೀನುಗಾರಿಕೆ ಹಂಗಾಮು ಮುಕ್ತಾಯಕ್ಕೆ ಇನ್ನು ಒಂದು ತಿಂಗಳ ಸಮಯವಿರುವಂತೆಯೇ ಮೀನುಗಾರಿಕೆ ಸ್ಥಗಿತ ಮಾಡಲು ಮೀನುಗಾರರು ಮುಂದಾಗಿದ್ದಾರೆ. ಕೊರೊನಾಕ್ಕೆ ಹೆದರಿ ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರು … Continued

ಕರ್ನಾಟಕದಲ್ಲಿ 30 ಸಾವಿರದ ಸಮೀಪಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..208 ಸಾವು..!

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 29,438 ಜನರಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿರುವುದು ದಾಖಲಾಗಿದೆ. ಇದೇ ಇದೇ ಸಮಯದಲ್ಲಿ ಕೊರೊನಾ ಸೋಂಕಿನಿಂದ 208 ಜನರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,34,483ಕ್ಕೆ ಏರಿಕೆಯಾಗಿದೆ. ಈ ಕುರಿತು ಶನಿವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ … Continued

ಜನ್ಮದಿನದಂದು ಪ್ಲಾಸ್ಮಾ ದಾನಕ್ಕೆ ಮುಂದಾದ ತೆಂಡೂಲ್ಕರ್‌

ಮುಂಬೈ: ಕೋವಿಡ್​ ಸೋಂಕಿನಿಂದ ಗುಣಮುಖರಾಗಿರುವ ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ತಮ್ಮ ಜನ್ಮದಿನದಂದೇ ಮಹ್ವದ ನಿರ್ಧಾರ ಕೈಗೊಂಡಿದ್ದಾರೆ. ಕೋವಿಡ್​ನಿಂದ ಗುಣಮುಖರಾಗಿರುವ ಅವರು ಈಗ ಪ್ಲಾಸ್ಮಾ ದಾನ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಿಳಿಸಿರುವ ಅವರು, ಪ್ಲಾಸ್ಮಾದಾನಕ್ಕೆ ತಾವು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ನಾನು ಪ್ಮಾಸ್ಮಾ ಕೇಂದ್ರ ಉದ್ಘಾಟಿಸಿದ್ದೆ. … Continued

ಆಸ್ಪತ್ರೆಯಲ್ಲಿ ಸಕಾಲಕ್ಕೆ ಬೆಡ್‌ ಸಿಗದೆ ಕೊರೊನಾ ವಾರಿಯರ್ಸ್‌ ಸಾವು

ಬೆಂಗಳೂರು: ಕೊರೋನಾ ಎರಡನೇ ಅಲೆ ತಜ್ಞರು ಅಂದಾಜಿಸಿದ್ದಕ್ಕಿಂತ ಭೀಕರವಾಗಿದೆ. ಸೋಂಕಿನ ಹರಡುವಿಕೆ ಅಂದಾಜಿಗೆ ಸಿಗುತ್ತಿಲ್ಲ. ಈ ಕೋವಿಡ್‌ ಸಮಯದಲ್ಲಿ ಕೊರೊನಾ ವಾರಿಯರ್ಸ್‌ ಆಗಿದ್ದ ಬೆಂಗಳೂರಿನ ಸ್ವಾಬ್​ ಸಂಗ್ರಹಕಾರರೊಬ್ಬರು ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಮೃತಪಟ್ಟಿದ್ದಾರೆ. . ಮರ್ಸಿಟೌನ್​ನ ಗೀತಾ (35) ಎಂಬವರು ಮೃತಪಟ್ಟವರು. ಕೊರೊನಅ ಸೋಂಕಿಗೆ ಒಳಗಾಗಿದ್ದ ಅವರು, ನಾಲ್ಕೈದು ಆಸ್ಪತ್ರೆಗಳಿಗೆ ಓಡಾಡಿದರೂ ಸೂಕ್ತ ಸಮಯದಲ್ಲಿ ಬೆಡ್​ … Continued