ಕ್ಷುದ್ರಗ್ರಹ ಪತ್ತೆ ಮಾಡಿದ ಕೈವಲ್ಯ ರೆಡ್ಡಿಗೆ ಆಂಧ್ರ ಸಿಎಂ ಅಭಿನಂದನೆ

ವಿಜಯವಾಡ: ಮಂಗಳವಾರ ಮತ್ತು ಗುರುಗಳ ನಡುವೆ ಕ್ಷುದ್ರಗ್ರಹವನ್ನು ಕಂಡುಹಿಡಿದಿದ್ದಕ್ಕಾಗಿ ಪಶ್ಚಿಮ ಗೋದಾವರಿಯ ಮಾಧ್ಯಮಿಕ ಶಾಲಾ ವಿದ್ಯಾರ್ಥಿನಿ ಕುಂಚಲ ಕೈವಲ್ಯ ರೆಡ್ಡಿಗೆ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅಭಿನಂದಿಸಿದ್ದಾರೆ. ಮಂಗಳ ಹಾಗೂ ಗುರು ಗ್ರಹಗಳ ಮಧ್ಯೆ ಕ್ಷುದ್ರಗ್ರಹ ಇರುವುದನ್ನು ಪತ್ತೆ ಮಾಡಿದ್ದಕ್ಕಾಗಿ ನಾಸಾದಿಂದ ಮಾನ್ಯತೆ ಪಡೆದ ಸಂಸ್ಥೆಯಾದ ಅಂತರರಾಷ್ಟ್ರೀಯ ಖಗೋಳ ಶೋಧ ಸಹಯೋಗ ಕುಂಚಲ ಕೈವಲ್ಯ ರೆಡ್ಡಿ … Continued

ಖಾಸಗಿ ಶಿಕ್ಷಕರ ಬೃಹತ್ ಪ್ರತಿಭಟನೆ: ವಿದ್ಯಾರ್ಥಿಗಳ ಪೋಷಕರಿಗೆ ಆತಂಕ

ಬೆಂಗಳೂರು: ಬೋಧನಾ ಶುಲ್ಕದಲ್ಲಿ ಶೇ.೩೦ರಷ್ಟು ಕಡಿತ ಸೇರಿದಂತೆ ಇತರ ಬೇಡಿಕೆಗಳ ಕುರಿತು ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯು ವಿದ್ಯಾರ್ಥಿಗಳ ಪೋಷಕರಿಗೆ ಕೊರೊನಾ ಆತಂಕ ಮೂಡಿಸಿದೆ. ಸಹಸ್ರಾರು ಸಂಖ್ಯೆಯಲ್ಲಿ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಫ್ರೀಡಂ ಪಾರ್ಕ್‌ನಲ್ಲಿ ಸೇರಿ ಬೃಹತ್‌ ರ್ಯಾಲಿ ನಡೆಸಿದ್ದಾರೆ. ಆದರೆ ಕೊವಿಡ್‌-೧೯ ಸೋಂಕು ಹರಡುವ ಸಾಧ್ಯತೆ ಹೆಚ್ಚಿಸಿರುವುದು ಮಕ್ಕಳ ಪಾಲಕರಿಗೆ ಆತಂಕ … Continued

ಪಂಚ ರಾಜ್ಯಗಳಿಗೆ ಚುನಾವಣೆ ದಿನಾಂಕ ಪ್ರಕಟ: ಪಶ್ಚಿಮ ಬಂಗಾಳದಲ್ಲಿ ೮ಹಂತ, ಅಸ್ಸಾಂನಲ್ಲಿ 3ಹಂತ, ತಮಿಳುನಾಡು- ಕೇರಳ, ಪುದುಚೇರಿಯಲ್ಲಿ ಒಂದೇ ಹಂತದ ಚುನಾವಣೆ

ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಅಸ್ಸಾಂ ಚುನಾವಣೆ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮೂರು ಹಂತಗಳಲ್ಲಿ ನಡೆಯಲಿದ್ದು, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏ.೬ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕೇರಳದ ಮಲಪ್ಪುರಂ … Continued

ಇದು ಕೇವಲ ಟ್ರೈಲರ್’ .. ಅಂಬಾನಿ ನಿವಾಸದ ಬಳಿ ನಿಲ್ಲಿಸಿದ್ದ ಎಸ್‌ಯುವಿ ಕಾರಿನ ಬ್ಯಾಗ್‌ನಲ್ಲಿ ಪತ್ತೆಯಾದ ಪತ್ರದಲ್ಲಿದ್ದ ಎಚ್ಚರಿಕೆ

ಮುಂಬೈ: ಮುಖೇಶ್ ಅಂಬಾನಿಯ ನಿವಾಸ ಆಂಟಿಲಿಯಾ ಬಳಿ ಎಸ್‌ಯುವಿಯಿಂದ ವಶಪಡಿಸಿಕೊಂಡ 20 ಜೆಲೆಟಿನ್ ಸ್ಟಿಕ್‌ಗಳ ಜೊತೆಗೆ, ರಿಲಯನ್ಸ್ ಇಂಡಸ್ಟ್ರಿಗಳ ಒಡೆತನದ ಫ್ರ್ಯಾಂಚೈಸ್ ಕ್ರಿಕೆಟ್ ತಂಡವಾದ ಮುಂಬೈ ಇಂಡಿಯನ್ಸ್‌ನ ಚೀಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಖೇಶ್ ಮತ್ತು ನೀತಾ ಅಂಬಾನಿ ಅವರನ್ನು ಉದ್ದೇಶಿಸಿ ಬೆದರಿಕೆ ಪತ್ರವನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. “ಇದು ಕೇವಲ ಟ್ರೈಲರ್ ಆಗಿದ್ದು, ಮುಂದಿನ ಬಾರಿ … Continued

ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಅವಧಿ ವಿಸ್ತರಣೆ

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಮಾರ್ಚ್ 31ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರಸ್ತುತ ಶಾಲಾ-ಕಾಲೇಜು ಪುನರಾರಂಭದ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ಪಾಸಿನ ಆಧಾರದಲ್ಲಿಯೇ ಪ್ರಯಾಣಿಸಲು ಫೆ.28ರ ವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಮತ್ತಷ್ಟು ಕಾಲಾವಕಾಶ … Continued

ಬಿಎಂಟಿಸಿ ಮಾಸಿಕ ಪಾಸ್‌ ವಿತರಣೆ

ಬೆಂಗಳೂರು: ಬಿಎಂಟಿಸಿ ರಿಯಾಯ್ತಿ ದರದಲ್ಲಿ ಮಾಸಿಕ ಪಾಸ್‍ಗಳ ವಿತರಣೆ ಆರಂಭಿಸಿದೆ. ಮಾರ್ಚ್ ತಿಂಗಳ ಪಾಸುಗಳನ್ನು 65 ಸ್ಥಳಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಾಗಿದೆ ಎಂದು ತಿಳಿಸಲಾಗಿದೆ. ನಗರದ ಎಲ್ಲಾ 200 ಬೆಂಗಳೂರು ಒನ್ ಕೇಂದ್ರಗಳಲ್ಲಿ 17 ಸ್ಥಳಗಳಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಹಾಗೂ ಪಾಸ್ ಕೌಂಟರ್ ಲಭ್ಯವಿಲ್ಲದ 12 ಬಸ್ ನಿಲ್ದಾಣಗಳಲ್ಲಿ ಸಾರಥಿ ವಾಹನಗಳ ಮೂಲಕ ಮೂಲಕ … Continued

ಕೆಸ್ಸಾರ್ಟಿಸಿ ಪಾರ್ಸಲ್‌-‌ ಕಾರ್ಗೊ ಸೇವೆಗೆ ಸಿಎಂ ಬಿಎಸ್‌ವೈ ಚಾಲನೆ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪಾರ್ಸಲ್ ಕಾರ್ಗೊ ಸೇವೆ ಮತ್ತು ಕೆಎಸ್‍ಆರ್‍ಟಿಸಿ, ಕಿದ್ವಾಯಿ, ರೋಟರಿ ಸಹಯೋಗದೊಂದಿಗೆ ನಿರ್ಮಿಸಿರುವ ಮೊಬೈಲ್ ರಕ್ತದಾನದ ಬಸ್ಸನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಉದ್ಘಾಟಿಸಿದರು. ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಕಾರ್ಗೊ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಆದಾಯ ಕಂಡುಕೊಂಡಿರುವುದು … Continued

ಮಹಿಳಾ ಐಪಿಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ತಮಿಳುನಾಡು ಡಿಜಿಪಿ ಅಮಾನತು

ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಿಜಿಪಿ ಮಟ್ಟದ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ತಮಿಳುನಾಡಿನ ವಿಶೇಷ ಪೊಲೀಸ್ ಮಹಾನಿರ್ದೇಶಕ ರಾಜೇಶ್ ದಾಸ್ ಅಮಾನತುಗೊಂಡ ಅಧಿಕಾರಿ. ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಹಿಳಾ ಐಪಿಎಸ್ ಅಧಿಕಾರಿಯನ್ನು ವಿಶೇಷ ಡಿಜಿಪಿ ರಾಜೇಶ್‍ದಾಸ್ ಅವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು … Continued

ಆರೋಗ್ಯ ಸಚಿವರಿಗೆ ಹೈಕೋರ್ಟ್ ನೊಟೀಸ್‌

ಬೆಂಗಳೂರು: ಬೆಂಗಳೂರು ನಗರದಲ್ಲಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ಕರೆಯಲಾಗಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದುಪಡಿಸಿದ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಭಾರತ್‌ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿದ್ದ ಪಿಐಎಲ್‌ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ … Continued

ಇಂಥ ಪಿಚ್‌ಗಳಲ್ಲಿ ಬೌಲಿಂಗ್‌ ಮಾಡಿದ್ದರೆ ಕುಂಬ್ಳೆ-ಹರಭಜನ್‌ ೧೦೦೦, ೮೦೦ವಿಕೆಟ್‌ ಪಡೆಯುತ್ತಿದ್ದರು: ಚರ್ಚೆಗೆ ಗ್ರಾಸವಾದ ಯುವರಾಜ್‌ ಟ್ವೀಟ್‌

ಭಾರತ- ಇಂಗ್ಲೆಂಡ್ ಕ್ರಿಕೆಟ್‌ ಸರಣಿಯಲ್ಲಿ ಪಿಚ್‌ಗಳ ಸುತ್ತ ಚರ್ಚೆಯು ಸಾಯುವಂತೆ ಕಾಣುತ್ತಿಲ್ಲ. ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಕೆಲವು ಮಾಜಿ ಇಂಗ್ಲೆಂಡ್ ಕ್ರಿಕೆಟಿಗರು ಚೆನ್ನೈ ಪಿಚ್ ಮೇಲೆ ಟೀಕೆ-ಟಪ್ಪಣಿ ಮಾಡಿದ ನಂತರ ಈಗ ಭಾರತ ತಂಡದ ನಿವೃತ್ತ ಆಟಗಾರ ಯುವರಾಜ್ ಸಿಂಗ್ ಅವರಂತಹ ಕೆಲವು ಪ್ರಸಿದ್ಧ ಮಾಜಿ ಕ್ರಿಕೆಟಿಗರು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ … Continued